twitter
    For Quick Alerts
    ALLOW NOTIFICATIONS  
    For Daily Alerts

    ಆಲಿಯಾ ಅಥವಾ ರಣಬೀರ್‌ಗಿಂತ ಒಳ್ಳೆಯ ನಟರನ್ನು ತೋರಿಸಿ ಎಂದು ಸವಾಲು ಹಾಕಿದ ನಿರ್ದೇಶಕ

    |

    ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ತಿಂಗಳು ಕಳೆದರೂ ಅವರ ಸಾವಿನ ಸುತ್ತ ನಡೆಯುತ್ತಿರುವ ಸ್ವಜನಪಕ್ಷಪಾತದ ಚರ್ಚೆಯ ಕಾವು ತಗ್ಗಿಲ್ಲ. ಬಾಲಿವುಡ್‌ನಲ್ಲಿ ನೆಪೋಟಿಸಂ ಇದೆ ಎಂದು ಚಿತ್ರರಂಗದಲ್ಲಿರುವರಲ್ಲೇ ಕೆಲವರು ಆರೋಪಿಸುತ್ತಿದ್ದರೆ, ಇನ್ನು ಅನೇಕರು ಅದೆಲ್ಲ ಸುಳ್ಳಿನ ಕಂತೆ ಎನ್ನುತ್ತಿದ್ದಾರೆ.

    Recommended Video

    ಹೊಸ ಟ್ಯಾಲೆಂಟ್ ಗೆ ಅಪ್ಪು ಅಣ್ಣ ಅವಕಾಶ ಕೊಡ್ತಾರೆ | Law | Ragini | Filmibeat Kannada

    ಆಲಿಯಾ ಭಟ್ ಮತ್ತು ಜಾಹ್ನವಿ ಕಪೂರ್ ನಟನೆಯ 'ಸಡಕ್ 2' ಮತ್ತು 'ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಚಿತ್ರಗಳು ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ತೆರೆಕಾಣಲು ಸಿದ್ಧವಾಗುತ್ತಿವೆ. ಸೋನಾಕ್ಷಿ ಸಿನ್ಹಾ ಅವರ ಹೊಸ ಚಿತ್ರದ ಲುಕ್ ಬಿಡುಗಡೆಯಾಗಿದೆ. ಆದರೆ ಈ ಚಿತ್ರಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಮುಂದೆ ಓದಿ.

    ಸ್ವಜನಪಕ್ಷಪಾತದ ಹೋರಾಟ: ಕಂಗನಾ ರಣಾವತ್ ಬೆಂಬಲಕ್ಕೆ ಬಂದ ಮಾಜಿ ಪ್ರಿಯಕರಸ್ವಜನಪಕ್ಷಪಾತದ ಹೋರಾಟ: ಕಂಗನಾ ರಣಾವತ್ ಬೆಂಬಲಕ್ಕೆ ಬಂದ ಮಾಜಿ ಪ್ರಿಯಕರ

    ಚರ್ಚೆಗೆ ಸಿದ್ಧ

    ಚರ್ಚೆಗೆ ಸಿದ್ಧ

    ಈ ಮಧ್ಯೆ ನಿರ್ದೇಶಕ ಆರ್ ಬಾಲ್ಕಿ ಸ್ವಜನಪಕ್ಷಪಾತದ ಚರ್ಚೆ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಈ ವಿಚಾರವಾಗಿ ಯಾವುದೇ ಚರ್ಚೆಗೂ ಸಿದ್ಧ ಎಂದಿರುವ ಅವರು, ಸ್ಟಾರ್ ಕಿಡ್ ಎಂದು ಕರೆಯಲಾಗುತ್ತಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗಿಂತ ಉತ್ತಮ ನಟರನ್ನು ತೋರಿಸುವಂತೆ ಸವಾಲು ಹಾಕಿದ್ದಾರೆ.

    ಮೂರ್ಖತನದ ವಾದ

    ಮೂರ್ಖತನದ ವಾದ

    'ಇದು ಎಲ್ಲ ಕಡೆಯೂ ನಡೆಯುತ್ತದೆ ಎಂಬುದನ್ನು ನಿರಾಕರಿಸಲಾಗದು. ಮಹೀಂದ್ರಾಸ್, ಅಂಬಾನಿಗಳು, ಬಜಾಜ್‌ಗಳ ಬಗ್ಗೆ ಯೋಚಿಸಿ. ಅವರ ಅಪ್ಪ ಅವರಿಗೆ ಉದ್ಯಮವನ್ನು ವರ್ಗಾಯಿಸಿದರು. ಅದಕ್ಕೆ ಯಾರಾದರೂ, 'ಇಲ್ಲ, ಮುಕೇಶ್ ಅಂಬಾನಿ ಈ ಉದ್ಯಮವನ್ನು ನಡೆಸಬಾರದು. ಬೇರೊಬ್ಬರು ನಡೆಸಲಿ ಎಂದು ಹೇಳಿದ್ದಾರೆಯೇ? ಸಮಾಜದ ಪ್ರತಿ ಭಾಗದಲ್ಲಿಯೂ ಇದು ನಡೆಯುತ್ತದೆ. ಚಾಲಕ, ತರಕಾರಿ ಮಾರುವವನು ಕೂಡ ತಮ್ಮ ಕೆಲಸವನ್ನು ಮಕ್ಕಳಿಗೆ ವರ್ಗಾಯಿಸುತ್ತಾರೆ. ಹೀಗಾಗಿ ಇದು ಮೂರ್ಖತನದ ವಾದ. ನಾವು ಮುಕ್ತ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ನೆನಪಿಡಿ' ಎಂದು ಹೇಳಿದ್ದಾರೆ.

    ಮಹೇಶ್ ಭಟ್ ಹೊಸಬರಿಗೆ ಅವಕಾಶ ನೀಡುವುದು ಏಕೆ ಗೊತ್ತೇ?: ಕಂಗನಾ ನೀಡಿದ ವಿವರಣೆಮಹೇಶ್ ಭಟ್ ಹೊಸಬರಿಗೆ ಅವಕಾಶ ನೀಡುವುದು ಏಕೆ ಗೊತ್ತೇ?: ಕಂಗನಾ ನೀಡಿದ ವಿವರಣೆ

    ಉತ್ತಮ ನಟರನ್ನು ತೋರಿಸಿ

    ಉತ್ತಮ ನಟರನ್ನು ತೋರಿಸಿ

    'ಸ್ಟಾರ್‌ಗಳ ಮಕ್ಕಳು ನೋಡಲು ಚೆನ್ನಾಗಿಲ್ಲವೇ ಅಥವಾ ಅವರಿಗೆ ಹೆಚ್ಚಿನ ಲಾಭಗಳಿವೆಯೇ? ಹೌದು ಇಲ್ಲಿಯೂ ಪರ ವಿರೋಧಗಳಿರುತ್ತವೆ. ಆದರೆ ನಾನು ಸರಳವಾದ ಪ್ರಶ್ನೆಯೊಂದನ್ನು ಕೇಳುತ್ತೇನೆ. ನನಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗಿಂತ ಉತ್ತಮ ನಟರನ್ನು ತೋರಿಸಿಕೊಡಿ. ನಂತರ ವಾದಿಸೋಣ. ಕೆಲವು ಅತ್ಯುತ್ತಮ ನಟರಾಗಿರುವ ಈ ಜನರ ಮೇಲೆ ರೀತಿ ಆರೋಪಿಸುವುದು ನ್ಯಾಯವಲ್ಲ' ಎಂದಿದ್ದಾರೆ.

    ಹೊರಗಿನವರಿಗೆ ಕಷ್ಟ ಇರುವುದು ಹೌದು

    ಹೊರಗಿನವರಿಗೆ ಕಷ್ಟ ಇರುವುದು ಹೌದು

    ಯಾವುದೇ ಪ್ರತಿಭೆ ಇಲ್ಲದ ನಟರನ್ನು ನೋಡಲು ಪ್ರೇಕ್ಷಕರು ಕೂಡ ಬಯಸುವುದಿಲ್ಲ. ಆದರೆ ಪ್ರತಿಭೆ ಇರುವ ಸ್ಟಾರ್ ಮಕ್ಕಳನ್ನು ತೆರೆಯ ಮೇಲೆ ನೋಡಲು ಇಷ್ಟಪಡುತ್ತಾರೆ ಎಂದಿರುವ ಬಾಲ್ಕಿ, ಹೊರಗಿನಂದ ಬರುವವರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಕಷ್ಟಪಡಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

    ನಾನೂ ಸ್ವಜನಪಕ್ಷಪಾತದ ಬಲಿಪಶು ಎಂದ ಸೈಫ್ ಅಲಿ ಖಾನ್ನಾನೂ ಸ್ವಜನಪಕ್ಷಪಾತದ ಬಲಿಪಶು ಎಂದ ಸೈಫ್ ಅಲಿ ಖಾನ್

    English summary
    Filmaker R Balki sadi debate on nepotism is a foolish arguement and asked find me a better actor than Alia or Ranbir.
    Saturday, July 18, 2020, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X