For Quick Alerts
  ALLOW NOTIFICATIONS  
  For Daily Alerts

  ನಟ ದಿಲೀಪ್ ಕುಮಾರ್ ಆರೋಗ್ಯ ವರದಿ: ವೈದ್ಯರು ಹೇಳಿದ್ದೇನು?

  |

  ಬಾಲಿವುಡ್ ದಿಗ್ಗಜ ಕಲಾವಿದ ದಿಲೀಪ್ ಕುಮಾರ್ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿಲೀಪ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

  ಉಸಿರಾಟದಲ್ಲಿ ತೊಂದರೆ ಉಂಟಾದ ಕಾರಣ ದಿಲೀಪ್ ಕುಮಾರ್ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ, ಆಕ್ಸಿಜನ್ ಬೆಂಬಲದಿಂದ ಉಸಿರಾಡುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದಿದೆ.

  ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್ ಕುಮಾರ್ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್ ಕುಮಾರ್

  ವೈದ್ಯರು ಹೇಳಿರುವ ಪ್ರಕಾರ ಇನ್ನು ಮೂರು ಅಥವಾ ನಾಲ್ಕು ದಿನ ದಿಲೀಪ್ ಕುಮಾರ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಬೇಕಿದೆ. 98 ವರ್ಷದ ದಿಲೀಪ್ ಕುಮಾರ್ ಕೊರೊನಾ ಭೀತಿ ಹಿನ್ನೆಲೆ ಪತ್ನಿ ಸಾಯಿರಾ ಬಾನು ಜೊತೆ ಕ್ವಾರಂಟೈನ್‌ನಲ್ಲಿದ್ದರು. ಆದರೆ, ವಯೋಸಹಜ ಸಮಸ್ಯೆಗಳು ಅವರನ್ನು ಆಗಾಗ ಕಾಡುತ್ತಲೇ ಇದೆ.

  ಭಾನುವಾರ ಆಸ್ಪತ್ರೆಗೆ ದಾಖಲು

  ಭಾನುವಾರ (ಜೂನ್ 6) ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾದರು. ವೆಂಟಿಲೇಟರ್‌ನಲ್ಲಿದ್ದರು ಎಂದು ತಿಳಿದ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ನಂತರ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಡಿಸ್ಚಾರ್ಜ್ ಮಾಡಲಾಗುತ್ತದೆ ಎಂಬ ವಿಷಯ ಸಮಾಧಾನ ತಂದಿತ್ತು.

  1998ರ ಬಳಿಕ ಸಿನಿಮಾದಲ್ಲಿ ನಟಿಸಿಲ್ಲ.

  ತಿಯೊಬ್ಬ ರಾಜಕಾರಣಿಗೂ ಚಪ್ಪಲಿಯಲ್ಲಿ ಹೊಡಿಬೇಕು ಅಂದ್ರು ಗುರುಪ್ರಸಾದ್

  'ಮುಘಲ್-ಎ-ಅಜಮ್', 'ರಾಮ್ ಔರ್ ಶ್ಯಾಮ್', 'ಕೋಹಿನೂರ್' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸಫ್ ಖಾನ್.

  English summary
  Legendary veteran actor Dilip Kumar is stable and likely to be discharged within 3-4 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X