For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಸಿನಿಮಾ ನಿರ್ದೇಶಕನಿಗೆ ಸೆಟ್‌ನಲ್ಲೇ ಕಪಾಳಮೋಕ್ಷ!

  |

  ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ.

  ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಸಹಾಯಕ ನಿರ್ದೇಶಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಬಾಲಿವುಡ್ ಹಂಗಾಮ ಹಾಗೂ ಇನ್ನೂ ಕೆಲವು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ.

  ಸಿದ್ಧಾರ್ಥ್ ಆನಂದ್ ತುಸು ಸಿಟ್ಟಿನ ವ್ಯಕ್ತಿಯಾಗಿದ್ದು, ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬ ಸೂಕ್ತವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಸಹಾಯಕನ ಕಪಾಳಕ್ಕೆ ಹೊಡೆದಿದ್ದದಾರೆ. ಕೂಡಲೇ ಸಿಟ್ಟಿಗೆದ್ದ ಸಹಾಯಕ ತಿರುಗಿಸಿ ಸಿದ್ಧಾರ್ಥ್ ಆನಂದ್‌ ರ ಕಪಾಳಕ್ಕೆ ಹೊಡೆದಿದ್ದಾನೆ.

  ಘಟನೆ ನಡೆದಾಗ ಶಾರುಖ್ ಖಾನ್ ಸಹ ಸೆಟ್‌ ನಲ್ಲಿ ಇದ್ದರು ಎನ್ನಲಾಗುತ್ತಿದೆ. ಸೆಟ್‌ನಲ್ಲಿ ಎಲ್ಲರ ಮುಂದೆಯೇ ಘಟನೆ ನಡೆದಿದೆ.

  ಸ್ಥಳದಲ್ಲಿದ್ದವರು ಹೇಳಿರುವಂತೆ ಸಹಾಯಕನು ಸೂಕ್ತವಾಗಿ ಕೆಲಸ ಮಾಡದೇ ಇದ್ದ ಕಾರಣ ಸಿದ್ಧಾರ್ಥ್ ಆತನನ್ನು ಹೊಡೆದರು. ಕೂಡಲೇ ಆ ಸಹಾಯಕ ತಿರುಗಿಬಿದ್ದು ಸಿದ್ಧಾರ್ಥ್ ಕಪಾಳಕ್ಕೆ ಭಾರಿಸಿದ. ಅಷ್ಟೇ ಅಲ್ಲದೆ ಜೋರು ಜೋರಾಗಿ ಎಲ್ಲರ ಮುಂದೆ ಅವಾಚ್ಯ ಶಬ್ದಗಳಿಂದ ಸಿದ್ಧಾರ್ಥ್ ಆನಂದ್ ಅನ್ನು ಬೈದನಂತೆ.

  ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

  2005 ರಿಂದಲೂ ಬಾಲಿವುಡ್ ಸಿನಿಮಾಗಳ ನಿರ್ದೇಶನ ಮಾಡುತ್ತಿದ್ದಾರೆ ಸಿದ್ಧಾರ್ಥ್ ಆನಂದ್. ಸಲಾಂ ನಮಸ್ತೆ, ಬಚ್ನಾ ಹೇ ಹಸೀನೋ, ಅಂಜಾನಾ-ಅಂಜಾನಿ, ತಾ ರಾ ರಂ ಪಂ, ಹೃತಿಕ್ ನಟನೆಯ ಬ್ಯಾಂಗ್-ಬ್ಯಾಂಗ್, ವಾರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಶಾರುಖ್ ನಟನೆಯ ಪಠಾಣ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

  English summary
  Shah Rukh Khan's Pthan movie director Siddharth Anand slapped by his assistant on the set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X