ಮುಂಬೈ ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿಗೆ ಪ್ರವೇಶ ನಿರಾಕರಣೆ..!

ಕೆಲ ಒಮ್ಮೆ ತಾರೆಯರು ಏನೋ ಮಾಡಲು ಹೋಗಿ ಇನ್ನೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಳ್ಳುತ್ತಾರೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ ಇನ್ನೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗುತ್ತಾರೆ. ಇನ್ನೂ.. ಜನಸಾಮಾನ್ಯರಂತೆ ಸೆಲೆಬ್ರೆಟಿಗಳು ಕೂಡ ಮನುಷ್ಯರೇ. ಎಲ್ಲರಲ್ಲಿ ಇರುವಂತೆ ಕೆಲ ಗೊಂದಲ ಅವರಲ್ಲಿ ಕೂಡ ಇರುತ್ತವೆ. ಹೀಗೆ ಕೆಲವೊಮ್ಮೆ ಉಂಟಾಗುವ ಸಣ್ಣ ಪುಟ್ಟ ಗೊಂದಲಗಳಿಂದ ಕೂಡ ತಾರೆಯರು ಮುಜುಗರಕ್ಕೀಡಾಗುತ್ತಾರೆ. ಇದಕ್ಕೆ ಸಪೂರ ಸುಂದರಿ ದಿಶಾ ಪಟಾನಿ ಸದ್ಯದ ಉದಾಹರಣೆ.

ಹೌದು, ಪೂರ್ಣ ಪ್ರಮಾಣದ ನಾಯಕಿಯಾಗಿ ಮೂರು ಮತ್ತೊಂದು ಚಿತ್ರಗಳನ್ನು ಮಾಡಿದ್ದರು ಕೂಡ, ತನ್ನ ಗ್ಲಾಮರಸ್ ಲುಕ್‌ಗಳಿಂದ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುವ ದಿಶಾ ಮುಂಬೈದಿಂದ ಹೊರ ಹೋಗಲು ಬಯಸಿದ್ದರು. ವಿಮಾನ ನಿಲ್ದಾಣಕ್ಕೆ ನೀಲಿ ಬಣ್ಣದ ಬ್ಯಾಗಿ ಡೆನಿಮ್ ಜೀನ್ಸ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಕ್ಯಾಶುವಲ್ ಲುಕ್‌ನಲ್ಲಿ ಬಂದಿದ್ದರು.

Disha Patani Denied Entry at Mumbai Airport Makes U-Turn Full Incident Explained

ಆದರೆ, ಇದೇ ಸಮಯದಲ್ಲಿ ದಿಶಾ ತಮ್ಮ ಗುರುತಿನ ದಾಖಲೆಯನ್ನೇ ಮರೆತು ಬಂದಿದ್ದರು. ಹೀಗಾಗಿ ವಿಮಾನ ನಿಲ್ದಾಣ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಆಗ ಬೇರೆ ವಿಧಿ ಇಲ್ಲದೇ ದಿಶಾ ಪಟಾನಿ ಅಲ್ಲಿಂದ ಹೊರ ನಡೆದಿದ್ದಾರೆ.

ಇನ್ನು ಮುಜುಗರಕ್ಕೀಡಾಗಿ ಅಲ್ಲಿಂದ ನಿರಾಶೆಯಿಂದ ದಿಶಾ ಮರಳುವಾಗ ಅಲ್ಲಿಯೇ ಇದ್ದ ಪಾಪರಾಜಿ ಏನಾಯ್ತು ಎಂದು ಕೇಳಿದ್ದಾರೆ. ಇದಕ್ಕೆ ದಿಶಾ ಏನೂ ಆಗಿಲ್ಲವಲ್ಲ ಎಂದು ಹೇಳಿ ಮತ್ತೆ ತಮ್ಮ ಕಾರನ್ನೇರಿ ಅಲ್ಲಿಂದ ತೆರಳಿದ್ದಾರೆ.

ಸದ್ಯ ದಿಶಾ ಪಟಾನಿ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತರೇಹವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಹಲವರು ದಿಶಾ ಕೂಡ ಎಲ್ಲರಂತೆಯೇ, ಮರೆತು ಬಂದಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಪಬ್ಲಿಸಿಟಿ ಸ್ಟಂಟ್ ಎನ್ನುತ್ತಿದ್ದಾರೆ. ಪಾಪಾ, ಎಲ್ಲಿ ಹೋಗಬೇಕಿತ್ತೇನೋ ದುಡ್ಡೆಲ್ಲ ಹಾಳಾಯ್ತು ಎನ್ನುತ್ತಿದ್ದಾರೆ.

ಇನ್ನುಳಿದಂತೆ ದಿಶಾ ಪಟಾನಿ ಕಂಗುವಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂರ್ಯ ಅಭಿನಯದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಚಿತ್ರ ಮಕಾಡೆ ಮಲಗಿತು. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಬಾಬಿ ಡಿಯೋಲ್ ಕೂಡ ಇದ್ದರು. ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಶಿವ ನಿರ್ದೇಶನದ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಯೋಗಿ ಬಾಬು, ವಸುಂಧರಾ ಕಶ್ಯಪ್ ಸೇರಿ ಅನೇಕರು ಕಾಣಿಸಿಕೊಂಡಿದ್ದರು.

ಸದ್ಯ ದಿಶಾ ಪಟಾನಿ ವೆಲ್‌ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಹುತಾರಾಗಣ ಇರುವ ಈ ಚಿತ್ರದಲ್ಲಿ ದಿಶಾ ಪಟಾನಿ ಜೊತೆ ಅಕ್ಷಯ್ ಕುಮಾರ್, ಜಾಕಿ ಶ್ರಾಫ್, ಸುನೀಲ್ ಶೆಟ್ಟಿ, ಪರೇಶ್ ರಾವಲ್, ಅಫ್ತಾಬ್ ಶಿವದಾಸನಿ, ಅರ್ಷದ್ ವಾರ್ಸಿ, ಜಾನಿ ಲಿವರ್, ರಾಜ್‌ಪಾಲ್ ಯಾದವ್, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ, ರವೀನಾ ಟಂಡನ್, ಲಾರಾ ದತ್ತಾ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದಲ್ಲಿದ್ದಾರೆ.

More from Filmibeat

English summary
Bollywood actress Disha Patani was reportedly stopped and denied entry at Mumbai Airport due to unspecified reasons. She was seen taking a U-turn and leaving the premises. The incident was caught on video and has since gone viral.
Read more about: disha patani viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X