'ಹಾಟ್ ಆಗಿ ನಟಿಸು ಎಂದು ಹೇಳ್ತಿದ್ರು, ದೊಡ್ಡ ಚಿತ್ರಗಳನ್ನು ಕೈ ಬಿಟ್ಟ': ಪ್ರಾಚಿ ದೇಸಾಯಿ

ಓದು ಮುಗಿಯುತ್ತಿದ್ದಂತೆ ಕಿರುತೆರೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡ ಪ್ರಾಚಿ ದೇಸಾಯಿ, ಟಿವಿ ಇಂಡಸ್ಟ್ರಿಯಲ್ಲಿ ಪ್ರಮುಖ ನಟಿ ಎನಿಸಿಕೊಳ್ಳುವಷ್ಟು ಖ್ಯಾತಿ ಗಳಿಸಿದರು. 2008ರಲ್ಲಿ 'ರಾಕ್ ಅನ್' ಚಿತ್ರದಲ್ಲಿ ನಟಿಸುವುದರೊಂದಿಗೆ ಬಾಲಿವುಡ್‌ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟರು.

ಲೈಫ್ ಪಾಟ್ನರ್, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಬೋಲ್ ಬಚ್ಚನ್, ಪೊಲೀಸ್‌ಗಿರಿ ಅಂತಹ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. 2016ರ ನಂತರ ಬಿಗ್ ಸ್ಕ್ರೀನ್‌ನಲ್ಲಿ ಪ್ರಾಚಿ ದೇಸಾಯಿ ಕಾಣಿಸಿಕೊಂಡಿಲ್ಲ. ಇದೀಗ, ಬಹಳ ವರ್ಷದ ನಂತರ ಪ್ರಾಚಿ ಕಂಬ್ಯಾಕ್ ಆಗಿದ್ದಾರೆ. ಇಷ್ಟು ವರ್ಷದ ಅಂತರ ಹಾಗೂ ಅವಕಾಶಗಳ ಬಗ್ಗೆ ಮಾತನಾಡಿರುವ ಪ್ರಾಚಿ, ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸೆಕ್ಸಿಯಸ್ಟ್ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲ

ಸೆಕ್ಸಿಯಸ್ಟ್ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲ

ಬಹಳ ಗ್ಯಾಪ್ ಬಳಿಕ ಸಿನಿಮಾಗಳನ್ನು ಮಾಡುವುದರ ಕುರಿತು ಮಾತನಾಡಿದ ನಟಿ ಪ್ರಾಚಿ ದೇಸಾಯಿ, ''ನಾನು ನನ್ನದೇ ನಿಯಮಗಳನ್ನು ಹಾಕಿಕೊಂಡು ಕೆಲಸ ಮಾಡುತ್ತೇನೆ, ನನ್ನನ್ನು ಸುಮ್ಮನೆ ಪ್ರದರ್ಶಿಸಿಕೊಳ್ಳಲು ಸಿನಿಮಾ ಮಾಡಲ್ಲ. ಹೆಚ್ಚು ಹಾಟ್ ಆಗಿಸೆಕ್ಸಿಯಸ್ಟ್ ಚಿತ್ರಗಳಲ್ಲಿ ನಟಿಸಲು ನನಗೆ ಇಷ್ಟವಿಲ್ಲ. ಬಹುಶಃ ಇದು ನನ್ನ ಅಂತರಕ್ಕೆ ಕಾರಣವಾಗಿರಬಹುದು'' ಎಂದು ಹೇಳಿಕೊಂಡಿದ್ದಾರೆ.

ಹಾಟ್ ಆಗಿರು ಎಂದು ಸಲಹೆ ಕೊಡ್ತಿದ್ರು

ಹಾಟ್ ಆಗಿರು ಎಂದು ಸಲಹೆ ಕೊಡ್ತಿದ್ರು

''ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ಳಬೇಕು, ಹಾಟ್ ಆಗಿ ನಟಿಸಬೇಕು ಎಂದು ಹಲವು ನಿರ್ಮಾಪಕ ಹಾಗೂ ನಿರ್ದೇಶಕರು ಸಲಹೆ ಕೊಡ್ತಿದ್ದರು. ಇದು ನನಗೆ ಇಷ್ಟವಿರಲಿಲ್ಲ. ಹಾಗಾಗಿ, ಕಡಿಮೆ ಕೆಲಸ ಮಾಡುವಂತೆ ಮಾಡಿತು'' ಎಂದು ತಿಳಿಸಿದ್ದಾರೆ.

ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಬಿಟ್ಟಿದ್ದೇನೆ

ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಬಿಟ್ಟಿದ್ದೇನೆ

''ನನ್ನ ನಿರ್ಧಾರ ಹಾಗೂ ನನ್ನ ಆಯ್ಕೆಗಳಿಂದ ಕೆಲವು ದೊಡ್ಡ ಪ್ರಾಜೆಕ್ಟ್‌ಗಳನ್ನು ದೂರು ಮಾಡಿಕೊಂಡಿದ್ದೇನೆ, ಹಾಟ್ ಆಗಿ ನಟಿಸಬೇಕು, ಸೆಕ್ಸಿಯಾಗಿ ಕಾಣಬೇಕು ಎಂಬ ಕಾರಣಕ್ಕೆ ನಾನು ಅಭಿನಯಿಸಲ್ಲ ಎಂದು ಕೈಬಿಟ್ಟಿದ್ದೇನೆ'' ಎಂದು ಪ್ರಾಚಿ ದೇಸಾಯಿ ಬಹಿರಂಗಪಡಿಸಿದ್ದಾರೆ.

ಮನಸ್ಸಿನಲ್ಲಿರುವುದನ್ನು ಹೇಳಲು ಸಾಧ್ಯವಾಗ್ತಿರಲಿಲ್ಲ

ಮನಸ್ಸಿನಲ್ಲಿರುವುದನ್ನು ಹೇಳಲು ಸಾಧ್ಯವಾಗ್ತಿರಲಿಲ್ಲ

''ಅನೇಕ ಸಂದರ್ಭಗಳಲ್ಲಿ ಖುದ್ದು ನಾನೇ ನಿರ್ದೇಶಕರನ್ನು ಭೇಟಿ ಮಾಡಲು ಹೋಗ್ತಿದ್ದೆ. ಆದರೆ ಅವರು ನನ್ನೊಂದಿಗೆ ಸ್ಕ್ರಿಪ್ಟ್ ಕುರಿತು ಚರ್ಚೆ ಮಾಡಲ್ಲ. ಕಥೆ ವಿವರಿಸಲ್ಲ. ನನ್ನ ಮನಸ್ಸಿನಲ್ಲಿ ಏನಿದೆ ಎಂದು ಹೇಳುವ ಅವಕಾಶ ಸಹ ಕೊಡಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೊಸ ಸಿನಿಮಾದಲ್ಲಿ ನಟನೆ

ಹೊಸ ಸಿನಿಮಾದಲ್ಲಿ ನಟನೆ

ಮನೋಜ್ ಬಾಜಪೇಯಿ ಜೊತೆ 'ಸೈಲೆನ್ಸ್: ಕೆನ್ ಯೂ ಇಯರ್ ಹಿಟ್' ಸಿನಿಮಾದಲ್ಲಿ ಪ್ರಾಚಿ ದೇಸಾಯಿ ನಟಿಸಿದ್ದು, ಈ ಚಿತ್ರ Zee5 ಒಟಿಟಿಯಲ್ಲಿ ತೆರೆಕಂಡಿದೆ. 'ಪಾತ್ರದ ಬಗ್ಗೆ ಕೇಳಿದೆ, ಸ್ಕ್ರಿಪ್ಟ್ ಇಷ್ಟ ಆಯಿತು, ನನ್ನ ಪಾತ್ರವೂ ಇಷ್ಟ ಆಯಿತು. ಹಾಗಾಗಿ, ಈ ಚಿತ್ರದಲ್ಲಿ ನಟಿಸಿದೆ' ಎಂದು ಹೇಳಿದ್ದಾರೆ.

Recommended Video

ಸ್ಯಾಂಡಲ್ ವುಡ್ ಮ್ಯೂಸಿಷಿಯನ್ ಮನೆಬಾಗಿಲಿಗೆ ದಿನಸಿ ವ್ಯವಸ್ಥೆ | Filmibeat Kannada

More from Filmibeat

English summary
Actress Prachi desai revealed that ''she was advised by male directors to work on being hot'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X