For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಂ ಖಾತೆಯ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಖ್ಯಾತ ನಿರ್ದೇಶಕ

  |

  ರಾಷ್ಟ್ರ ಪ್ರಶಸ್ತಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಆಗಿದ್ದು ಅಚ್ಚರಿ ಮೂಡಿಸಿದೆ.

  ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಂನ ಎಲ್ಲಾ ಪೋಸ್ಟ್‌ಗಳು ಕಾಣೆಯಾಗಿರುವುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಸಹ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಷ್ಟನೆ ನೀಡಿಲ್ಲ. ಆದರೆ, ಖಾತೆ ಡಿಲೀಟ್ ಆಗಿಲ್ಲ, ಪ್ರೋಫೈಲ್ ಬದಲಾವಣೆ ಆಗಿಲ್ಲ, ಆದರೆ ಪೋಸ್ಟ್‌ಗಳು ಮಾತ್ರ ಡಿಲೀಟ್ ಆಗಿರುವುದರ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.

  ಸೋನು ಸೂದ್‌ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ

  ವಿವೇಕ್ ಅಗ್ನಿಹೋತ್ರಿ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಯವಾಗಿರುವ ಬಗ್ಗೆ ಫಾಲೋವರ್ಸ್ ಅಚ್ಚರಿ ವ್ಯಕ್ತಪಡಿಸಿದ್ದು, ಬಹುಶಃ ಖಾತೆ ಹ್ಯಾಕ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇದು ಅಗ್ನಿಹೋತ್ರಿ ಅವರ ಮುಂದಿನ ಚಿತ್ರಕ್ಕಾಗಿ ಮಾಡಿರುವ ತಂತ್ರ ಇರಬೇಕು ಎನ್ನುತ್ತಿದ್ದಾರೆ.

  ಅಗ್ನಿಹೋತ್ರಿ ಸಿನಿಮಾಗಳು

  2019ರಲ್ಲಿ ಬಿಡುಗಡೆಯಾಗಿದ್ದ 'ದಿ ತಾಷ್ಕೆಂಟ್ ಫೈಲ್ಸ್' ಚಿತ್ರವೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದುಕೊಂಡಿತ್ತು.

  ಈಗ 'ಕಾಶ್ಮೀರಾ ಫೈಲ್ಸ್' ಸಿನಿಮಾ ಕೈಗೆತ್ತಿಕೊಂಡಿದ್ದು, ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಿ ಕಾಶ್ಮೀರ ಫೈಲ್ಸ್' 2021ರಲ್ಲಿ ಬಿಡುಗಡೆಯಾಗಲಿದೆ.

  Saayesha Saigal ಯುವರತ್ನ ಚಿತ್ರದ ನಾಯಕಿಯ ಪತಿ ತಮಿಳಿನ ಸೂಪರ್ ಸ್ಟಾರ್| Filmibeat Kannada

  ಕಾಶ್ಮೀರಿ ಹಿಂದೂಗಳ ದುಃಸ್ಥಿತಿಯ ಬಗ್ಗೆ ದೇಶವಾಸಿಗಳಿಗೆ ಹಾಗೂ ಇಡಿ ಜಗತ್ತಿಗೆ ತಿಳಿಸುವ ಪ್ರಯತ್ನ ಈ ಸಿನಿಮಾ ಆಗಿದ ಎಂದು ನಿರ್ಮಾಪಕ ನಂಬಿದ್ದಾರೆ. ವಿವೇಕ್ ಅಗ್ನಿಹೋತ್ರಿ, ಪಲ್ಲವಿ ಜೋಶಿ, ಅಭಿಷೇಕ್ ಅಗರ್‌ವಾಲ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  Indian Film Director Vivek Agnihotri Deleted All His Social Media Posts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X