'ರಾ-ಒನ್' ಚಿತ್ರದ ನಿರ್ದೇಶಕನ ಮೊದಲ ಸಂಬಳ 80 ರೂಪಾಯಿ!
ಸೆಲೆಬ್ರಿಟಿಗಳ ಮೊದಲ ವೇತನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಟ್ವಿಟ್ಟರ್‌ನಲ್ಲಿ ಮೊದಲ ವೇತನದ ಹ್ಯಾಷ್‌ಟ್ಯಾಗ್ #firstsalary ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದೆ.
ಈ ವಿಶೇಷವಾಗಿ ಬಾಲಿವುಡ್ ನಿರ್ದೇಶಕ ಹಾಗೂ ಇತರೆ ಸೆಲೆಬ್ರಿಟಿಗಳು ತಮ್ಮ ಮೊದಲ ವೇತನದ ಕುರಿತು ಬಹಿರಂಗಪಡಿಸಿದ್ದಾರೆ. ಶಾರೂಖ್ ಖಾನ್ ನಟನೆಯ ರಾ ಒನ್ ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಅವರ ಮೊದಲ ವೇತನ 80 ರೂಪಾಯಿಯಂತೆ.
ತಾವು 18ನೇ ವಯಸ್ಸಿನಲ್ಲಿರುವಾಗ ತಮ್ಮ ಮೊದಲ ವೇತನ ಪಡೆದಿದ್ದು, 80 ರೂಪಾಯಿ ಎಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಟೂಷನ್ ಮಾಡಿ 80 ರೂಪಾಯಿ ಪಡೆಯುತ್ತಿದ್ದಂತೆ. ಇದರಿಂದ ಬಂದ ಹಣದಿಂದ ಸಿಗರೇಟ್‌ಗೆ ಖರೀದಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಸಹ ತಮ್ಮ ಮೊದಲ ವೇತನ ಕುರಿತು ಮಾಹಿತಿ ನೀಡಿದ್ದು, 450 ರೂಪಾಯಿ ಮೊದಲ ಸಂಬಳ ಪಡೆದುಕೊಂಡಿದ್ದರಂತೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆ ಬಟ್ಟೆ ಮಾರಾಟ ಮಾಡುವ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರಂತೆ.
ಚಿತ್ರ ಸಾಹಿತಿ, ಸಂಭಾಷಣೆಕಾರ ಪುನೀತ್ ಶರ್ಮಾ ಸಹ ತಮ್ಮ ಮೊದಲ ವೇತನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬ್ರೋಡ್‌ವೇದಂತಹ ನಾಟಕ್ಕೆ ಸಾಹಿತ್ಯ ಬರೆದ ಕಾರಣ 10 ಸಾವಿರ ಸಂಬಳ ಪಡೆದುಕೊಂಡಿದ್ದರಂತೆ.

ಸ್ಟಾರ್ಸ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ರೀನಾ ಅವರ ಮೊದಲ ವೇತನ 250 ರೂಪಾಯಿ ಎಂದು ಹೇಳಿದ್ದಾರೆ.


Click it and Unblock the Notifications











