ಹಿರಿಯ ನಟ ದಿಲೀಪ್ ಕುಮಾರ್ ಮತ್ತೆ ಆಸ್ಪತ್ರೆಗೆ ದಾಖಲು: ICU ನಲ್ಲಿ ಚಿಕಿತ್ಸೆ
ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಬೆಳಗ್ಗೆ ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಜೂನ್ ತಿಂಗಳಲ್ಲಿ ನಟ ದಿಲೀಪ್ ಕುಮಾರ್ 2ನೇ ಬಾರಿಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಹಿರಿಯ ನಟ ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ. "ದಿಲೀಪ್ ಕುಮಾರ್ ಅವರನ್ನು ಮಂಗಳವಾರ ಆಸ್ಪತ್ರೆಗೆ ಕರೆದುಕೊಂಡು ಬಂದರು. ಕಳೆದ ಬಾರಿಯಾದ ಸಮಸ್ಯೆ ಮತ್ತೆಯಾದ ಕಾರಣ ಅವರನ್ನು ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ. ಅವರ ಅರೋಗ್ಯದ ಮೇಲೆ ನಿಗಾವಹಿಸಿದ್ದು, ಅವರ ಸ್ಥಿರವಾಗಿದೆ. ಆತಂಕ ಪಡಬೇಕಾಗಿಲ್ಲ" ಎಂದು ಹೇಳಿದ್ದಾರೆ.
98 ವರ್ಷದ ನಟ ದಿಲೀಪ್ ಕುಮಾರ್ ಅವರನ್ನು ಇದೇ ತಿಂಗಳು ಪ್ರಾರಂಭದಲ್ಲಿ ಅಂತರೆ ಜೂನ್ 6ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಜೂನ್ 11ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಕೊರೊನಾ ಭೀತಿಯ ಹಿನ್ನಲೆ ಪತ್ನಿ ಸಾಹೀರಾ ಬಾನು ಜೊತೆ ಕ್ವಾರಂಟೈನ್ ನಲ್ಲಿದ್ದರು. ಆದರೆ ವಯೋಸಹಜ ಕಾಯಿಲೆಗಳು ಹಿರಿಯ ನಟನನ್ನು ಆಗಾಗ ಕಾಡುತ್ತಿದ್ದು, ಪದೇ ಪದೇ ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತಿದೆ.
'ಮುಘಲ್-ಎ-ಅಜಮ್', 'ರಾಮ್ ಔರ್ ಶ್ಯಾಮ್', 'ಕೋಹಿನೂರ್' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸಫ್ ಖಾನ್.


Click it and Unblock the Notifications











