ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆಸ್ಪತ್ರೆಯಿಂದ ಡಿಸ್ಚಾರ್ಜ್

ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೆಲ ತಿಂಗಳ ಹಿಂದೆ ನಟ ದಿಲೀಪ್​ ಕುಮಾರ್ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಅವರ​ ಪತ್ನಿ ಸೈರಾ ಬಾನು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಸೈರಾ ಬಾನು ಕಳೆದ ವಾರ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸೈರಾ ಬಾನು ಅವರನ್ನು ಹಿಂದುಜಾ ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರ ಕುಟುಂಬದ ಆಪ್ತರಾದ ಫೈಸಲ್ ಫಾರೂಕಿ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. "ಸೈರಾ ಬಾನು ಜೀ ಮನೆೆಗೆ ಮರಳಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು"

ಇತ್ತೀಚಿಗಷ್ಟೆ ಸೈರಾ ಬಾನು ಪ್ರೀತಿಯ ಪತಿ ದಿಲೀಪ್ ಕುಮಾರ್ ಅವರನ್ನು ಕಳೆದುಕೊಂಡಿದ್ದರು. ಪತಿಯ ಅಗಲಿಕೆಯ ನೋವಿನಲ್ಲಿದ್ದ ಸೈರಾ ಈಗ ದಿಢೀರ್ ಆಸ್ಪತ್ರೆಗೆ ದಾಖಲಾಗಿರುವುದು ಸ್ನೇಹಿತರಲ್ಲಿ ಆತಂಕ ಮನೆ ಮಾಡಿತ್ತು. ನಟ ದಿಲೀಪ್ ಕುಮಾರ್ ವಯೋಸಹಜ ಕಾಯಿಲೆಯಿಂದ ಜುಲೈ 7ರಂದು ನಿಧನ ಹೊಂದಿದರು. 98 ವರ್ಷದ ನಟ ದಿಲೀಪ್ ಅನಾರೋಗ್ಯದ ಕಾರಣ ಆಗಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 7ರಂದು ಕೊನೆಯುಸಿರೆಳೆದರು. ಸೈರಾ ಬಾನು ಮತ್ತು ದಿಲೀಪ್ ಇಬ್ಬರದ್ದು ಪ್ರೇಮ ವಿವಾಹ. ಇಬ್ಬರೂ ಮದುವೆಯಾಗಿ 54 ವರ್ಷಗಳು ಕಳೆದಿವೆ. ಇಬ್ಬರ ಪ್ರೇಮ ಕಥೆ ಬಾಲಿವುಡ್ ನಲ್ಲಿ ಮರೆಯಲಾಗದ ಪ್ರೇಮಕಥೆಯಾಗಿದೆ.

Dilip Kumar wife Saira Banu discharge from hospital

ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ದಿಲೀಪ್ ಕುಮಾರ್ ಮೂಲ ಹೆಸರು ದಿಲೀಪ್​ ಕುಮಾರ್​ ಅಲ್ಲ. ದಿಲೀಪ್ ಕುಮಾರ್ ಮೂಲತಃ ಪಾಕಿಸ್ತಾನದಲ್ಲಿರುವ ಪೇಶಾವರದವರು. 1922ರಲ್ಲಿ ಜನಿಸಿದ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್​ ಯೂಸೂಫ್​ ಖಾನ್​. ಆದರೆ ಚಿತ್ರರಂಗಕ್ಕೆ ಬರುವಾಗ ಅವರು ದಿಲೀಪ್​ ಕುಮಾರ್​ ಎಂದು ಹೆಸರು ಬದಲಾಯಿಸಿಕೊಂಡರು. 1944ರಲ್ಲಿ ತೆರೆಕಂಡ 'ಜ್ವಾರ್​ ಭಾಟ' ದಿಲೀಪ್​ ನಟನೆಯ ಮೊದಲ ಸಿನಿಮಾ. ಆ ಚಿತ್ರದ ನಿರ್ಮಾಪಕಿ ದೇವಿಕಾ ರಾಣಿ ಅವರು ಯೂಸೂಫ್​ ಖಾನ್​ಗೆ ಹೆಸರು ಬದಲಾಯಿಸಿಕೊಳ್ಳುವ ಸಲಹೆ ನೀಡಿ ದಿಲೀಪ್ ಕುಮಾಪ್ ಎಂದು ಮರು ನಾಮಕರಣ ಮಾಡಿದರು.

ಮೊದಲ ಸಿನಿಮಾವೇ 'ಜ್ವಾರ್​ ಭಾಟಾ'ದಿಂದ ದಿಲೀಪ್​ ಕುಮಾರ್​ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದಿಲೀಪ್​ ಅಭಿನಯ ನೋಡಿ ಹಾಡಿಹೊಗಳಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಶಕದಲ್ಲಿ ದಿಲೀಪ್​ ಕುಮಾರ್​ ಸ್ಟಾರ್​ ಆದರು. ಎರಡನೇ ದಶಕದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚಿದರು. ದೇವದಾಸ್​, ನಯಾ ದೌರ್​, ಮಧುಮತಿ, ಕೊಹಿನೂರ್​, ಮುಘಲ್​-ಏ-ಆಜಮ್​ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ದಿಲೀಪ್​ ಕುಮಾರ್​ ನಟಿಸಿದರು. 1998ರಲ್ಲಿ ತೆರೆಕಂಡ 'ಖಿಲಾ' ದಿಲೀಪ್​ ನಟನೆಯ ಕೊನೆಯ ಸಿನಿಮಾ. ಬಳಿಕ ದಿಲೀಪ್ ತೆರೆಮೇಲೆ ಮಿಂಚಿಲ್ಲ.

More from Filmibeat

English summary
Bollywood Actor Dilip Kumar wife saira banu discharge from hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X