ಸಿನಿಮಾ ಸೇರಿಬಿಟ್ಟರೆ ಕ್ರಿಕೆಟಿಗ ದಿನೇಶ್ ಕಾರ್ತಿಕ್? ಜಾನ್ಹವಿ ಜೊತೆ ಏನು ಮಾಡುತ್ತಿದ್ದಾರೆ?

ಸಿನಿಮಾ ಹಾಗೂ ಕ್ರಿಕೆಟ್ ರಂಗ ಪರಸ್ಪರ ಬಹಳ ಹತ್ತಿರ. ಕ್ರಿಕೆಟಿಗರು ಸಿನಿಮಾ ನಟಿಯರನ್ನು ಪ್ರೀತಿಸಿ ವಿವಾಹವಾಗುವುದು ಮೊದಲಿನಿಂದಲೂ ನಡೆದು ಬಂದಿದೆ. ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸುವುದು ಸಹ ಅಪರೂಪವೇನಲ್ಲ.

ಈಗಾಗಲೇ ಕೆಲವು ಕ್ರಿಕೆಟಿಗರು ಸಿನಿಮಾ ರಂಗದಲ್ಲಿ ಒಂದು ಕೈ ನೋಡಿದ್ದಾರೆ. ಅಜಯ್ ಜಡೇಜ, ವಿನೋದ್ ಕಾಂಬ್ಳಿ, ಹರ್ಬಜನ್ ಸಿಂಗ್ ಇನ್ನೂ ಹಲವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸಹ ತಮ್ಮದೇ ಜೀವನದ ಡಾಕ್ಯುಮೆಂಟರಿಯಲ್ಲಿ ನಟಿಸಿದ್ದಾರೆ. ಕಪಿಲ್ ದೇವ್, ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಪಾರ್ಥಿವ್ ಪಟೇಲ್, ಆಶಿಶ್ ನೆಹ್ರಾ, ಮೊಹಮ್ಮದ್ ಕೈಫ್ ಇನ್ನೂ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದೀಗ ಹಾಲಿ ಕ್ರಿಕೆಟಿಗರೊಬ್ಬರು ಸಿನಿಮಾದೊಂದಿಗೆ ನಂಟು ಬೆಳೆಸಿಕೊಳ್ಳುತ್ತಿದ್ದಾರೆ. ಅವರೇ ಕ್ರಿಕೆಟಿಗ ದಿನೇಶ್ ಕಾರ್ತಿಕ್. ಬಾಲಿವುಡ್‌ನ ಯುವನಟಿ ಜಾನ್ಹವಿ ಕಪೂರ್ ಜೊತೆಗೆ ಕಾಣಿಸಿಕೊಂಡಿರುವ ದಿನೇಶ್ ಕಾರ್ತಿಕ್. ಜಾನ್ಹವಿಯ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಬ್ಯಾಟಿಂಗ್ ಹೇಳಿಕೊಡುತ್ತಿದ್ದಾರೆ ದಿನೇಶ್ ಕಾರ್ತಿಕ್

ಬ್ಯಾಟಿಂಗ್ ಹೇಳಿಕೊಡುತ್ತಿದ್ದಾರೆ ದಿನೇಶ್ ಕಾರ್ತಿಕ್

ಜಾನ್ಹವಿ ಕಪೂರ್ 'ಮಿಸ್ಟರ್ ಆಂಡ್ ಮಿಸಸ್ ಮಹಿ' ಹೆಸರಿನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಸಿನಿಮಾಕ್ಕಾಗಿ ತಯಾರಿ ಆರಂಭ ಮಾಡಿದ್ದಾರೆ. ಸಿನಿಮಾದಲ್ಲಿ ಮಹಿಳಾ ಕ್ರಿಕೆಟರ್ ಪಾತ್ರದಲ್ಲಿ ಜಾನ್ಹವಿ ನಟಿಸುತ್ತಿದ್ದು, ಇದಕ್ಕಾಗಿ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಜಾನ್ಹವಿಗೆ ಕ್ರಿಕೆಟ್ ಹೇಳಿಕೊಡುವ ಅದರಲ್ಲೂ ಬ್ಯಾಟಿಂಗ್ ಹೇಳಿಕೊಡುವ ಜವಾಬ್ದಾರಿ ದಿನೇಶ್ ಕಾರ್ತಿಕ್ ಹೆಗಲಿಗೇರಿದೆ.

ಜಾನ್ಹವಿಗೆ ಪಾಠ ಹೇಳಿಕೊಡುತ್ತಿರುವ ದಿನೇಶ್ ಕಾರ್ತಿಕ್

ಜಾನ್ಹವಿಗೆ ಪಾಠ ಹೇಳಿಕೊಡುತ್ತಿರುವ ದಿನೇಶ್ ಕಾರ್ತಿಕ್

ಕ್ರಿಕೆಟ್ ಕ್ಲಬ್ ಒಂದರಲ್ಲಿ ಜಾನ್ಹವಿ ಕಪೂರ್‌ಗೆ ಬ್ಯಾಟಿಂಗ್ ಪಾಠಗಳನ್ನು ದಿನೇಶ್ ಕಾರ್ತಿಕ್ ಮಾಡುತ್ತಿದ್ದಾರೆ. ದಿನೇಶ್ ತಮಗೆ ಬ್ಯಾಟಿಂಗ್ ಪಾಠಗಳನ್ನು ಮಾಡುತ್ತಿರುವ ಕೆಲವು ಚಿತ್ರಗಳನ್ನು ಜಾನ್ಹವಿ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾವು ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮಾಡುತ್ತಿರುವ ಚಿತ್ರವೊಂದನ್ನು ಸಹ ಹಂಚಿಕೊಂಡಿದ್ದಾರೆ. ಜಾನ್ಹವಿ ಹಾಗೂ ಇತರ ಚಿತ್ರತಂಡದ ಜೊತೆ ದಿನೇಶ್ ಕಾರ್ತಿಕ್ ಹರಟೆ ಹೊಡೆಯುತ್ತಿರುವ ಚಿತ್ರವೊಂದನ್ನು ಸಹ ಜಾನ್ಹವಿ ಹಂಚಿಕೊಂಡಿದ್ದಾರೆ.

ರಾಜ್‌ಕುಮಾರ್ ರಾವ್ ಸಹ ನಟಿಸುತ್ತಿದ್ದಾರೆ

ರಾಜ್‌ಕುಮಾರ್ ರಾವ್ ಸಹ ನಟಿಸುತ್ತಿದ್ದಾರೆ

ಜಾನ್ಹವಿ ನಟಿಸುತ್ತಿರುವ 'ಮಿಸ್ಟರ್ ಆಂಡ್ ಮಿಸಸ್ ಮಹಿ' ಸಿನಿಮಾದಲ್ಲಿ ಜಾನ್ಹವಿ ಜೊತೆಗೆ ರಾಜಕುಮಾರ್ ರಾವ್ ಸಹ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪತ್ನಿಯನ್ನು ಕ್ರಿಕೆಟರ್ ಮಾಡಲು ರಾಜಕುಮಾರ್ ರಾವ್ ಪಡುವ ಕಷ್ಟ ಹಾಗೂ ಕ್ರಿಕೆಟರ್ ಆಗಲು ಪತ್ನಿ ಪಡುವ ಕಷ್ಟವನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಈ ಹಿಂದೆ ರಾಜಕುಮಾರ್ ರಾವ್ ಹಾಗೂ ಜಾನ್ಹವಿ ಕಪೂರ್ 'ರೂಹಿ' ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ. 'ಮಿಸ್ಟರ್ ಆಂಡ್ ಮಿಸಸ್ ಮಹಿ' ಸಿನಿಮಾವನ್ನು ಶರಣ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಶರಣ್ ಶರ್ಮಾ, ಜಾನ್ಹವಿ ನಟಿಸಿದ್ದ 'ಗುಂಜನ್ ಸಕ್ಸೇನಾ' ಸಿನಿಮಾ ನಿರ್ದೇಶನ ಮಾಡಿದ್ದರು. 'ಮಿಸ್ಟರ್ ಆಂಡ್ ಮಿಸಸ್ ಮಹಿ' ಸಿನಿಮಾಕ್ಕೆ ಕರಣ್ ಜೋಹರ್ ಬಂಡವಾಳ ಹೂಡಿದ್ದು ಸಿನಿಮಾವು ಅಕ್ಟೋಬರ್ 07, 2022ಕ್ಕೆ ಬಿಡುಗಡೆ ಆಗಲಿದೆ.

ಐವತ್ತಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗಿವೆ

ಐವತ್ತಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗಿವೆ

ಕ್ರಿಕೆಟ್ ಬಗ್ಗೆ ಸಿನಿಮಾ ಮಾಡುವ ಪದ್ಧತಿ ಬಾಲಿವುಡ್‌ನಲ್ಲಿ ಹೆಚ್ಚಾಗುತ್ತಿದೆ. ಕ್ರಿಕೆಟ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದೇ ಕ್ರೀಡೆಯನ್ನು ಮತ್ತೊಂದು ಮನೊರಂಜನಾ ಮಾಧ್ಯಮವಾದ ಸಿನಿಮಾಕ್ಕೆ ತಂದರೆ ಡಬಲ್ ಮನೊರಂಜನೆ ಹಾಗಾಗಿ ಹಿಟ್ ಪಕ್ಕಾ ಎನ್ನುವುದು ಬಾಲಿವುಡ್ಡಿಗರ ನಂಬಿಕೆ. ಈ ವರೆಗೆ ಹಿಂದಿ ಸೇರಿದಂತೆ ಭಾರತ ಇತರ ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಕ್ರಿಕೆಟ್ ಆಧರಿತ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ. 'ಲಗಾನ್', 'ಎಂ.ಎಸ್.ಧೋನಿ: ಅನ್‌ಟೋಲ್ಡ್ ಸ್ಟೋರಿ', '83', 'ಸಚಿನ್ ತೆಂಡೂಲ್ಕರ್: ಅ ಮಿಲಿಯನ್ ಡ್ರೀಮ್', 'ಜೆರ್ಸಿ', 'ಇಕ್ಬಾಲ್', '22 ಯಾರ್ಡ್', 'ಮಜ್ಲಿ', 'ಅಜರ್' ಇನ್ನೂ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ.

More from Filmibeat

English summary
Cricketer Dinesh Karthik teaching actress Janhvi Kapoor batting. Janhvi playing a cricketer role in her upcoming movie 'Mrs And Ms Mahi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X