For Quick Alerts
  ALLOW NOTIFICATIONS  
  For Daily Alerts

  ನಟ ದಿಲೀಪ್ ಕುಮಾರ್ ಆರೋಗ್ಯ ಸ್ಥಿತಿ ಚಿಂತಾಜನಕ

  |

  ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಈ ಬಗ್ಗೆ ಅವರ ಪತ್ನಿಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ದಿಲೀಪ್ ಕುಮಾರ್ ಅವರನ್ನು ಭಾರತ ಚಿತ್ರರಂದ ದಂತಕತೆ ಎಂದೇ ಕರೆಯಲಾಗುತ್ತದೆ. ದಿಲೀಪ್ ಅವರಿಗೆ ಈಗ 97 ವರ್ಷ ವಯಸ್ಸಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರ ಬಳಲುತ್ತಿದ್ದಾರೆ.

  ದಿಲೀಪ್ ಬಹಳ ಬಳಲಿದ್ದಾರೆ. ಅವರಿಗೆ ಮನೆಯಲ್ಲಿಯೇ ಓಡಾಡಲು ಸಾಧ್ಯವಾಗುತ್ತಿಲ್ಲ. ದಿಲೀಪ್ ಅವರ ರೋಗನಿರೋಧಕ ಶಕ್ತಿ ಸಹ ಕುಂದಿದೆ. ಅವರ ಆರೋಗ್ಯ ಆತಂಕಕ್ಕೆ ಈಡುಮಾಡಿದೆ ಎಂದಿದ್ದಾರೆ ದಿಲೀಪ್ ಪತ್ನಿ ಸಾಯಿರಾ ಬಾನು.

  ದಿಲೀಪ್ ಕುಮಾರ್ ಅನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದಾಗಿ ಹೇಳಿರುವ ಸಾಯಿರಾ ಬಾನು, ಅಭಿಮಾನಿಗಳ ಪ್ರಾರ್ಥನೆ ಮತ್ತು ಪ್ರೀತಿ ದಿಲೀಪ್ ಕುಮಾರ್ ಗೆ ಈಗ ಬೇಕಾಗಿದೆ ಎಂದಿದ್ದಾರೆ.

  1944 ರಲ್ಲಿ ಜ್ವಾರ್ ಭಾಟಾ ಸಿನಿಮಾದ ಮೂಲದ ವೃತ್ತಿ ಜೀವನ ಆರಂಭಿಸಿದ ದಿಲೀಪ್ ಕುಮಾರ್, ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತೀಯ ಸಿನಿಮಾವನ್ನು ಕಟ್ಟುವಲ್ಲಿ ದಿಲೀಪ್ ಕುಮಾರ್ ಪಾತ್ರ ಮಹತ್ವದ್ದು.

  ದಬಾಂಗ್ ಸಿನಿಮಾ ಹಂಚಿಕೆ ಮಾಡಿದ್ದು ಇವರೇ | Shakeela | Indrajith Lankesh |Filmibeat Kannada

  ಕೆಲವೇ ತಿಂಗಳುಗಳ ಹಿಂದೆ ದಿಲೀಪ್ ಕುಮಾರ್ ಸಹೋದರರಾದ ಅಶಾನ್ ಭಾಯ್ ಹಾಗೂ ಅಸ್ಲಂ ಅವರುಗಳು ನಿಧನ ಹೊಂದಿದರು.

  English summary
  Bollywood actor Dilip Kumar's health is in critical condition. His wife Saira Banu said, Dilip need prayers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X