ಹೊಸ ಬಾಯ್‌ಫ್ರೆಂಡ್ ಪರಿಚಯಿಸಿದ ದಿಶಾ ಪಟಾನಿ: ಟ್ವಿಸ್ಟ್ ಏನಪ್ಪಾ ಅಂದ್ರೆ?

ಬಾಲಿವುಡ್‌ ನಟ-ನಟಿಯರ ಡೇಟಿಂಗ್, ಬ್ರೇಕಪ್‌ ಸರ್ವೇ ಸಾಧಾರಾಣ ಎನ್ನುವಂತಾಗಿಬಿಟ್ಟಿದೆ. ಯಾರು ಯಾರೊಟ್ಟಿಗೆ ಡೇಟಿಂಗ್ ಮಾಡ್ತಾರೆ? ಯಾರೊಟ್ಟಿಗೆ ಎಂಗೇಜ್‌ಮೆಂಟ್ ಮಾಡಿಕೊಳ್ತಾರಾ? ಕೊನೆಗೆ ಯಾರ ಕೈ ಹಿಡಿಯುತ್ತಾರೆ? ಮದುವೆ ಆದ್ಮೇಲೂ ಡಿವೋರ್ಸ್? ಹೊಸ ಅಫೇರ್? ಎಲ್ಲವೂ ನಡೆಯುತ್ತಲೇ ಇರುತ್ತದೆ. ಇದೀಗ ಬಿಂದಾಸ್ ಬೆಡಗಿ ದಿಶಾ ಪಟಾನಿ ತನ್ನ ಹೊಸ ಬಾಯ್‌ಫ್ರೆಂಡ್ ಪರಿಚಯ ಮಾಡಿಸಿದ್ದಾಳೆ.

ದಿಶಾ ಪಟಾನಿ ಹಾಗೂ ನಟ ಟೈಗರ್ ಶ್ರಾಫ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಜೋರಾಗಿಯೇ ಕೇಳಿಬಂದಿತ್ತು. ಕದ್ದು ಮುಚ್ಚಿ ಇಬ್ಬರು ಊರೂರು ಸುತ್ತಾಡಿದ್ದರು. ಪಾರ್ಕ್, ಪಬ್ಬು, ಈವೆಂಟ್‌ಗಳಲ್ಲಿ ಇವರಿಬ್ಬರು ಕೆಮಿಸ್ಟ್ರಿ ನೋಡಿದವರು ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದಿದ್ದರು. ಜೋಡಿ ಮದುವೆ ಕೂಡ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ದಿಢೀರನೇ ಅಲೆಕ್ಸಾಂಡರ್ ಅಲೆಕ್ಸಿಕ್ ನನ್ನ ಬಾಯ್‌ಫ್ರೆಂಡ್ ಎಂದು ದಿಶಾ ಹೇಳಿರುವ ವಿಡಿಯೋ ವೈರಲ್ ಆಗ್ತಿದೆ.

Disha-patani-Boyfriend -Aleksandar

ದಿಶಾ ಪಟಾನಿ ಹಾಗೂ ಅಲೆಕ್ಸಾಂಡರ್ ಅಲೆಕ್ಸಿಕ್ ಕೆಲ ದಿನಗಳಿಂದ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದರು. ದಿಶಾ ಹಾಗೂ ಟೈಗರ್ ನಡುವೆ ಬ್ರೇಕಪ್‌ ಆಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಸದ್ಯ ಅಲೆಕ್ಸಾಂಡರ್ ಅಲೆಕ್ಸಿಕ್ ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವುದು ನೋಡಿದರೆ ಬ್ರೇಕಪ್‌ ವದಂತಿ ನಿಜ ಎನ್ನುವುದು ಅರ್ಥವಾಗುತ್ತಿದೆ. ಪಾರ್ಟಿಯೊಂದರಲ್ಲಿ ಅಲೆಕ್ಸಾಂಡರ್ ಅಲೆಕ್ಸಿಕ್ ಜೊತೆ ದಿಶಾ ಕಾಣಿಸಿಕೊಂಡಿದ್ದಾರೆ.

ಪಾರ್ಟಿಯಲ್ಲಿ ತಮ್ಮ ಸ್ನೇಹಿತರಿಗೆ ಈತ ನನ್ನ 'ಬಾಯ್‌ಫ್ರೆಂಡ್' ಎಂದು ಪರಿಚಯ ಮಾಡಿಕೊಟ್ಟಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು ಇಬ್ಬರು ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸರ್ಬಿಯಾದ ಮೂಲದ ನಟ, ಮಾಡೆಲ್ ಅಲೆಕ್ಸಾಂಡರ್ ಮುಂಬೈನಲ್ಲಿ ಸೆಟ್ಲ್ ಆಗಿದ್ದು ಫಿಟ್‌ನೆಸ್ ಕೋಚ್ ಆಗಿದ್ದಾರೆ. ಟೈಗರ್ ಶ್ರಾಫ್, ದಿಶಾ ಪಟಾನಿ ಸೇರಿದಂತೆ ಹಲವು ಸೆಲೆಬ್ರೆಟಿಗಳಿಗೆ ಜಿಮ್ ಟ್ರೈನರ್ ಆಗಿ ಗುರ್ತಿಸಿಕೊಂಡಿದ್ದಾರೆ.

Disha-patani-Boyfriend -Aleksandar

ಕಳೆದ ಏಳೆಂಟು ತಿಂಗಳಿನಿಂದ ಅಲೆಕ್ಸಾಂಡರ್ ಹಾಗೂ ದಿಶಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಈಗ ಇಬ್ಬರು ಡೇಟಿಂಗ್ ನಡೆಸುತ್ತಿರುವುದು ನಿಜವಾಗಿದೆ ಎಂದು ಬಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ. ಇನ್ನು ದಿಶಾ ಹಾಗೂ ಟೈಗರ್ 'ಭಾಘೀ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಿಂದಲೂ ಡೇಟಿಂಗ್ ನಡೆಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಇಬ್ಬರು ಒಟ್ಟೊಟ್ಟಿಗೆ ಸುತ್ತಾಡಿದ್ದರು. ಮುಂಬೈನಲ್ಲಿ ಕಾರ್‌ನಲ್ಲಿ ಪ್ರಯಾಣಿಸುವಾಗ ಪೊಲೀಸರು ದಂಡ ವಿಧಿಸಿದ್ದರು.

ಸೌತ್‌ ಸಿನಿಮಾಗಳಲ್ಲೂ ದಿಶಾ ಪಟಾನಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟನೆಯ 'ಕಲ್ಕಿ2898AD' ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ. ಇನ್ನು ತಮಿಳಿನಲ್ಲಿ ಸೂರ್ಯ ಜೊತೆ 'ಕಂಗುವ' ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇನ್ನು ಸದಾಹ ಬಿಂದಾಸ್ ಲುಕ್‌ನಲ್ಲಿ ಕಾಣಿಸಿಕೊಂಡು ದಿಶಾ ಅಂತರ್ಜಾಲಕ್ಕೆ ಬ್ಯುಸಿ ಏರಿಸುತ್ತಾರೆ. ಒಳಉಡುಪುಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಹುಬ್ಬೇರಿಸುತ್ತಿರುತ್ತಾರೆ.

More from Filmibeat

English summary
Disha Patani introduced her Boyfriend Aleksandar Ilic. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X