For Quick Alerts
  ALLOW NOTIFICATIONS  
  For Daily Alerts

  ನಟಿ ಕಾಲಿಗೆ ಡೈವ್ ಹೊಡೆದು ಪುನೀತನಾದ ನಿರ್ದೇಶಕ

  By ರವಿಕಿಶೋರ್
  |

  ಈ ಬಣ್ಣದ ಜಗತ್ತೇ ಹೀಗೆ. ಯಾರು ಯಾರಿಗೆ ಯಾವಾಗ ಕಾಲು ಹಿಡಿದುಕೊಳ್ಳುತ್ತಾರೋ, ಇನ್ಯಾವ ಕಾಲು ಎಳೆಯುತ್ತಾರೋ ಗೊತ್ತೇ ಆಗುವುದಿಲ್ಲ. ಎಳೆದಾಗ, ಬಿದ್ದಾಗಲಷ್ಟೇ ಸುದ್ದಿಯಾಗುತ್ತದೆ. ಈ ಹಿಂದೊಮ್ಮೆ ರಣಬೀರ್ ಕಪೂರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಎಕ್ಸ್ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ ಕಾಲಿಗೆ ಬಿದ್ದಿದ್ದು ಗೊತ್ತೇ ಇದೆ.

  ಈಗ ಅಂತಹದ್ದೇ ಒಂದು ಘಟನೆ ಬಾಲಿವುಡ್ ನಲ್ಲಿ ಬೆಳಕಿಗೆ ಬಂದಿದೆ. ಕರೀನಾ ಕಪೂರ್ ನಟಿಸುತ್ತಿರುವ 'ಗೋರಿ ತೇರೆ ಪ್ಯಾರ್ ಮೇ' ಚಿತ್ರದ ಶೂಟಿಂಗ್ ನಲ್ಲಿ ನಡೆದ ಘಟನೆಯಿದು. ಕರೀನಾ ಕಾಲು ಹಿಡಿದುಕೊಂಡ ವ್ಯಕ್ತಿ ಬೇರಾರು ಅಲ್ಲ ಗೋರಿ ತೇರೆ ಪ್ಯಾರ್ ಮೇ ಚಿತ್ರದ ನಿರ್ದೇಶಕ ಪುನೀತ್ ಮಲ್ಹೋತ್ರಾ.

  ಕರೀನಾ ಹುಟ್ಟುಹಬ್ಬದ ದಿನ ಪುನೀತ್ ಆಕೆಯ ಕಾಲಿಗೆ ಬಿದ್ದಿದ್ದಾರೆ. ತನಗೆ ಜನ್ಮದಿನದ ಶುಭಾಶಯಗಳನ್ನು ಹೀಗೆ ವಿಭಿನ್ನವಾಗಿ ಹೇಳಿದ್ದಾರೆ. ಅವರು ಕಾಲಿಗೆ ಬಿದ್ದಿದ್ದು ಕಂಡು ಸ್ವತಃ ಕರೀನಾ ಕಪೂರ್ ಬೆರಗಾಗಿದ್ದಾರೆ. ಕಾಲಿಗೆ ಡೈವ್ ಹೊಡೆದು ಸುಮ್ಮನಿದ್ದಿದ್ದರೆ ಆಗುತ್ತಿರಲಿಲ್ಲವೇ? ಆ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ ಪುಣ್ಯಾತ್ಮ.

  ಟೇಬಲ್ ಕೆಳಗಿನಿಂದ ತೂರಿ ಬಂದು ಕರೀನಾ ಕಾಲುಗಳನ್ನು ಹಿಡಿದುಕೊಂಡು ಬರ್ತ್ ಡೇ ವಿಶಸ್ ಹೇಳಿದ್ದಾರೆ. ಈಗಾಗಲೆ 'ಗೋರಿ ತೇರೆ ಪ್ಯಾರೆ ಮೇ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕರೀನಾ, ಇಮ್ರಾನ್ ಖಾನ್ ಜೊತೆಯಾಗಿ ಅಭಿನಯಿಸಿರುವ ಚಿತ್ರ. ನವೆಂಬರ್ 22, 2013ರಂದು ಚಿತ್ರ ಬಿಡುಗಡೆಯಾಗುತ್ತಿದೆ.

  ಟೇಬಲ್ ಕೆಳಗಿನಿಂದ ಬಂದ ನಿರ್ದೇಶಕ

  ಟೇಬಲ್ ಕೆಳಗಿನಿಂದ ಬಂದ ನಿರ್ದೇಶಕ

  ಕರೀನಾ ಟೇಬಲ್ ಮುಂದೆ ಕುಳಿತಿದ್ದಾಗ...ಪುನೀತ್ ಮಲ್ಹೋತ್ರಾ ಈ ರೀತಿಯಾಗಿ ಟೇಬಲ್ ಕೆಳಗಿನಿಂದ ತೂರಿ ಬಂದು ಆಕೆಯ ಕೋಮಲವಾದ ಪಾದಗಳನ್ನು ಸ್ಪರ್ಶಿಸಿದ್ದಾನೆ.

  ದೀಪಿಕಾ ಕಾಲಿಗೆ ಬಿದ್ದಿದ್ದ ರಣಬೀರ್ ಕಪೂರ್

  ದೀಪಿಕಾ ಕಾಲಿಗೆ ಬಿದ್ದಿದ್ದ ರಣಬೀರ್ ಕಪೂರ್

  ಈ ಹಿಂದೆ ಚಾಕೋಲೇಟ್ ಬಾಯ್ ರಣಬೀರ್ ಕಪೂರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಮಾಜಿ ಗೆಳತಿ ದೀಪಿಕಾ ಪಡುಕೋಣೆ ಕಾಲಿಗೆ ಎರಗಿದ್ದ.

  ಗಲಿಬಿಲಿಗೊಂಡಿದ್ದ ದೀಪಿಕಾ ಪಡುಕೋಣೆ

  ಗಲಿಬಿಲಿಗೊಂಡಿದ್ದ ದೀಪಿಕಾ ಪಡುಕೋಣೆ

  ಇದ್ದಕ್ಕಿದ್ದಂತೆ ರಣಬೀರ್ ಡೈವ್ ಹೊಡೆದದ್ದನ್ನು ನೋಡಿ ದೀಪಿಕಾ ಒಂದು ಕ್ಷಣ ಗಲಿಬಿಲಿಗೊಂಡಿದ್ದರು. ಕಡೆಗೆ ಸಾವರಿಸಿಕೊಂಡಿದ್ದರು.

  ಗೋರಿ ತೇರೆ ಪ್ಯಾರ್ ಮೇ ಚಿತ್ರದ ಸೆಟ್ಸ್ ನಲ್ಲಿ

  ಗೋರಿ ತೇರೆ ಪ್ಯಾರ್ ಮೇ ಚಿತ್ರದ ಸೆಟ್ಸ್ ನಲ್ಲಿ

  ಗೋರಿ ತೇರೆ ಪ್ಯಾರ್ ಮೇ ಚಿತ್ರದ ಸೆಟ್ಸ್ ನಲ್ಲಿ ಚಿತ್ರದ ನಿರ್ದೇಶಕ ಪುನೀತ್ ಮಲ್ಹೋತ್ರಾ, ನಾಯಕಿ ಕರೀನಾ ಕಪೂರ್, ನಾಯಕ ನಟ ಇಮ್ರಾನ್ ಖಾನ್.

  ಚಿತ್ರತಂಡದ ಜೊತೆ ಕರಣ್ ಜೋಹರ್

  ಚಿತ್ರತಂಡದ ಜೊತೆ ಕರಣ್ ಜೋಹರ್

  ಗೋರಿ ತೇರೆ ಪ್ಯಾರ್ ಮೇ ಚಿತ್ರತಂಡದ ಜೊತೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್.

  English summary
  Remember the day when the tinselville was taken aback, after actor Ranbir Kapoor touched his ex-girlfriend Deepika Padukone's feet at an award show? Well, a similar incident was repeated recently in the B-Town, but this time, it happened with actress Kareena Kapoor on the sets of her upcoming movie Gori Tere Pyaar Mein.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X