twitter
    For Quick Alerts
    ALLOW NOTIFICATIONS  
    For Daily Alerts

    ಮಿಥಾಲಿ ರಾಜ್ ಬಯೋಪಿಕ್; ನಿರ್ದೇಶಕರು ಬದಲಾಗಿದ್ದೇಕೆ?

    |

    ಭಾರತದ ಖ್ಯಾತ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಬಯೋಪಿಕ್ ಪ್ರಾರಂಭವಾಗಿ ಒಂದು ವರ್ಷದ ಮೇಲಾಗಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಬಯೋಪಿಕ್ ಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. ಶಬಾಷ್ ಮಿಥು ಶೀರ್ಷಿಕೆಯಲ್ಲಿ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ಮೂಡಿಬರುತ್ತಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಫಸ್ಟ್ ಲುಕ್ ಕೂ ಬಿಡುಗಡೆಯಾಗಿದೆ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಉತ್ಸುಕದಲ್ಲಿದ್ದ ಸಿನಿಮಾತಂಡ ಚಿತ್ರದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

    ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದ ರಾಹುಲ್ ಧೋಲಾಕಿಯ, ಶಬಾಷ್ ಮಿಥು ಚಿತ್ರದಿಂದ ಔಟ್ ಆಗಿದ್ದಾರೆ. ರಾಹುಲ್ ಜಾಗಕ್ಕೆ ಈಗ ಮತ್ತೋರ್ವ ಖ್ಯಾತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಈ ದೊಡ್ಡ ಬದಾಲವಣೆ ಭಾರಿ ಕುತೂಹಲ ಮೂಡಿಸಿದೆ.

    Director Srijit Mukherjee replaces Rahul Dholakia as Director of Mithali Raj biopic

    ಈ ಬಗ್ಗೆ ಮಾತನಾಡಿದ ಚಿತ್ರತಂಡ, "ಕೋವಿಡ್ ಕಾರಣದಿಂದ ಚಿತ್ರೀಕರಣ ಮರುಹೊಂದಿರುವ ಅಗತ್ಯವಿದೆ. ಹಾಗಾಗಿ ರಾಹುಲ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಕನಸನ್ನು ದೀರ್ಘಕಾಲದ ವರೆಗೆ ಹಂಚಿಕೊಂಡ ನಂತರ ರಾಹುಲ್ ದೂರ ಆಗಿರುವುದು ದುರದೃಷ್ಟಕರ. ಅವರ ಕೊಡುಗೆ ಉಳಿದಿರುತ್ತೆ, ಅದಕ್ಕೆ ಧನ್ಯವಾದ ತಿಳಿಸುತ್ತೇನೆ. ಶ್ರೀಜಿತ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕನಸಿನ ಚಿತ್ರಕ್ಕೆ ಅವರು ಉತ್ಸುಕರಾಗಿದ್ದಾರೆ" ಎಂದು ಹೇಳಿದ್ದಾರೆ.

    ಇನ್ನು ನಿರ್ದೇಶಕ ಶ್ರೀಜಿತ್ ಮಾತನಾಡಿ, "ಮಿಥಾಲಿ ಕಥೆ ಯಾವಾಗಲು ನನಗೆ ಸ್ಫೂರ್ತಿ. ನಾನು ಕೂಡ ಈ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ. ಶೀಘ್ರರದಲ್ಲೇ ಸಿನಿಮಾವನ್ನು ಬೆಳ್ಳೆತೆರೆಮೇಲೆ ತರುವ ಪಯಣವನ್ನು ಕಿಕ್ ಸ್ಟಾರ್ಟ್ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

    ಭಾರಿ ಕುತೂಹಲ ಮೂಡಿಸಿರುವ ಶಬಾಷ್ ಮಿಥು ಚಿತ್ರದಲ್ಲಿ ಕನ್ನಡ ನಟ ಜೆಕೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಭಾಗಿಯಾಗಿರುವ ಬಗ್ಗೆ ನಟ ಜೆಕೆ ಕೂಡ ಸಂತಸ ವ್ಯಕ್ತಪಡಿಸಿದ್ದರು.

    Recommended Video

    Dhanush ಅವರ ಸಂಭಾವನೆ ಈಗ ಎಷ್ಟು ಗೋತ್ತಾ | Filmibeat Kannada

    ಇನ್ನು ಮಹಿಳಾ ಕ್ರಿಕೆಟರ್ ಬಗ್ಗೆ ಬರುತ್ತಿರುವ ಮೊದಲ ಬಯೋಪಿಕ್ ಇದಾಗಿದೆ. ಈಗಾಗಲೆ ಸಾಕಷ್ಟು ಬಯೋಪಿಕ್ ಗಳು ಬಿಡುಗಡೆಯಾಗಿವೆ. ಇನ್ನು ಕೆಲವು ಬಯೋಪಿಕ್ ಗಳು ರಿಲೀಸ್ ಗೆ ರೆಡಿಯಾಗುತ್ತಿವೆ. ಇತ್ತೀಚಿಗಷ್ಟೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ರಿಲೀಸ್ ಆಗಿದೆ. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇನ್ನು ಭಾರತ ಮೊದಲಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದ ಕ್ಷಣ, ಜೊತೆಗೆ ಅನುಷ್ಕಾ ಶರ್ಮಾ ಅಭಿನಯದ ಮತ್ತೋರ್ವ ದಿಗ್ಗಜ ಆಟಗಾರ್ತಿ ಜೂಲನ್ ನಿಶಿತ್ ಗೋಸ್ವಾಮಿ ಜೀವನ ಕೂಡ ತೆರೆಮೇಲೆ ಬರುತ್ತಿದೆ.

    English summary
    Director Srijith Mukherj replaces Rahul Dholakia as Director of Mithali Raj biopic.
    Wednesday, June 23, 2021, 7:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X