For Quick Alerts
  ALLOW NOTIFICATIONS  
  For Daily Alerts

  ಕಾಲ್‌ಶೀಟ್‌ಗಾಗಿ ಶಾರುಖ್‌ ಮನೆ ಮುಂದೆ ಬೀಡು ಬಿಟ್ಟ ಕನ್ನಡದ ನಿರ್ದೇಶಕ

  |

  ಶಾರುಖ್ ಖಾನ್‌ ಜೊತೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡಿರುವ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಶಾರುಖ್ ಖಾನ್ ರ ಮುಂಬೈನ ಮನೆ ಮುಂದೆ ನಾಲ್ಕು ದಿನಗಳಿಂದಲೂ ಬೀಡು ಬಿಟ್ಟಿದ್ದಾರೆ.

  ಹೌದು, ಈಗಾಗಲೇ 96 ಸಿನಿಮಾ ನಿರ್ದೇಶಿಸಿರುವ ಹಾಗೂ ಕಥಾಸಂಗಮದ 'ಗಿರ್‌ಗಿಟ್ಲೆ' ಕತೆ ಬರೆದಿರುವ ಜಯಂತ್ ಸೀಗೆ ಅವರು ಶಾರುಖ್ ಖಾನ್‌ ಗಾಗಿ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದು, ಶಾರುಖ್ ಖಾನ್ ಗೆ ಕತೆ ಹೇಳಬೇಕೆಂದು ಕೆಲವು ದಿನ ಶಾರುಖ್ ಖಾನ್ ಮನೆಯ ಮುಂದೆ ಬೋರ್ಡ್ ಹಿಡಿದು ನಿಂತಿದ್ದರು.

  ಡಿಸೆಂಬರ್ 31 ರಿಂದಲೂ ಶಾರುಖ್ ಖಾನ್ ಮನೆಯ ಮುಂದೆ ಬೋರ್ಡ್ ಹಿಡಿದುಕೊಂಡು ಶಾರುಖ್ ಖಾನ್ ಗಮನ ಸೆಳೆಯಲು ಯತ್ನಿಸಿದ್ದಾರೆ ಜಯಂತ್ ಸೀಗೆ. ಜನವರಿ ತಿಂಗಳ ಮೊದಲ ವಾರ ಮುಂಬೈನಲ್ಲಿಯೇ ಇದ್ದು, ಶಾರುಖ್ ಖಾನ್ ಮನೆ 'ಮನ್ನತ್‌' ನ ಮುಂದೆ ಬೋರ್ಡ್ ಹಿಡಿದು ನಿಂತಿದ್ದ ಜಯಂತ್ ಮೊದಲ ವಾರದ ಅಂತ್ಯಕ್ಕೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

  ಶಾರುಖ್ ಮನೆ ಮುಂದೆ ಪೋಸ್ಟರ್

  ಶಾರುಖ್ ಮನೆ ಮುಂದೆ ಪೋಸ್ಟರ್

  'ಪ್ರಾಜೆಕ್ಟ್ ಎಕ್ಸ್' ಹೆಸರಿನ ಕತೆಯನ್ನು ಶಾರುಖ್ ಖಾನ್‌ ಗಾಗಿ ಜಯಂತ್ ಸೀಗೆ ತಯಾರು ಮಾಡಿಕೊಂಡಿದ್ದು, ಶಾರುಖ್ ಖಾನ್ ಬೈಕ್‌ ಮೇಲೆ ಕೂತಿರುವ ಪೋಸ್ಟರ್ ಒಂದನ್ನು ಸಹ ರೆಡಿ ಮಾಡಿಕೊಂಡು ಅದನ್ನೂ ಶಾರುಖ್ ಖಾನ್ ಮನೆಯ ಮುಂದೆ ಇಟ್ಟಿದ್ದಾರೆ ಜಯಂತ್.

  ನನಗೆ ತೃಪ್ತಿ ಇದೆ ಎಂದ ಜಯಂತ್

  ನನಗೆ ತೃಪ್ತಿ ಇದೆ ಎಂದ ಜಯಂತ್

  ನಾಲ್ಕು ದಿನ ಶಾರುಖ್ ಖಾನ್ ಮನೆಯ ಮುಂದೆ ನಿಂತರೂ ಶಾರುಖ್ ಖಾನ್‌ ಅವರ ಗಮನ ಜಯಂತ್ ಮೇಲೆ ಬಿದ್ದಿಲ್ಲ. ಆದರೆ ಹಲವಾರು ಮಂದಿ ಜಯಂತ್ ಬಳಿ ಮಾತನಾಡಿ ಅವರು ಮಾಡಿಕೊಂಡಿರುವ ಕತೆ ಕೇಳಿದರಂತೆ. ಇದೇ ನನಗೆ ತೃಪ್ತಿ ನೀಡಿದೆ ಎಂದಿದ್ದಾರೆ ಜಯಂತ್.

  ವೈರಲ್ ಆಗಿದೆ ಜಯಂತ್ ಸೀಗೆ ಚಿತ್ರಗಳು

  ವೈರಲ್ ಆಗಿದೆ ಜಯಂತ್ ಸೀಗೆ ಚಿತ್ರಗಳು

  ಜಯಂತ್ ಸೀಗೆ ಅವರ ಈ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜಯಂತ್ ಸೀಗೆ ಅವರು ಬೋರ್ಡ್ ಹಿಡಿದು ಶಾರುಖ್ ಅವರ ಮನ್ನತ್ ಮುಂದೆ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ

  ಇನ್ನು ನಟ ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಧೂಮ್ 4 ನಲ್ಲಿ ನಟಿಸಲಿದ್ದಾರೆ ಶಾರುಖ್. ಆ ನಂತರ ತಮಿಳು ನಿರ್ದೇಶಕ ಅಟ್ಟಿಲಿಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ನಂತರ ಡಾನ್ 3 ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

  English summary
  Kannada director and movie writer Jayant Seege camped outside Shah Rukh Khan's house to pitch movie story to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X