ಶವವಾಗಿ ಪತ್ತೆಯಾದ 'ಡರ್ಟಿ ಪಿಕ್ಚರ್' ಖ್ಯಾತಿಯ ನಟಿ ಆರ್ಯ
2020ರಲ್ಲಿ ಬಣ್ಣದ ಲೋಕ ಮತ್ತೋರ್ವ ನಟಿಯನ್ನು ಕಳೆದುಕೊಂಡಿದೆ. ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಬೆಂಗಾಲಿ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶುಕ್ರವಾರ ಆರ್ಯ ಮೃತ ದೇಹ ಪತ್ತೆಯಾಗಿದ್ದು, ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video
33 ವರ್ಷದ ನಟಿ ಆರ್ಯ ತನ್ನ ಆಪಾರ್ಟ್ಮೆಂಟ್ ನ ಬೆಡ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆ ಕೆಲಸದವರು ಆರ್ಯ ಮನೆಗೆ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಬಂದು ಬಾಗಿಲು ಓಪನ್ ಮಾಡಿದಾಗ ಆರ್ಯ ಶವವಾಗಿ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಆರ್ಯ ಕೊಲ್ಕತ್ತಾದ ಜೋಧ್ಪುರ ಉದ್ಯಾನವನದಲ್ಲಿ ತನ್ನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರ್ಯ 2010ರಲ್ಲಿ ಲವ್ ಸೆಕ್ಸ್ ಧೋಖ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ವಿದ್ಯಾ ಬಾಲನ್ ನಟನೆಯ ದಿ ಡರ್ಟಿ ಪಿಕ್ಟರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಮಾಡೆಲಿಂಗ್ ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.


Click it and Unblock the Notifications











