ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್‌ಗೆ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯ

ಭಾರತೀಯ ಚಿತ್ರರಂಗದಲ್ಲಿ ನಟಿ ಮಾಧುರಿ ದೀಕ್ಷಿತ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. 1980 ರ ದಶಕದಿಂದ ಹಿಡಿದು ಇಂದಿನವರೆಗೂ ಬಣ್ಣದ ಲೋಕದಲ್ಲಿ ಮಿಂಚುತ್ತಲೇ ಇದ್ದಾರೆ. ಈಗಲೂ ಕೂಡ ನಟಿ ಮಾಧುರಿ ದೀಕ್ಷಿತ್‌ಗೆ ಅಪಾರವಾದ ಅಭಿಮಾನಿಗಳ ಬಳಗವಿದ್ದು, ಇಂದು (ಮೇ 15) ನಟಿ ಮಾಧುರಿ ದೀಕ್ಷಿತ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಮೇ 15 ನಟಿ ಮಾಧುರಿ ದೀಕ್ಷಿತ್ ಹುಟ್ಟಿದ ದಿನ. ತಮ್ಮ 55ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿಗೆ ಅಭಿಮಾನಿಗಳು, ಸ್ನೇಹಿತರು, ಸಿನಿ ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಉರುಳಿ ಹೋಗಿದ್ದರು. ಮಾಧುರಿ ದೀಕ್ಷಿತ್‌ಗೆ ಈಗಲೂ ಕೂಡ ಸಿನಿಮಾಗಳ ಆಫರ್‌ ಕಡಿಮೆಯಾಗಿಲ್ಲ. ಆ ಮಟ್ಟಿಗಿನ ಬೇಡಿಕೆಯನ್ನು ಈಗಲೂ ಬಣ್ಣದ ಲೋಕದಲ್ಲಿ ಹಾಗೆ ಉಳಿಸಿಕೊಂಡಿದ್ದಾರೆ. ವಯಸ್ಸು 55 ಆದರೂ ಕೂಡ ಈಗಲೂ ಯಂಗ್ ಆಗಿ ಕಾಣುವ ಮಾಧುರಿ ದೀಕ್ಷಿತ್ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ನಟಿ ಮಾಧುರಿ ದೀಕ್ಷಿತ್ ತಾವು ನಟಿಸುವ ಪ್ರತಿ ಚಿತ್ರಕ್ಕೆ ಉತ್ತಮ ಸಂಭಾವನೆಯನ್ನು ಪಡೆಯುವ ಶೀಮಂತ ನಟಿ ಕೂಡ ಹೌದು.

Bollywood Diva Madhuri Dixit Celebrating Her 55th Birthday

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ಮಾಧುರಿ ದೀಕ್ಷಿತ್‌ ಹಲವು ಬಗೆಯ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ಈಗ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿ ಕಾಣಿಸಿಕೊಳ್ಲುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿದ್ದಾರೆ. ಇದಿಷ್ಟೇ ಅಲ್ಲದೆ ಇತ್ತೀಚಿಗೆ ಹೆಚ್ಚು ಫೇಮಸ್‌ ಆಗುತ್ತಿರುವ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲೂ ನಟಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಹೊಸ ವೆಬ್ ಸೀರಿಸ್ ಮತ್ತು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ರಿಲೀಸ್‌ ಆದ 'ದಿ ಫೇಮ್ ಗೇಮ್' ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಮಾಧುರಿ ದೀಕ್ಷಿತ್ ಒಟಿಟಿ ಲೋಕಕ್ಕೆ ಕಾಲಿಟ್ಟರು. ಇದಾದ ಬಳಿಕ ಅವರಿಗೆ ಬೇರೆ ಬೇರೆ ಒಟಿಟಿ ಸಂಸ್ಥೆಗಳಿಂದ ಹೆಚ್ಚಿನ ಆಫರ್‌ಗಳು ಬರುತ್ತಿವೆ.

Bollywood Diva Madhuri Dixit Celebrating Her 55th Birthday

ಒಟ್ಟಿನಲ್ಲಿ ನಟಿ ಮಾಧುರಿ ದೀಕ್ಷಿತ್‌ ವರ್ಷ ಕಳೆದಂತೆ ತಮ್ಮ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಹಿರಿಯ ನಟಿಯಾಗಿದ್ದರು ಸಹ ಈಗಲೂ ತಮ್ಮ ಬೇಡಿಕೆ ಕಡಿಮೆಯಾಗದಂತೆ ನೋಡಿಕೊಂಡು ಬರುತ್ತಿದ್ದಾರೆ. ಇಂದಿಗೂ ಕೂಡ ಯುವಕರ ಹಾಟ್ ಫೇವರೆಟ್ ಆಗಿ ಮಾಧುರಿ ದೀಕ್ಷಿತ್ ಉಳಿದುಕೊಂಡಿದ್ದಾರೆ.ಮಾಧುರಿ ದೀಕ್ಷಿತ್ ಹುಟ್ಟುಹಬ್ಬವಾದ ಹಿನ್ನಲೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಪೋಟೊಶೇರ್‌ ಮಾಡಿ ಶುಭಾಶಯ ಕೋರುತ್ತಿದ್ದಾರೆ.

More from Filmibeat

English summary
Bollywood Actress Madhuri Dixit birthday, fans wishing the actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X