ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಅತ್ಯಾಚಾರ ಆರೋಪ.!
'ಕರ್ಝ್', 'ಕರ್ಮ', 'ರಾಮ್ ಲಖನ್', 'ಖಳನಾಯಕ್', 'ಪರದೇಸ್', 'ತಾಲ್' ಸೇರಿದಂತೆ ಬಾಲಿವುಡ್ ನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಂತಹ ನಿರ್ದೇಶಕ ಸುಭಾಷ್ ಘಾಯ್.
ಬಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದಿರುವ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಸುಭಾಷ್ ಘಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ ಹೆಸರು ಹೇಳಲು ಇಚ್ಛಿಸದ ಓರ್ವ ಮಹಿಳೆ.
''ನನಗೆ ಕೊಟ್ಟಿದ್ದ ಡ್ರಿಂಕ್ಸ್ ನಲ್ಲಿ ಏನ್ನನ್ನೋ ಬೆರೆಸಿದ್ದರು. ಬಳಿಕ ನನ್ನನ್ನ ಯಾವುದೋ ಹೋಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಸುಭಾಷ್ ಘಾಯ್ ನನ್ನ ಮೇಲೆ ಅತ್ಯಾಚಾರ ಎಸಗಿದರು'' ಎಂದು ನೊಂದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಆ ಕಥೆಯನ್ನು ಮಮತಾ ಕುಕ್ರೇಜಾ ಎಂಬ ಬರಹಗಾರ್ತಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
ಆದ್ರೆ, ''ಇವೆಲ್ಲ ಬರೀ ಸುಳ್ಳು. ಏನೇನೋ ಕಥೆಗಳನ್ನು ಹೇಳಿ ಇನ್ನೊಬ್ಬರ ಹೆಸರಿಗೆ ಮಸಿ ಬಳಿಯುವುದು ಈಗ ಫ್ಯಾಶನ್ ಆಗ್ಬಿಟ್ಟಿದೆ'' ಎಂದು ಸುಭಾಷ್ ಘಾಯ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಅಸಭ್ಯ ವರ್ತನೆ
''ಮೊದಮೊದಲು ಅವರು (ಸುಭಾಷ್ ಘಾಯ್) ನನ್ನನ್ನ ಮ್ಯೂಸಿಕ್ ರೆಕಾರ್ಡಿಂಗ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮಧ್ಯರಾತ್ರಿ ಆದರೂ ಬೇರೆ ಗಂಡಸರ ಜೊತೆಗೆ ನಾನು ಅಲ್ಲೇ ಇರಬೇಕಿತ್ತು. ರೆಕಾರ್ಡಿಂಗ್ ಮುಗಿದ ಮೇಲೆ ಆಟೋದಲ್ಲಿ ಮನೆಗೆ ಹೋಗುತ್ತಿದ್ದೆ. ಇಲ್ಲಾಂದ್ರೆ, ಅವರೇ ನನ್ನನ್ನ ಡ್ರಾಪ್ ಮಾಡುತ್ತಿದ್ದರು. ಆಗ, ಅವರು ನನ್ನ ತೊಡೆ ಮೇಲೆ ಕೈಯಿಡುತ್ತಿದ್ದರು. ಅಲ್ಲದೇ, ನನ್ನನ್ನ ತಬ್ಬಿಕೊಂಡು ''ಕೆಲಸ ಚೆನ್ನಾಗಿ ಮಾಡಿದೆ'' ಎನ್ನುತ್ತಿದ್ದರು'' ಎಂದು ತಮ್ಮ ಗುರುತನ್ನು ಬಹಿರಂಗ ಪಡಿಸದ ಮಹಿಳೆಯೊಬ್ಬರು ಹೇಳಿದ್ದಾರೆ.

ಮುತ್ತು ಕೊಟ್ಟಿದ್ದರು
''ಸ್ಕ್ರಿಪ್ಟ್ ಸೆಷನ್ ಇರುವಾಗ ಲೋಖಂಡ್ವಾಲಾದಲ್ಲಿರುವ ಅಪಾರ್ಟ್ಮೆಂಟ್ ಗೆ ನನ್ನನ್ನ ಕರೆಯುತ್ತಿದ್ದರು. ಅಲ್ಲಿ ಅವರ ಪತ್ನಿ ವಾಸ ಇರುತ್ತಿರಲಿಲ್ಲ. ಅದು ಅವರ 'ಥಿಂಕಿಂಗ್ ಪ್ಯಾಡ್' ಆಗಿತ್ತು. ಒಂದು ದಿನ ಸ್ಕ್ರಿಪ್ಟ್ ಸೆಷನ್ ನಡೆಯುವಾಗ, ಕಣ್ಣೀರು ಹಾಕಿ ನನ್ನ ತೊಡೆ ಮೇಲೆ ಮಲಗಿದರು. ಜೊತೆಗೆ ಒತ್ತಾಯ ಪೂರ್ವಕವಾಗಿ ನನಗೆ ಮುತ್ತು ಕೊಟ್ಟರು. ನಾನು ಆಘಾತಗೊಂಡು ಅಲ್ಲಿಂದ ಹೊರಟೆ''

ಬೇರೆ ಕೆಲಸ ಇಲ್ಲ
''ಕೆಲಸ ಬಿಡೋಣ ಅಂದ್ರೆ ಬೇರೆ ಕೆಲಸ ಇರಲಿಲ್ಲ. ಆರ್ಥಿಕ ಮುಗ್ಗಟ್ಟು ಇದ್ದ ಕಾರಣ ನಾನು ಕೆಲಸ ಮಾಡುವ ಅನಿವಾರ್ಯತೆ ಇತ್ತು'' ಅಂತಾರೆ ಆ ನೊಂದ ಮಹಿಳೆ.
ಅತ್ಯಾಚಾರ ಎಸಗಿದ ಸುಭಾಷ್ ಘಾಯ್
''ಒಂದಿನ ಮ್ಯೂಸಿಕ್ ಸೆಷನ್ ಮುಗಿದ ಬಳಿಕ ಡ್ರಿಂಕ್ಸ್ ಮಾಡಲು ನಿರ್ಧರಿಸಿದರು. ನನಗೂ ಕೂಡ ಡ್ರಿಂಕ್ಸ್ ಕೊಟ್ಟರು. ಅದರಲ್ಲಿ ಡ್ರಗ್ಸ್ ಮಿಕ್ಸ್ ಆಗಿತ್ತು. ಅದಾದ್ಮೇಲೆ ಕಾರಿನಲ್ಲಿ ಹೋದದ್ದು ನೆನಪಿದೆ. ನನ್ನನ್ನ ಮನೆಗೆ ಡ್ರಾಪ್ ಮಾಡ್ತಾರೆ ಅಂದುಕೊಂಡಿದ್ದೆ. ಆದ್ರೆ, ಅವರು ಹೋಟೆಲ್ ಗೆ ಕರೆದುಕೊಂಡು ಹೋದರು. ನನ್ನ ತೊಟ್ಟಿದ್ದ ಜೀನ್ಸ್ ಬಿಚ್ಚಿದರು. ನಾನು ಕಿರುಚಾಡಲು ಯತ್ನಿಸಿದೆ. ಆದ್ರೆ, ನನ್ನ ಬಾಯಿ ಮುಚ್ಚಿ ಅತ್ಯಾಚಾರ ಎಸಗಿದರು''
ಅವತ್ತೇ ಕೊನೆ
''ಮಾರನೇ ದಿನ ನನ್ನನ್ನ ಮನೆಗೆ ಡ್ರಾಪ್ ಮಾಡಿದರು. ಕೆಲ ದಿನಗಳ ಕಾಲ ನಾನು ರಜೆ ಪಡೆದೆ. ಕೆಲಸ ಬಿಟ್ಟರೆ ಸಂಬಳ ಕೊಡಲ್ಲ ಅಂತ ಹೇಳಿದರು. ಇಷ್ಟಾದ್ಮೇಲೆ ನಾನು ಅವರನ್ನ ಭೇಟಿ ಆಗಿಲ್ಲ. ಮಾತು ಕೂಡ ಆಡಿಲ್ಲ'' ಅಂತಾರೆ ನೊಂದ ಮಹಿಳೆ.

ಎಲ್ಲಾ ಸುಳ್ಳು
''ನನ್ನ ವಿರುದ್ಧ ಆರೋಪ ಕೇಳಿಬಂದಿದೆ. ಸತ್ಯವಲ್ಲದ ಅಥವಾ ಅರ್ಧ ಸತ್ಯವುಳ್ಳ ಕಥೆಗಳನ್ನು ಹೇಳಿ ಇನ್ನೊಬ್ಬರ ಹೆಸರಿಗೆ ಮಸಿ ಬಳಿಯುವುದು ಈಗ ಫ್ಯಾಶನ್ ಆಗಿರುವುದು ದುರಂತ. ನನ್ನ ಬಗ್ಗೆ ಕೇಳಿಬಂದಿರುವ ಆರೋಪಗಳೆಲ್ಲ ಸುಳ್ಳು. ನನ್ನ ಜೀವನದಲ್ಲಿ ಹಾಗೂ ನನ್ನ ಜೊತೆಗೆ ಕೆಲಸ ಮಾಡಿದ ಪ್ರತಿ ಮಹಿಳೆಗೂ ನಾನು ಗೌರವ ಕೊಟ್ಟಿದ್ದೇನೆ. ಹೀಗೇ ಹೇಳಿಕೆ ಕೊಟ್ಟಿರುವವರು ಕೋರ್ಟ್ ಗೆ ಹೋಗಿ ಪ್ರೂವ್ ಮಾಡಲಿ. ನ್ಯಾಯ ಸಿಗುತ್ತದೆ. ಇಲ್ಲಾಂದ್ರೆ, ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ'' ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ ನಿರ್ದೇಶಕ ಸುಭಾಷ್ ಘಾಯ್.


Click it and Unblock the Notifications











