ಕಂಗನಾ ಜೊತೆ ಜಗಳವಾಡಿ 4 ಲಕ್ಷ ಜನರನ್ನು ಸಂಪಾದಿಸಿದ ದಿಲ್ಜೀತ್!
ಟ್ವಿಟ್ಟರ್‌ನಲ್ಲಿ ಬಾಲಿವುಡ್‌ನ ತಮ್ಮ ಸಹೋದ್ಯೋಗಿಗಳ ಮೇಲೆಯೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವ ಕಂಗನಾ ಗೆ ಹೆಚ್ಚು ಮಂದಿ ತಿರುಗಿ ಉತ್ತರಿಸುವುದಿಲ್ಲ. ಆದರೆ ನಟ ದಿಲ್ಜೀತ್ ದುಸ್ಸಾಂಜ್ ಹೀಗೆ ಮಾಡಲಿಲ್ಲ.
ಕಂಗನಾ ಳ ಮಟ್ಟಕ್ಕೇ ಇಳಿದು ಕಂಗನಾ ಜೊತೆಗೆ ಟ್ವಿಟ್ಟರ್‌ನಲ್ಲಿ ಜಗಳವಾಡಿದ್ದಾರೆ ದಿಲ್ಜಿತ್. ಕಂಗನಾ ರಣೌತ್, ಪಂಜಾಬಿ ರೈತ ಮಹಿಳೆ ಬಗ್ಗೆ ಕೀಳು ಹೇಳಿಕೆ ಕೊಟ್ಟ ನಂತರ ಗರಂ ಆದ ದಿಲ್ಜೀತ್, ಕಂಗನಾ ರನ್ನು ಬೈದು ಟ್ವೀಟ್ ಮಾಡಿದ್ದರು.
ಕಂಗನಾ ಹಾಗೂ ದಿಲ್ಜೀತ್ ನಡುವೆ ಸಾಕಷ್ಟು ಸಮಯ ಟ್ವೀಟ್ ಜಗಳ ನಡೆಯಿತು. ಈ ಟ್ವೀಟ್ ಜಗಳದಿಂದ ದಿಲ್ಜೀತ್‌ಗೆ ಒಳ್ಳೆಯ ಲಾಭವೇ ಆಗಿದೆ.

ಹೌದು, ಕಂಗನಾ ಜೊತೆ ಜಗಳದಲ್ಲಿ ಹೆಚ್ಚು ಮಂದಿ ದಿಲ್ಜೀತ್ ಗೆ ಬೆಂಬಲ ನೀಡಿದ್ದರು. ಇದು ಮಾತ್ರವೇ ಅಲ್ಲದೆ, ಕಂಗನಾ ಜೊತೆ ಜಗಳದ ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದೇ ದಿನ ದಿಲ್ಜೀತ್ ರ ಬೆಂಬಲಿಗರ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದೆ.
ಹಲವು ವರ್ಷಗಳಿಂದ ನಟಿಸುತ್ತಿದ್ದರೂ ದೊಡ್ಡ ನಟನಾಗಿ ಅಥವಾ ಸ್ಟಾರ್ ನಟನಾಗಿ ಗುರುತು ಸಿಕ್ಕಿರಲಿಲ್ಲ ದಿಲ್ಜೀತ್‌ಗೆ. ಆದರೆ ಇದೀಗ ಕಂಗನಾ ಜೊತೆ ಜಗಳದಿಂದ ಸುದ್ದಿಗೆ ಬಂದ ದಿಲ್ಜೀತ್‌ರ ಟ್ವಿಟ್ಟರ್ ಖಾತೆಗೆ ಒಂದೇ ದಿನದಲ್ಲಿ ನಾಲ್ಕು ಲಕ್ಷ ಜನ ಸೇರ್ಪಡೆಗೊಂಡಿದ್ದಾರೆ.
Recommended Video
ಕಂಗನಾ ಜೊತೆಗೆ ಜಗಳಕ್ಕೆ ಮುನ್ನಾ 30 ಲಕ್ಷ ಚಿಲ್ಲರೆ ಇದ್ದ ದಿಲ್ಜೀತ್ ಹಿಂಬಾಲಕರ ಸಂಖ್ಯೆ ಈಗ 43 ಲಕ್ಷ ಬೆಂಬಲಿಗರನ್ನು ದಾಟಿ ಮುಂದೆ ಹೋಗಿದೆ.


Click it and Unblock the Notifications











