For Quick Alerts
  ALLOW NOTIFICATIONS  
  For Daily Alerts

  ದಾದಾಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ 'ಜಂಗಲ್ ಕ್ರೈ'; ಕರ್ನಾಟಕಕ್ಕೆ ಇರುವ ಲಿಂಕ್ ಏನು?

  |

  2021ರ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಿಂದಿಯ ಜಂಗಲ್ ಕ್ರೈ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ದಾದಾಸಾಹೇಬ್ ಫಾಲ್ಕೆ ಜನ್ಮದಿನದಂದು ಈ ಚಿತ್ರೋತ್ಸವ ನಡೆಸಲಾಗುತ್ತೆ. ಜಂಗಲ್ ಕ್ರೈ ಬುಡಕಟ್ಟು ಜನಾಂಗದ ಅನಾಥ ಮಕ್ಕಳ ಜೀವನದ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಒಡಿಸ್ಸಾದ ಸೋಷಿಯಲ್ ಸೈನ್ಸ್ ಸಂಸ್ಥೆಯ ಆದಿವಾಸಿ ಮಕ್ಕಳು ಯುಕೆನಲ್ಲಿ ನಡೆದ ರಗ್ಬಿ ಆಟದಲ್ಲಿ ಚಾಂಪಿಯನ್ ಆದ ಘಟನೆಯನ್ನು ಆಧರಿಸಿ ಜಂಗಲ್ ಕ್ರೈ ಸಿನಿಮಾ ಮಾಡಲಾಗಿದೆ.

  ಜಂಗಲ್ ಕ್ರೈ ಸಿನಿಮಾವನ್ನು ಕರ್ನಾಟಕದ ಹಾವೇರಿ ಮೂಲದ ಸಾಗರ ಬಳ್ಳಾರಿ ಎನ್ನುವವರು ನಿರ್ದೇಶನ ಮಾಡಿದ್ದಾರೆ ಎನ್ನುವುದು ವಿಶೇಷ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಸಾಗರ ಬಳ್ಳಾರಿ ಅವರಿಗೆ ಪ್ರಶಸ್ತಿ ಬಂದಿರುವುದು ಹುಟ್ಟೂರು ಮೋಟೆಬೆನ್ನೂರಿನಲ್ಲಿ ಸಂಭ್ರಮ ಮನೆ ಮಾಡಿದೆ.

  'ಜಂಗಲ್ ಕ್ರೈ' ಚಿತ್ರ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೀಗ ಮತ್ತೊಂದು ಗರಿ ಬಂದಿರುವುದು ಮೋಟೆಬೆನ್ನೂರಿಗೆ ಹೆಮ್ಮೆ ತಂದಿದೆ. ಸಿನಿಮಾದ ಬಗ್ಗೆ ಅಪಾರ ಕನಸು ಕಂಡಿರುವ ಸಾಗರ್ ಬಳ್ಳಾರಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ನಾಲ್ಕೈದು ಸಿನಿಮಾಗಳನ್ನು ಮಾಡುವ ಮೂಲಕ ಸಾಗರ್ ಬಳ್ಳಾರಿ ಬಾಲಿವುಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಾಗರ್ ಅವರಿಗೆ ಹುಟ್ಟೂರು ಮೋಟೆಬೆನ್ನೂರು ಎಂದರೆ ಎಲ್ಲಿಲ್ಲದ ಪ್ರೀತಿ. ಮುಂಬೈನಲ್ಲಿ ನೆಲೆಸಿದ್ದರೂ ವರ್ಷಕೊಮ್ಮೆಯಾದರೂ ಮೋಟೆಬೆನ್ನೂರಿಗ ಭೇಟಿಕೊಡುತ್ತಾರೆ.

  ವರನಟ ಡಾ.ರಾಜ್ ಕುಮಾರ್ ಹೆಸರಲ್ಲಿ ದೊಡ್ಡ ಎಡವಟ್ಟು ಮಾಡಿದ ಗೂಗಲ್!! | Filmibeat Kannada

  ಮುಂಬೈನಲ್ಲೇ ವಿದ್ಯಾಭ್ಯಾಸ ಮಾಡಿರುವ ಸಾಗರ ಬಳ್ಳಾರಿ ಸತ್ಯಜಿತ್ ರೇ ಇನ್ಸಿಟ್ಯೂಟ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಗರ ಸಾಧನೆ ಬಗ್ಗೆ ಅವರ ಸೋದರ ಸಂಬಂಧಿ ರಮೇಶ್ ಬಳ್ಳಾರಿ ಆಂಗ್ಲ ವೆಬ್ ಪೋರ್ಲ್ ಜೊತೆ ಮಾತನಾಡಿ, "ಸಾಗರ ತುಂಬಾ ಶ್ರಮ ಜೀವಿ. ತನ್ನ ಕನಸನ್ನು ನನಸು ಮಾಡಿದ್ದಾನೆ. ಮೋಟೆಬೆನ್ನೂರಿನ ಬಗ್ಗೆ ಅಪಾರವಾದ ಪ್ರೀತಿ ಇದೆ. ಮತ್ತು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ಮೋಟೆಬೆನ್ನೂರಿಗೆ ವರ್ಷಕ್ಕೆ ಒಮ್ಮೆಯಾದರೂ ಬಂದೇ ಬರುತ್ತಾರೆ" ಎಂದಿದ್ದಾರೆ.

  English summary
  Haveri based Director Sagar Bellary's Jungle Cry movie won best film Dadasaheb Phalke International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X