ಪತ್ನಿಯ ಆಸ್ಪತ್ರೆ ಬಿಲ್ 30 ಲಕ್ಷ! ಸಹಾಯ ಮಾಡಿ ಎಂದ ನಿರ್ದೇಶಕ

ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಡಿಸ್ಕೊ ಡ್ಯಾನ್ಸರ್' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಬಬ್ಬರ್ ಸುಭಾಷ್ ಇದೀಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದ ಸುಭಾಷ್ ಕೋವಿಡ್ ಬಳಿಕ ಭಾರಿ ನಷ್ಟಗಳನ್ನು ಅನುಭವಿಸಿದರು. ಸ್ವತಃ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಸುಭಾಷ್ ಆ ನಂತರ ಪತ್ನಿಯ ಅನಾರೋಗ್ಯದಿಂದಾಗಿ ಪೂರ್ಣ ದಿವಾಳಿಯಾಗಿದ್ದಾರೆ. ಇದೀಗ ಚಿತ್ರರಂಗದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಸುಭಾಷ್‌ರ ಪತ್ನಿ ತಿಲೋತ್ತಿಮಾ, ಕಳೆದ ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಐದು ವರ್ಷದ ಹಿಂದೆಯೂ ಅವರಿಗೆ ಅನಾರೋಗ್ಯವುಂಟಾಗಿತ್ತು. ಆಗ ಸಲ್ಮಾನ್ ಖಾನ್ ಸಹಾಯ ಮಾಡಿದ್ದರು. ಈಗ ಮತ್ತೆ ತೀವ್ರ ಅನಾರೋಗ್ಯ ಕಾಡುತ್ತಿದ್ದು, ಮತ್ತೆ ಸಿನಿಮಾ ಸೆಲೆಬ್ರಿಟಿಗಳ ಬಳಿ ಸುಭಾಷ್ ಕೈಚಾಚಿದ್ದಾರೆ.

Director Babbar Subhash Seek Help For His Wifes Treatment

ತಿಲೋತ್ತಿಮ ಅವರಿಗೆ ಎರಡು ಕಿಡ್ನಿಗಳು ವಿಫಲವಾಗಿದ್ದವು. ಸುಭಾಷ್ ಅವರು ತಮ್ಮ ಒಂದು ಕಿಡ್ನಿ ನೀಡಲು ಸಜ್ಜಾದರು, ಆದರೆ ಕೆಲವು ಪರೀಕ್ಷೆಗಳನ್ನು ಮಾಡಿದ ವೈದ್ಯರು ತಿಲೋತ್ತಿಮ ಅವರಿಗೆ ಶ್ವಾಸಕೋಶದ ಸಮಸ್ಯೆ ಇರುವುದು ಪತ್ತೆ ಹಚ್ಚಿದರು. ಶ್ವಾಸಕೋಶದ ಸಮಸ್ಯೆ ಇರುವ ಕಾರಣ ಕಿಡ್ನಿ ಟ್ರಾನ್ಸ್‌ಫಾರ್ಮೆಂಟ್ ಮಾಡಲು ಆಗುವುದಿಲ್ಲವೆಂದು ಅದಕ್ಕೆ ಬೇರೆಯದೇ ಚಿಕಿತ್ಸೆಯ ಅಗತ್ಯವಿದೆಯೆಂದು ಹೇಳಿದರು. ಇಷ್ಟೆಲ್ಲ ಆಗುವಷ್ಟರಲ್ಲಿ ಆಸ್ಪತ್ರೆಯ ಬಿಲ್ ಬರೋಬ್ಬರಿ 30 ಲಕ್ಷ ದಾಟಿತ್ತು.

''ನಾವು ಕುಟುಂಬ ಸದಸ್ಯರು ಎಲ್ಲಡೆಯಿಂದ ಹಣ ಒಗ್ಗೂಡಿಸಲು ಯತ್ನಿಸುತ್ತಿದ್ದೇವೆ. ನನ್ನ ಮಗಳು ಸಾರ್ವಜನಿಕ ಸಹಾಯ ಸಂಸ್ಥೆಯಾಗಿ ಕೀಟೊ ಬಳಿಯೂ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸಿನಿಮಾ ರಂಗದ ಕೆಲವರನ್ನು ಸಹ ನಾವು ಸಹಾಯಕ್ಕೆ ಕೇಳಿದ್ದೇವೆ'' ಎಂದಿದ್ದಾರೆ ಸುಭಾಷ್.

ಜೂಹಿ ಚಾವ್ಲಾ, ಸಲ್ಮಾನ್ ಖಾನ್, ಡಿಂಪಲ್ ಕಪಾಡಿಯಾ, ಭೂಷಣ್ ಕುಮಾರ್, ಅನಿಲ್ ಕಪೂರ್, ಮಿಥುನ್ ಚಕ್ರವರ್ತಿ, ರತನ್ ಜೈನ್ ಇನ್ನೂ ಮೊದಲಾದವರು ನಮಗೆ ಸಹಾಯ ಮಾಡಿದ್ದಾರೆ. ಜೊತೆಗೆ ನಿರ್ಮಾಪಕರ ಸಂಘ ಸಹ ನಮಗೆ ಸಹಾಯ ಮಾಡಿದೆ. ಚಿತ್ರರಂಗ ನೀಡಿದ ಸಹಾಯಕ್ಕೆ ನಾನು ಧನ್ಯನಾಗಿದ್ದೇನೆ. ಇಂದು ಸಹ ಒಬ್ಬ ವಿತರಕ ನನಗೆ ಸಹಾಯ ಮಾಡಿದ್ದಾರೆ. ನನ್ನ ಪತ್ನಿ ಸಂಪೂರ್ಣವಾಗಿ ಗುಣವಾಗಲು ಇನ್ನಷ್ಟು ನೆರವಿನ ಅಗತ್ಯವಿದೆ, ಚಿತ್ರರಂಗದ ಒಳಗಿನವರು ಹಾಗೂ ಹೊರಗಿನವರು ಇನ್ನಷ್ಟು ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಸುಭಾಷ್ ಹೇಳಿದ್ದಾರೆ.

ಬಬ್ಬರ್ ಸುಭಾಷ್, 1978ರಲ್ಲಿ ಹೇಮಾಮಾಲಿನಿ, ದಿವಂಗತ ರಿಶಿ ಕಪೂರ್ ನಟನೆಯ 'ಅಪ್ನಾ ಕೂನ್' ಸಿನಿಮಾದಿಂದ ನಿರ್ದೇಶನ ಆರಂಭಿಸಿದವರು. ಆ ಬಳಿಕ 'ತಕ್ದೀರ್‌ ಕಾ ಬಾದ್‌ಶಾ', 'ಕಸಂ ಪೈದಾ ಕರ್ನೇ ವಾಲೇ ಕಿ', 'ಅಡ್ವೇಂಚರ್ ಆಫ್ ಟಾರ್ಜನ್', 'ಡ್ಯಾನ್ಸ್-ಡ್ಯಾನ್ಸ್', 'ಡಿಸ್ಕೋ ಡ್ಯಾನ್ಸರ್' ಸೇರಿದಂತೆ ಮಿಥುನ್ ಚಕ್ರವರ್ತಿ ಜೊತೆಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅಮೀರ್ ಖಾನ್, ಜೂಹಿ ಚಾವ್ಲಾ ನಟನೆಯ 'ಲವ್ ಲವ್ ಲವ್' ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ ಬಿ ಸುಭಾಷ್.

More from Filmibeat

English summary
Bollywood movie director Babbar Subhash seek help for his wife's treatment. Subhash said wife's hospital bill is 30 lakh rs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X