ಮೂರೇ ವರ್ಷಕ್ಕೆ ದಾಂಪತ್ಯ ಅಂತ್ಯ, ನಟಿಯ ಜೊತೆ 9 ವರ್ಷ ಲಿವ್ ಇನ್ ಸಂಬಂಧ ; 50ನೇ ವರ್ಷಕ್ಕೆ ತಂದೆಯಾದ ಖ್ಯಾತ ನಿರ್ಮಾಪಕ

ವಿದ್ಯಾಭ್ಯಾಸಕ್ಕೊಂದು ವಯಸ್ಸು, ಮದುವೆಗೊಂದು ವಯಸ್ಸು, ಪೋಷಕರಾಗಿ ಬಡ್ತಿ ಪಡೆಯಲು ಒಂದು ವಯಸ್ಸು, ಹೀಗೆ ಇಂತಿಷ್ಟೇ ವಯಸ್ಸಿಗೆ ಏನೇನಾಗಬೇಕೋ ಅದಾಗಬೇಕು ಎಂಬ ಅಲಿಖಿತ ನಿಯಮ ನಮ್ಮ ಸಮಾಜದಲ್ಲಿದೆ.

ಹೀಗಿರುವಾಗ 40 ವರ್ಷದ ನಂತರ ಮದುವೆಯಾಗಿ 50ನೇ ವರ್ಷಕ್ಕೆ ತಂದೆ ಅಥವಾ ತಾಯಿಯಾದರೆ ಹುಬ್ಬೇರದಿರುತ್ತಾ ? ಸದ್ಯ ಮಧು ಮಂಟೆನಾ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.

divine-arrival-50-year-old-madhu-mantena-and-ira-trivedi-welcome-baby-boy

ಹೌದು, ಮಧು ಮಂಟೆನಾ.. ಬಾಲಿವುಡ್ ನ ಪ್ರಖ್ಯಾತ ನಿರ್ಮಾಪಕ. ಇವರ ಪರಿಚಯಕ್ಕೆ "ಘಜನಿ" ಚಿತ್ರಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. "ಕ್ವೀನ್".. " ಉಡ್ತಾ ಪಂಜಾಬ್".. "ಸೂಪರ್ 30".. " ಮಸಾನ್".. "ಲೂಟೇರಾ".. ಇವರ ನಿರ್ಮಾಣದಡಿ ಸಿದ್ದವಾದ ಕೆಲ ಪ್ರಮುಖ ಸಿನಿಮಾಗಳು.

ಇನ್ನೂ ವೈಯಕ್ತಿಕ ವಿಚಾರಕ್ಕೆ ಬಂದರೆ 2015ರಲ್ಲಿ ಖ್ಯಾತ ನಟಿ ನೀನಾ ಗುಪ್ತಾ ಅವರ ಮಗಳು ಮಸಬಾ ಗುಪ್ತಾ ಅವರನ್ನು ಮಧು ಮಂಟೆನಾ ಮದುವೆಯಾಗಿದ್ದರು. ಆದರೆ 2018ರಲ್ಲಿ ಈ ಸಂಬಂಧ ಮುರಿದು ಬಿತ್ತು. 2019ರಲ್ಲಿ ವಿಚ್ಚೇದನವೂ ಆಯ್ತು.

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಪುತ್ರಿ ಮತ್ತು ನಟಿ‌ ನಂದನಾ ಸೇನ್ ಅವರ ಜೊತೆ ಕೂಡ ಇವರ ಸಂಬಂಧ ಇತ್ತು. ಬರೋಬ್ಬರಿ 9 ವರ್ಷ ಇಬ್ಬರು ಲಿವ್ ಇನ್ ಸಂಬಂಧದಲ್ಲಿಯೂ ಇದ್ದರು. ನಿಶ್ಚಿತಾರ್ಥ ಸಮಾರಂಭ ಕೂಡ ಅದ್ದೂರಿಯಾಗಿ ನಡೆದಿತ್ತು. ಇನ್ನೇನು ಇಬ್ಬರು ಮದುವೆಯಾಗಬೇಕಿತ್ತು. ಅಷ್ಟರಲ್ಲಿ ಈ ಸಂಬಂಧದಲ್ಲಿ ಕೂಡ ಬಿರುಕು ಮೂಡಿತು.

ಈ ಸಮಯದಲ್ಲಿ ಇವರ ಬದುಕಿನಲ್ಲಿ ಬಂದವರೇ ಇರಾ ತ್ರಿವೇದಿ. ಇವರು ಬೇರೆ ಯಾರು ಅಲ್ಲ ಬದಲಿಗೆ ಪ್ರಖ್ಯಾತ ಲೇಖಕಿ ಮತ್ತು ಯೋಗ ಗುರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಿಟ್‌ನೆಸ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇವರು ಹಂಚಿಕೊಳ್ಳುತ್ತಿರುತ್ತಾರೆ.

divine-arrival-50-year-old-madhu-mantena-and-ira-trivedi-welcome-baby-boy

ಇಂತಹ ಇರಾ ತ್ರಿವೇದಿ ಜೊತೆ ಜೂನ್ 11 2023ರಲ್ಲಿ ಮಧು ಮಂಟೆನಾ ಅದ್ದೂರಿಯಾಗಿ ಮದುವೆಯಾದರು. ಬಾಲಿವುಡ್ ನ ಗಣ್ಯಾತಿಗಣ್ಯರೆಲ್ಲ ಈ ಮದುವೆಗೆ ಸಾಕ್ಷಿಯಾಗಿದ್ದರು.

ಜುಹುನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಆಮಿರ್ ಖಾನ್, ಅವರ ಪುತ್ರ ಜುನೈದ್ ಖಾನ್, ಅನಿಲ್ ಕಪೂರ್, ರಾಕೇಶ್ ರೋಷನ್, ಅನುಪಮ್ ಖೇರ್, ಸೋನಾಲಿ ಬೇಂದ್ರೆ, ಗೋಲ್ಡಿ ಬೆಹ್ಲ್, ಸೋನಾಲಿ ಕುಲಕರ್ಣಿ ಸೇರಿ ಹಲವರು ಸಾಕ್ಷಿಯಾಗಿದ್ದರು.

ಇಂಥಾ ಮಧು ಮಂಟೆನಾ ಮತ್ತು ಇರಾ ತ್ರಿವೇದಿ ಈಗ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ವಿಶೇಷ ಅಂದರೆ ಮಧು ಮಂಟೆನಾಗೆ ಈಗ 50 ವರ್ಷ. ಇನ್ನೂ ವಿಶೇಷ ಅಂದರೆ ಮಧು ಮಂಟೆನಾಗೆ ಇದು ಎರಡನೇ ಮದುವೆಯಾದರೂ ಮೊದಲ ಬಾರಿ ತಂದೆಯಾಗುತ್ತಿದ್ದಾರೆ.

ಹೀಗಾಗಿಯೇ ಸಂಭ್ರಮದ ಅಲೆಯಲ್ಲಿರುವ ಮಧು ಮಂಟೆನಾ ತಮ್ಮ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸುಂದರ ಉಡುಗೊರೆ ನೀಡಿದ ಶ್ರೀಕೃಷ್ಣ ಪರಮಾತ್ಮನಿಗೆ ಧನ್ಯವಾದ ಎಂದು ಹೇಳಿದ್ದಾರೆ. ಸದ್ಯ ಮಧು ಮಂಟೆನಾ ಮತ್ತು ಇರಾಗೆ ಹಲವರು ಶುಭಾಶಯ ಕೋರುತ್ತಿದ್ದಾರೆ.

ಅಂದ್ಹಾಗೇ ಆಮಿರ್ ಖಾನ್ ಮಗನ ಚಿತ್ರವೊಂದು ತೆರೆಗೆ ಬಂದಿತ್ತು. ಆ ಚಿತ್ರದ ಹೆಸರು "ಲವ್ ಯಾಪಾ". 2022ರ ಬ್ಲಾಕ್ ಬಸ್ಟರ್ ತಮಿಳು ಸಿನಿಮಾ "ಲವ್ ಟುಡೇ" ಚಿತ್ರದ ರಿಮೇಕ್ ಇದು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕೂಡ ಇದೇ ಮಧು ಮಂಟೆನಾ.

ಹೀಗೆ ಬಾಲಿವುಡ್ ಗೆ ತನ್ನದೇ ಸೇವೆ ಸಲ್ಲಿಸಿರುವ ಮಧು ಮಂಟೆನಾ 50ರ ಹರೆಯದಲ್ಲಿ ತಂದೆಯಾಗುತ್ತಿದ್ದು ಆಗಲೇ ಹೇಳಿದಂತೆ ಹಲವರು ಶುಭಾಶಯ ಕೋರುತ್ತಿದ್ದಾರೆ.

More from Filmibeat

English summary
"Thank you, Krishna, for this divine blessing." Madhu Mantena and Ira Trivedi are officially parents! See the joyous announcement as the couple celebrates the birth of their first son.
Read more about: pregnency pregnent
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X