ದಿಶಾ ಪಟಾನಿ ಬಿಕಿನಿ ಫೋಟೊಗೆ ರೇಷ್ಮೆ ಸೀರೆ ತೊಡಿಸಿದ ಕಲಾಕಾರರು: ಹೀಗೂ ಉಂಟೆ?
ಬಾಲಿವುಡ್ ನಟಿ ದಿಶಾ ಪಟಾನಿ ಅಂದಾಕ್ಷಣ ಎಲ್ಲರಿಗೂ ಆಕೆಯ ಬೋಲ್ಡ್ ಮತ್ತು ಹಾಟ್ ಅವತಾರ ನೆನಪಾಗುತ್ತೆ. ಯಾಕೆಂದರೆ ಸಿನಿಮಾ, ನಟನೆಗಿಂತಲೂ ದಿಶಾ ಪಟಾನಿ ಹೆಚ್ಚಾಗಿ ಸದ್ದು ಮಾಡುವುದು ತಮ್ಮ ಹಾಟ್ ಲುಕ್‌ನಿಂದಲೆ. ಸದಾ ದಿಶಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುತ್ತಾರೆ. ಹೆಚ್ಚಾಗಿ ತಮ್ಮ ಬೋಲ್ಡ್ ಲುಕ್ ಫೋಟೊಗಳನ್ನೇ ಹಂಚಿಕೊಳ್ಳುತ್ತಾರೆ ದಿಶಾ.
Recommended Video
ಇತ್ತೀಚೆಗೆ ದಿಶಾ ಪಟಾನಿ ಎಂದಿನಂತೆ ಬಿಕಿನಿ ತೊಟ್ಟ ಫೋಟೊಗನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ಣದ ಬಿಕಿನಿ ತೊಟ್ಟು ಬೀಚ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಫೋಟೊಗೆ ಬೆನ್ನು ಮಾಡಿ ನಿಂತು ಕೊಂಚ ಹಿಂದೆ ತಿರುಗಿ ನೋಡಿದ್ದಾರೆ.
ಈ ಫೋಟೋದಲ್ಲಿ ದಿಶಾ ತುಸು ಹೆಚ್ಚಾಗೆ ಹಾಟ್ ಆಗಿಯೇ ತಮ್ಮ ದೇಹವನ್ನು ಪ್ರದರ್ಶಿಸಿದ್ದಾರೆ. ದಿಶಾ ಈ ಪೋಸ್ಟ್ ಹಾಕುತ್ತಲೇ, ಸಾಕಷ್ಟು ಹೊಗಳಿಕೆಯ ಕಮೆಂಟ್‌ಗಳು ಬಂದಿವೆ. ಆದರೆ ಬಳಿಕಾ ದಿಶಾಳ ಈ ಲುಕ್ ಟ್ರೋಲ್‌ಗೆ ತುತ್ತಾಗಿದೆ. ಅದು ಯಾವ ಮಟ್ಟಿಗೆ ಅಂದರೆ ನೋಡಿದವರು ಹೀಗೂ ಉಂಟೇ ಎನ್ನುತ್ತಿದ್ದಾರೆ.

ದಿಶಾ ಬಿಕಿಗೆ ರೇಷ್ಮೆ ಸೀರೆ ಉಡಿಸಿದ ಟ್ರೋಲಿಗರು!
ದಿಶಾ ಬಿಕಿನಿ ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದ ಬಿಕಿನಿ ಫೋಟೊವನ್ನು ಎಡಿಟ್ ಮಾಡಿ, ಅದೇ ಫೋಟೋಗೆ ಸೀರೆ ಉಡಿಸಲಾಗಿದೆ. ಹಸಿರು ಬಣ್ಣದ ರೇಷ್ಮೆ ಸೀರೆ, ನೀಲಿ ಬಣ್ಣದ ರವಿಕೆ ತೊಡಿಸಲಾಗಿದೆ. ಮತ್ತೊಂದು ಫೋಟೊದಲ್ಲಿ ಬಿಕಿನಿ ತೊಟ್ಟು ನಿಂತಿದ್ದ ಫೋಟೊಗೆ ಶಾಲ್ ಹೊದಿಸಿ ಎಡಿಟ್ ಮಾಡಲಾಗಿದೆ. ದಿಶಾ ಅವರ ಹೆಗಲ ಮೇಲೆ ಶಾಲ್ ಹೊದಿಸಿರುವಂತೆ ಎಡಿಟ್ ಮಾಡಲಾಗಿದೆ. ದಿಶಾ ಅವರಿಗೆ ಹಾಕಿಕೊಳ್ಳಲು ಬಟ್ಟೆ ಎಂದು ಕಮೆಂಟ್ ಕೂಡ ಮಾಡಲಾಗಿದೆ.

ಪ್ಯಾಂಟ್ ತೊಡಿಸಿ, ಸ್ಕರ್ಟ್ ಹಾಕಿದ ಕಲಾಕಾರರು!
ಇನ್ನು ಅದೇ ಬಿಕಿನಿ ಫೋಟೊಗೆ ಜೀನ್ಸ್ ಪ್ಯಾಂಟ್ ಕೂಡ ಹಾಕಲಾಗಿದೆ. ಅದು ಸಾಲದು ಅಂತ ಮತ್ತೊಂದು ಫೋಟೊದಲ್ಲಿ ದಿಶಾ ಬಿಕಿನಿ ಫೋಟೊಗೆ ಪುಟ್ಟ ಲಂಗವನ್ನು ತೊಡಿಸಲಾಗಿದೆ. ಎಡಿಟ್ ಮಾಡಿರುವ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಮೂಲಕ ದಿಶಾ ಅವರ ಅವತಾರವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ದಿಶಾ ಕಾಣದಂತೆ ಬುರ್ಕಾ ತೊಡಿಸಲಾಗಿದೆ!
ಇನ್ನು ಒಂದು ಹೆಚ್ಚೆ ಮುಂದೆ ಹೋದ ಕಲಾಕಾರರು ದಿಶಾ ಅವರು ಕಾಣದ ಹಾಗೆ ಫೋಟೊಗೆ ಬುರ್ಕಾ ಕೂಡ ಹಾಕಿ ಎಡಿಟ್ ಮಾಡಿದ್ದಾರೆ. ಜೊತೆಗೆ ಇನ್ನೊಂದು ಫೋಟೊದಲ್ಲಿ ಫ್ಯಾನ್ಸಿ ಸೀರೆ ತೊಡಿಸಲಾಗಿದೆ. ಹೀಗೆ ದಿಶಾಳನ್ನು ಹಲವು ಅವತಾರಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೊಟೋಗಳು ಹೆಚ್ಚಾಗಿ ಶೇರ್ ಆಗುತ್ತಿವೆ.

ಟ್ರೋಲ್‌ಗೆ ಕ್ಯಾರೆ ಎನ್ನದ ದಿಶಾ ಪಟಾನಿ!
ಇನ್ನು ತನ್ನ ಬಗ್ಗೆ ಇಷ್ಟೆಲ್ಲಾ ಟ್ರೋಲ್ ಆಗುತ್ತಿದ್ದರು ಕೂಡ ದಿಶಾ ಪಟಾನಿ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಹಾಗಂತ ಇನ್ನು ಮುಂದೆ ದಿಶಾ ಬಿಕಿನಿ ಫೋಟೊಗಳನ್ನು ಹಂಚಿಕೊಳ್ಳುವುದಿಲ್ಲ ಅಂತೇನು ಅಲ್ಲ. ಈ ಹಿಂದೆ ಕೂಡ ಹತ್ತು ಹಲವು ಬಾರಿ ಟ್ರೋಲ್ ಆಗಿದ್ದಾರೆ. ಆದರೆ ಯಾವುದಕ್ಕೂ ದಿಶಾ ತಲೆ ಕೆಡಿಸಿ ಕೊಂಡಿಲ್ಲ. ಇನ್ನು ದಿಶಾಳ ಈ ಫೋಟೊಗೆ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಬೆಂಕಿ ಸಿಂಬಲ್ ಹಾಕಿ, ಹಾಟ್ ಎನ್ನುವ ಕಮೆಂಟ್ ಮಾಡಿದ್ದಾರೆ.


Click it and Unblock the Notifications











