ಹಂದಿ ಮಾಂಸದ ಜೊತೆ ಸೌದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಅನುರಾಗ್: ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ನಿರ್ದೇಶಕ

By ಫಿಲ್ಮಿಬೀಟ್ ಡೆಸ್ಕ್

ನಿರ್ದೇಶಕ ಅನುರಾಗ್ ಕಶ್ಯಪ್ ಬಾಲಿವುಡ್‌ನ ಇತರೆ ನಿರ್ದೇಶಕರಿಗೆ ಬಹಳ ಭಿನ್ನ. ಸಿನಿಮಾ ಮೇಕಿಂಗ್‌ನಲ್ಲಿ ಮಾತ್ರವಲ್ಲ ವ್ಯಕ್ತಿತ್ವದಲ್ಲಿಯೂ.

ಅನುರಾಗ್ ಕಶ್ಯಪ್ ನಿರ್ದೇಶನದ ಹೊಸ ಸಿನಿಮಾ 'ಆಲ್‌ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಾರ್ಥ ಸರಣಿ ಸಂದರ್ಶನಗಳನ್ನು ಅನುರಾಗ್ ನೀಡುತ್ತಿದ್ದಾರೆ.

ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಕುರಿತು ಹಲವು ಅಪರೂಪದ ವಿಷಯಗಳನ್ನು ಅನುರಾಗ್ ಕಶ್ಯಪ್ ಹೇಳಿಕೊಂಡಿದ್ದು, ಸೌದಿ ಅರೆಬಿಯಾನಲ್ಲಿ ತಾವೊಮ್ಮೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಸಂಗತಿಯನ್ನು ಸಹ ಬಿಚ್ಚಿಟ್ಟಿದ್ದಾರೆ.

Director Anurag Kashyap About Being Arrested In Saudi Arabia

ನಾನು ಡೆನ್‌ಮಾರ್ಕ್‌ಗೆ ಹೋಗಬೇಕಿತ್ತು ಆದರೆ ಅಲ್ಲಿ ಜ್ವಾಲಾಮುಖಿ ಹೊಗೆಯಿಂದಾಗಿ ಪ್ಲೈಟ್‌ಗಳು ತಡವಾಗಿದ್ದವು. ನಾನು ಏರ್‌ಪೋರ್ಟ್‌ನಲ್ಲಿಯೇ ಚೆನ್ನಾಗಿ ಕುಡಿದು ಕನೆಕ್ಟಿಂಗ್ ಫ್ಲೈಟ್ ಹತ್ತಿ ಸೌದಿಗೆ ಹೋದೆ. ಅಲ್ಲಿ ಕುಡಿದು ಓಡಾಡತೊಡಗಿದೆ. ಅಲ್ಲಿನ ಪೊಲೀಸರು ನನ್ನನ್ನು ಬಂಧಿಸಿದರು'' ಎಂದು ಅನುರಾಗ್ ಹೇಳಿದ್ದಾರೆ.

''ನಾನು ವಿಪರೀತ ಕುಡಿದಿದ್ದೆ. ಅಲ್ಲದೆ ನನ್ನ ಬಳಿ ಹಂದಿ ಮಾಂಸದ ತಿನಿಸು ಬೇರೆ ಇತ್ತು. ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಪುಣ್ಯಕ್ಕೆ ನನ್ನ ಬಳಿ ನನ್ನ ಫೋನ್ ಇತ್ತು, ಕೂಡಲೇ ನಾನು ಸಹಾಯಕ್ಕಾಗಿ ರೂನಿ ಸ್ಕ್ರೀವಾಲಾಗೆ ಮೆಸೇಜ್ ಮಾಡಿದೆ. ಹಲವು ಪ್ರಶ್ನೋತ್ತರಗಳ ಬಳಿಕ ಕೊನೆಗೆ ನನ್ನನ್ನು ಮುಂದಿನ ಫ್ಲೈಟ್‌ನಲ್ಲಿ ಅಲ್ಲಿಂದ ಕಳಿಸಿಕೊಟ್ಟರು'' ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಇಸ್ಲಾಮಿಕ್ ದೇಶವಾದ ಸೌದಿಯಲ್ಲಿ ಕುಡಿತ ಹಾಗೂ ಹಂದಿ ಮಾಂಸ ನಿಷಿದ್ಧ. ಕುಡಿದು ಹಂದಿ ಮಾಂಸ ಹೊಂದಿದ್ದ ಅನುರಾಗ್ ಕಶ್ಯಪ್ ಅನ್ನು ಇದೇ ಕಾರಣಕ್ಕೆ ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಅನುರಾಗ್ ಕಶ್ಯಪ್, ಬಾಲಿವುಡ್‌ನ ಭಿನ್ನ ನಿರ್ದೇಶಕ ಅವರ 'ಗ್ಯಾಂಗ್ಸ್ ಆಫ್ ವಸೇಪುರ್' ಕಲ್ಟ್ ಕ್ಲಾಸಿಕ್ ಎಂದು ಹೆಸರಾಗಿದೆ. ನಿಜ ಜೀವನದ ಆಧರಿತ ಕತೆಗಳನ್ನು ತಮ್ಮ ಸಿನಿಮಾಗಳಲ್ಲಿ ತೋರಿಸುತ್ತಾ ಬಂದಿದ್ದಾರೆ ಅನುರಾಗ್. ಹಲವು ಹೊಸ ತಲೆಮಾರಿನ ನಿರ್ದೇಶಕರಿಗೆ ಸ್ಪೂರ್ತಿಯೂ ಆಗಿದ್ದಾರೆ. ಇದೀಗ 'ಆಲ್‌ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಸಿನಿಮಾವು ಮಾಡರ್ನ್ ಪ್ರೇಮದ ಕುರಿತಾದ ಕತೆಯಾಗಿದ್ದು, ಸಿನಿಮಾದಲ್ಲಿ ಆಲಿಯಾ ಎಫ್ ಹಾಗೂ ಹೊಸ ನಟ ಕರಣ್ ಮೆಹ್ತಾ ನಟಿಸಿದ್ದಾರೆ.

More from Filmibeat

English summary
Director Anurag Kashyap about being arrested in Saudi Arabia after drunk and having pork. His new film Almost Pyar With DJ Mohabbath releasing soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X