ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಸಿರಾಟದಲ್ಲಿ ತೊಂದರೆ ಉಂಟಾಗಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿರುವ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇಂದು (ಜೂನ್ 11) ಡಿಸ್ಚಾರ್ಜ್ ಆಗಲಿದ್ದಾರೆ. ನಟನಿಗೆ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶ ಶಾಸ್ತ್ರಜ್ಞ ಡಾ.ಜಲಿಲ್ ಪಾರ್ಕರ್ ಈ ಸುದ್ದಿಯನ್ನು ಖಚಿತಪಡಿಸಿದರು.
98 ವರ್ಷದ ದಿಗ್ಗಜ ನಟನನ್ನು ಭಾನುವಾರ (ಜೂನ್ 6) ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದಲ್ಲಿ ವ್ಯತ್ಯಾಸ ಉಂಟಾಗಿ ದಿಲೀಪ್ ಕುಮಾರ್ ಆರೋಗ್ಯ ಕೆಟ್ಟಿತ್ತು. ಚಿಕಿತ್ಸೆ ಬಳಿಕ ದಿಲೀಪ್ ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದು ವೈದ್ಯರು ತಿಳಿಸಿದರು.
ದಿಲೀಪ್ ಕುಮಾರ್‌ರನ್ನು ಗುರುವಾರ ಬಿಡುಗಡೆ ಮಾಡಲು ವೈದ್ಯರು ನಿರ್ಧರಿಸಿದ್ದರು. ಆದರೆ ಕುಟುಂಬ ಸ್ನೇಹಿತ ಫೈಸಲ್ ಫಾರೂಕಿ ಸಲಹೆ ಮೆರೆಗೆ ಇನ್ನೊಂದು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ನೀಡಲು ತೀರ್ಮಾನಿಸಿದರು ಎಂದು ತಿಳಿದು ಬಂದಿದೆ.

''ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ವಿಶ್ರಾಂತಿಯಷ್ಟೆ ಪಡೆಯುತ್ತಿದ್ದಾರೆ'' ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಭಾನುವಾರ ಆಸ್ಪತ್ರೆಗೆ ದಾಖಲು
ಭಾನುವಾರ (ಜೂನ್ 6) ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾದರು. ವೆಂಟಿಲೇಟರ್‌ನಲ್ಲಿದ್ದರು ಎಂದು ತಿಳಿದ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ನಂತರ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತು.
1998ರ ಬಳಿಕ ಸಿನಿಮಾದಲ್ಲಿ ನಟಿಸಿಲ್ಲ
'ಮುಘಲ್-ಎ-ಅಜಮ್', 'ರಾಮ್ ಔರ್ ಶ್ಯಾಮ್', 'ಕೋಹಿನೂರ್' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸಫ್ ಖಾನ್.


Click it and Unblock the Notifications











