ಫೋಟೋಗ್ರಫರ್ ಜೊತೆ ದಿಶಾ ಪಟಾನಿ ಬಾಡಿಗಾರ್ಡ್ ಫೈಟ್
ಬಾಲಿವುಡ್ ಖ್ಯಾತ ನಟಿ ದಿಶಾ ಪಟಾನಿ ಗಲಾಟೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ದಿಶಾ ಪಟಾನಿ ಬಾಡಿಗಾರ್ಡ್ ಮತ್ತು ಫೋಟೋಗ್ರಫರ್ ನಡುವೆ ತಳ್ಳಾಟ ನಡೆದಿದ್ದು, ಫೋಟೋಗ್ರಫರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ದಿಶಾ ಪಟಾನಿ, ಕಾರ್ಯಕ್ರಮ ಮುಗಿಸಿ ಹೊರಗೆ ಬರುವ ವೇಳೆ ಫೋಟೋಗ್ರಫರ್ ಆಕೆಯ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ.
ಅನುಮತಿ ಇಲ್ಲದೇ ಫೋಟೋ ಕ್ಲಿಕ್ ಮಾಡಲು ನಟಿಯ ಮುಂದೆ ಮುಗಿಬಿದ್ದ ಫೋಟೋಗ್ರಫರ್ ಗಳನ್ನು ದಿಶಾ ಪಟಾನಿ ಬಾಡಿಗಾರ್ಡ್ ನೂಕಿದ್ದಾರೆ. ಕ್ಯಾಮೆರಾ ತಳ್ಳಿದ್ದಾರೆ. ಬಾಡಿಗಾರ್ಡ್ ನಡೆಯನ್ನು ವಿರೋಧಿಸಿದ ಫೋಟೋಗ್ರಫರ್ ಖಂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ಕುರಿತು ವಾದ ಪ್ರತಿವಾದ ನಡೆಯುತ್ತಿದೆ.

ಈ ಘಟನೆ ನಡೆದ ಬಳಿಕ ದಿಶಾ ಪಟಾನಿ ಅವರ ಮ್ಯಾನೇಜರ್ ಫೋಟೋಗ್ರಫರ್ ಬಳಿ ಬಂದ ಕ್ಷಮೆಯಾಚಿಸಿದ್ದಾರೆ. ಖ್ಯಾತ ಫೋಟೋಗ್ರಫರ್ ವಿರಾಲ್ ಬಯಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿ ದಿಶಾ ಪಟಾನಿ ಬಾಡಿಗಾರ್ಡ್ ನಡೆಯನ್ನು ಖಂಡಿಸಿದ್ದಾರೆ.
ಇನ್ನು ಮಲಾಂಗ್ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರಿವ ದಿಶಾ ಪಟಾನಿ, ಸಲ್ಮಾನ್ ಖಾನ್ ಜೊತೆ ರಾಧೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications