'ಭಲೇ ಬಾಲಕ' ವೈಭವ್ ಸೂರ್ಯವಂಶಿಗೆ ಸಿನಿಮಾ ಅವಕಾಶ; ಖ್ಯಾತ ನಿರ್ದೇಶಕನ ಟ್ವೀಟ್ ವೈರಲ್

ಸದ್ಯ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿಗಿಂತ 15ರ ಹುಡುಗ ವೈಭವ್ ಸೂರ್ಯವಂಶಿ ಹೆಸರು ಜೋರಾಗಿ ಸದ್ದು ಮಾಡ್ತಿದೆ. ಐಪಿಎಲ್ ಟೂರ್ನಿಯಲ್ಲಿ ಈ ಬಾಲಕ ಸಾಧನೆ ಎಲ್ಲರ ಹುಬ್ಬೇರಿಸಿದೆ. ಘಟಾನುಘಟಿ ಬೌಲರ್‌ಗಳನ್ನು ದಂಡಿಸಿ ವಿಶ್ವದಾಖಲೆ ಬರೆಯುತ್ತಿದ್ದಾನೆ. ಐಪಿಲ್ ಟೂರ್ನಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾನೆ.

ಬಿಹಾರ ಮೂಲದ ಬಾಲಕ ವೈಭವನ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡುತ್ತಿದ್ದಾನೆ. ಐಪಿಎಲ್ 2026 ಟೂರ್ನಿಗೆ ತೆರೆಗೆ ಬಿದ್ದಿದೆ. 'ಆರೆಂಜ್ ಕ್ಯಾಪ್' ಗೆದ್ದಿರುವ ಈ ಬಾಲಕ ಒಂದೇ ಟೂರ್ನಿಯಲ್ಲಿ 5 ಪ್ರಶಸ್ತಿಗಳನ್ನು ಬೇಟೆ ಆಡಿದ್ದಾನೆ. ಈಗಾಗಲೇ ಕೆಲ ಜಾಹೀರಾತುಗಳಲ್ಲಿ ಭಲೇ ಬಾಲಕ ಕಮಾಲ್ ಮಾಡುತ್ತಿದ್ದಾರೆ. ಈ ಪೋರನ ಮೇಲೆ ಇದೀಗ ಬಾಲಿವುಡ್ ಮಂದಿ ಕಣ್ಣು ಬಿದ್ದಿದೆ.

Director Shekhar Kapur Says Vaibhav Suryavanshi Would Have Been Perfect for Masoom

ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿ ಬೊಬ್ಬಿರಿಯುವ ವೈಭವ್ ತನ್ನ ಅಮಾಯಕತೆ, ಸಹಜ ವ್ಯಕ್ತಿತ್ವದಿಂದ ಸಾಕಷ್ಟು ಜನರ ಮನಗೆದ್ದಿದ್ದಾನೆ. ಪಂದ್ಯಕ್ಕೂ ಮುನ್ನ ಒತ್ತಡ ಕಮ್ಮಿ ಮಾಡಿಕೊಳ್ಳಲು ಕಾರ್ಟೂನ್ ನೋಡ್ತೀನಿ, ಇದರಿಂದ ಮನಸ್ಸು ಶಾಂತವಾಗಿ ಆಟದ ಮೇಲೆ ಗಮನ ಇರುತ್ತೆ, ಐಸ್‌ಕ್ರೀಮ್ ತಿನ್ನುವುದನ್ನು ಇಷ್ಟಪಡುವುದಾಗಿ ಹೇಳಿಕೊಳ್ಳುತ್ತಾನೆ. ಹೀಗೆ ತನ್ನ ಸರಳ, ಅಮಾಯಕ ಮಾತುಗಳಿಂದಲೂ ಇಷ್ಟವಾಗುತ್ತಿದ್ದಾನೆ.

ಭಾರತದಲ್ಲಿ ಸಿನಿಮಾ ಹಾಗೂ ಕ್ರಿಕೆಟ್ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಕ್ರಿಕೆಟ್ ತಾರೆಯರು ಬಣ್ಣ ಹಚ್ಚಿ ಜಾಹೀರಾತು, ಸಿನಿಮಾಗಳಲ್ಲಿ ನಟಿಸುವುದನ್ನು ನೋಡಿದ್ದೀವಿ. ಇನ್ನು ವೈಭವ್ ರೋಚಕ ಆಟಕ್ಕೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಗ್‌ಬಿ ಅಮಿತಾಬ್ ಟ್ವೀಟ್ ಮಾಡಿ "ಸೂರ್ಯವಂಶಿ - 15 ವರ್ಷದ ಅದ್ಭುತ ಸೂರ್ಯ.. ಈ ವಯಸ್ಸಿನಲ್ಲಿ, ನಮಗೆ ಗೋಲಿ ಅಥವಾ ಗಿಲ್ಲಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿಲಿಲ್ಲ" ಎಂದು ಬರೆದುಕೊಂಡಿದ್ದರು.

ಇದೀಗ ಬಾಲಿವುಡ್ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. 'ಮಿ. ಇಂಡಿಯಾ', 'ಬಂಡಿತ್ ಕ್ವೀನ್' ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ಶೇಖರ್ ಸದ್ಯ ವೈಭವ್ ಬಗ್ಗೆ ಕಾಮೆಂಟ್ ಮಾಡಿರುವುದು ಗಮನ ಸೆಳೆದಿದೆ. 'ಮಾಸೂಮ್' ಎಂಬ ಚಿತ್ರವನ್ನು ಸದ್ಯ ಅವರು ಕಟ್ಟಿಕೊಡುತ್ತಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿರುವ ಶೇಖರ್ "ಸೂರ್ಯವಂಶಿ ಇಷ್ಟೊಂದು ಸೆನ್ಸೇಷನಲ್ ಕ್ರಿಕೆಟಿಗ ಆಗಿದೇ ಇದ್ದಿದ್ರೆ, ನಾನು ಅವನನ್ನು 'ಮಾಸೂಮ್' ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ" ಎಂದಿದ್ದಾರೆ. ಇಂತಹ ಭಾವೋದ್ವೇಗ ಚಿತ್ರಕ್ಕೆ ಆತ ಸೂಕ್ತ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಶೇಖರ್ ಕಪೂರ್ ಟ್ವೀಟ್‌ಗೆ ಸಾಕಷ್ಟು ಜನ ರಿಪ್ಲೇ ಮಾಡಿದ್ದಾರೆ. ಹೌದು, ವೈಭವ್ ಬಹಳ ಕ್ಯೂಟ್, ಅಮಾಯಕ. ನೀವು ಅವನನ್ನು ಸಿನಿಮಾ ಚಿತ್ರಕ್ಕೆ ಆಯ್ಕೆ ಮಾಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈಗ ಕೂಡ ನೀವು ಅವನನ್ನು ಸಿನಿಮಾ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬಹುದು, ಕಾಲ ಮಿಂಚಿಲ್ಲ. ಕೊಂಚ ಕ್ರಿಕೆಟ್ ಅಂಶಗಳನ್ನು ಚಿತ್ರಕ್ಕೆ ಸೇರಿಸಿದರೆ ಇನ್ನು ಚೆನ್ನಾಗಿರುತ್ತೆ" ಎಂದು ಮತ್ತೊಂದು ರಿಪ್ಲೇ ಮಾಡಿದ್ದಾರೆ.

12 ವರ್ಷ 284 ದಿನಗಳ ವಯಸ್ಸಿನಲ್ಲಿ ಸೂರ್ಯವಂಶಿ ರಣಜಿ ಪಂದ್ಯಗಳಲ್ಲಿ ಆಡಲು ಶುರು ಮಾಡಿದ್ದ. ಐಪಿಎಲ್ 2025ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಈತನನ್ನು ಖರೀದಿಸಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ ಸಿಡಿಸಿ ಸಂಚಲನ ಸೃಷ್ಟಿಸಿದ್ದ. ಇನ್ನು ಈ ಬಾರಿ ಐಪಿಎಲ್‌ನಲ್ಲಿ ವೈಭವ್ ಸಾಧನೆ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ.

Read more about: actor hindi film industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X