ಪ್ರಭಾಸ್, ದೀಪಿಕಾ ನಟಿಸುತ್ತಿರುವ 'ಪ್ರಾಜೆಕ್ಟ್‌ ಕೆ' ಚಿತ್ರದಲ್ಲಿ ಮತ್ತೊಬ್ಬ ಬಾಲಿವುಡ್ ನಟಿ ಎಂಟ್ರಿ

ನಟ ಪ್ರಭಾಸ್‌ ಅಭಿನಯಿಸುತ್ತಿರುವ 'ಪ್ರಾಜೆಕ್ಟ್‌ ಕೆ' ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸಲಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಕನ್ನಡದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ದೀಪಿಕಾ ಬಾಲಿವುಡ್ ನಲ್ಲಿ ಬ್ಯುಸಿಯೆಷ್ಟು ನಟಿ. ಈಗ ಇದೇ ನಟಿ 'ಪ್ರಾಜೆಕ್ಟ್ ಕೆ' ಸಿನಿಮಾದ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಸ್‌ ವೃತ್ತಿ ಜೀವನದಲ್ಲೇ ಈ ಸಿನಿಮಾ ಪ್ರಮುವಾಗಿದ್ದು, ಪ್ರಭಾಸ್ ಹಾಗೂ ದೀಪಿಕಾ ಕಾಂಬಿನೇಶನ್‌ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ ಈ ತಂಡಕ್ಕೆ ಈಗ ಮತ್ತೊಬ್ಬ ಬಾಲಿವುಡ್ ನಟಿ ಆಗಮನವಾಗಿದೆ.

'ಪ್ರಾಜೆಕ್ಟ್ ಕೆ' ಸಿನಿಮಾ ಬಗ್ಗೆ ಈ ಮೊದಲಿನಿಂದಲೂ ಕುತೂಹಲ ಹೆಚ್ಚಿತ್ತು. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾಗ್‌ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್‌ ಹೇಳಿದ್ದು, ಸಿನಿಮಾ ಈಗಾಗಲೇ ಸೆಟ್‌ ಏರಿ ತುಂಬಾ ದಿನಗಳು ಕಳೆದಿವೆ. ಸದ್ಯ ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಮಾತ್ರವಲ್ಲದೆ ಅಮಿತಾಭ್‌ ಬಚ್ಚನ್ ಕೂಡ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಈಗ ದಿಶಾ ಪಟಾನಿ ಕೂಡ ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ನಟಿ ದಿಶಾ ಪಟಾನಿ ಇನ್ಸ್‌ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದು, ಈ ಸಿನಿಮಾದ ನಿರ್ಮಾಣ ಸಂಸ್ಥೆ ವೈ ಜಯಂತಿ ಮೂವೀಸ್‌ ಕಳುಹಿಸಿದ್ದ ವೆಲ್ಕಮ್ ಆನ್ ಬೋರ್ಡ್‌ ಎಂದು ಪುಷ್ಪಗುಚ್ಚ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ. ದಿಶಾ ಪಟಾಣಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ.

Disha Patani Joins Prabhas and Deepika Padukone Starrer Project K

ಸದ್ಯಕ್ಕೆ ದಿಶಾ ಪಟಾಣಿ 'ಪ್ರಾಜೆಕ್ಟ್‌ ಕೆ' ಸಿನಿಮಾದಲ್ಲಿ ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ ಎಂಬುದನ್ನ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ.

Disha Patani Joins Prabhas and Deepika Padukone Starrer Project K

ಒಟ್ಟಿನಲ್ಲಿ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಸಹ ಉತ್ಸುಕರಾಗಿದ್ದಾರೆ. ಸದ್ಯ ದಿಶಾ ಪಟಾಣಿ ಈ ವರ್ಷದ ಆರಂಭದಲ್ಲೇ 'ಏಕ್‌ ವಿಲನ್ ರಿಟರ್ನ್ಸ್‌', 'ಯೋಧ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Bollywood Actress Disha Patani joins Prabhas and Deepika Padukone starrer project k film. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X