ನೀರವ್ ಮೋದಿಗಿಂತಲೂ ದೊಡ್ಡ ಹಗರಣ, ನಟ ಡಿನೊ ಮೊರಿಯಾ ಆಸ್ತಿ ಮುಟ್ಟುಗೋಲು

ನಟಿ ರಮ್ಯಾ ಜೊತೆಯಲ್ಲಿ ಕನ್ನಡದ 'ಜೂಲಿ' ಸಿನಿಮಾದಲ್ಲಿ ಹಾಟ್‌ ಆಗಿ ನಟಿಸಿದ್ದ ಬಾಲಿವುಡ್ ನಟ ಡಿನೊ ಮೊರಿಯಾ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ.

ಡಿನೋ ಮೊರಿಯಾ ಮಾತ್ರವೇ ಅಲ್ಲದೆ ಮತ್ತೊಬ್ಬ ನಟ ಸಂಜಯ್ ಖಾನ್, ಡಿಜೆ ಅಖೀಲ್, ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್ ಪಟೇಲ್‌ರ ಅಳಿಯ ಇರ್ಫಾನ್ ಖಾನ್ ಸಿದ್ಧಿಖಿ ಆಸ್ತಿಯನ್ನು ಸಹ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಈ ನಾಲ್ವರು ಸೇರಿ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಆರೋಪದಲ್ಲಿ ಈ ನಾಲ್ವರ ಆಸ್ತಿ ಮುಟ್ಟುಗೋಲು ಹಾಕಲಾಗಿದ್ದು. ಒಟ್ಟು 8.79 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ. ದೊಡ್ಡ ಮಟ್ಟದ ಹಗರಣದಲ್ಲಿ ಈ ನಾಲ್ವರು ಭಾಗಿಯಾಗಿದ್ದರು ಎಂದು ಇಡಿ ಆರೋಪ ಮಾಡಿದೆ.

ಸಂದೆಸ್ಸಾರಾ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣ

ಸಂದೆಸ್ಸಾರಾ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣ

ಗುಜರಾತ್ ಮೂಲದ ಫಾರ್ಮಾಸುಟಿಕಲ್ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. ಸಂದೇಸ್ಸರಾ ಕುಟುಂಬವು ಬ್ಯಾಂಕ್‌ಗೆ ದೊಡ್ಡ ಮೊತ್ತದ ಹಣ ಬಾಕಿ ಉಳಿಸಿಕೊಂಡಿದೆ. ಅದೇ ಪ್ರಕರಣದಲ್ಲಿ ಈ ನಾಲ್ವರು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಯತ್ನ ಮಾಡಿದ್ದಾರೆ ಎಂದು ಇಡಿ ಆರೋಪ ಮಾಡಿದೆ.

ನೀರವ್ ಮೋದಿಯದ್ದಕ್ಕಿಂತಲೂ ದೊಡ್ಡ ಹಗರಣ

ನೀರವ್ ಮೋದಿಯದ್ದಕ್ಕಿಂತಲೂ ದೊಡ್ಡ ಹಗರಣ

14,500 ಕೋಟಿಗೂ ಹೆಚ್ಚು ಮೌಲ್ಯದ ಹಗರಣ ಇದಾಗಿದೆ ಎಂದು ಇಡಿ ಆರೋಪಿಸಿದೆ. ಬ್ಯಾಂಕ್ ಒಂದಕ್ಕೆ ಸಂದೇಸ್ಸರಾ ಕುಟುಂಬದವರು ಇಷ್ಟು ದೊಡ್ಡ ಹಣವನ್ನು ಮೋಸ ಮಾಡಿದ್ದಾರಂತೆ. ಈ ಮೊತ್ತವು ಪಿಎನ್‌ಬಿ ಬ್ಯಾಂಕ್ ಹಗರಣದ ರುವಾರಿ ನೀರವ್‌ ಮೋದಿ ಮಾಡಿದ್ದಕ್ಕಿಂತಲೂ ದೊಡ್ಡ ಹಗರಣ ಇದಾಗಿದೆ. ನೀರವ್ ಮೋದಿಯದ್ದು 11,400 ಕೋಟಿ ಹಗರಣವಾಗಿದೆ.

ಡಿನೊ ಮೊರಿಯಾಗೆ ಸೇರಿದ 1.40 ಕೋಟಿ ಆಸ್ತಿ

ಡಿನೊ ಮೊರಿಯಾಗೆ ಸೇರಿದ 1.40 ಕೋಟಿ ಆಸ್ತಿ

ಇಡಿ ಹೇಳಿರುವಂತೆ, ಡಿನೊ ಮೊರಿಯಾಗೆ ಸೇರಿದ 1.40 ಕೋಟಿ ಆಸ್ತಿ, ಸಂಜಯ್ ಖಾನ್‌ನ 3 ಕೋಟಿ ಆಸ್ತಿ, ಡಿಜೆ ಅಕೀಲ್‌ಗೆ ಸೇರಿದ 1.90 ಕೋಟಿ, ಅಹ್ಮದ್ ಪಟೇಲ್ ಅಳಿಯ ಇರ್ಫಾನ್‌ ಸಿದ್ಧಿಖಿಯ 2.41 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಇಡಿ. ಬ್ಯಾಂಕ್ ಖಾತೆಗಳು, ದುಬಾರಿ ವಾಹನಗಳು, ಶೇರ್‌ ಹಾಗೂ ಮ್ಯೂಚ್ಯುಲ್ ಫಂಡ್‌ಗಳು ಆಸ್ತಿಯಲ್ಲಿ ಸೇರಿವೆ.

Recommended Video

ಜಗ್ಗೇಶ Tweet ಡಿಲೀಟ್ ಮಾಡಿ ಗೊಂದಲ ಸೃಷ್ಟಿ ಮಾಡಿದ್ರಾ! | Jaggesh Son Car Accident | Filmibeat Kannada
ಸಂದೆಸ್ಸಾರ ಕುಟುಂಬ ಸದಸ್ಯರಿಂದ ನಾಲ್ವರ ಖಾತೆಗೆ ಹಣ

ಸಂದೆಸ್ಸಾರ ಕುಟುಂಬ ಸದಸ್ಯರಿಂದ ನಾಲ್ವರ ಖಾತೆಗೆ ಹಣ

ಬ್ಯಾಂಕ್‌ನಿಂದ ಭಾರಿ ದೊಡ್ಡ ಮೊತ್ತದ ಹಣ ಪಡೆದಿದ್ದ ಸಂದೆಸ್ಸಾರ ಕುಟುಂಬ ಆ ಹಣವನ್ನು ಈ ನಾಲ್ವರ ಖಾತೆಗಳಿಗೆ ವರ್ಗಾವಣೆ ಮಾಡಿತ್ತು. 2011-12 ರಲ್ಲಿ ನಟ ಡಿನೊ ಮೊರಿಯಾ ಹಾಗೂ ಸಂಜಯ್ ಖಾನ್ ಖಾತೆಗಳಿಗೆ ಸಂದೆಸ್ಸಾರಾ ಕುಟುಂಬದವರ ಖಾತೆಗಳಿಂದ ಕೋಟ್ಯಂತರ ಹಣ ಜಮಾವಣೆ ಆಗಿತ್ತು ಎಂದಿದೆ ಇಡಿ.

More from Filmibeat

English summary
Actor Dino Marea and three others assets were seized by enforcement directorate. These four people allegedly involved in 14,500 cr money laundering case of Sandesara family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X