ಹಲವರು ಬಂದರು, ಹೋದರು ; ಆದರೆ ಸರಿಯಾದ ವ್ಯಕ್ತಿ ಸಿಗಲಿಲ್ಲ- 48ರ ಹರೆಯದಲ್ಲೂ ಒಂಟಿ ಜೀವನ, ಮದುವೆ ಬಗ್ಗೆ ದಿವ್ಯಾ ದತ್ತಾ ಮಾತು

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.

ಇನ್ನು .. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ .. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಇನ್ನೂ ಕೆಲವರಿಗೆ ಮದುವೆಯಾಗಬೇಕೆಂಬ ಬಯಕೆ ಇರುತ್ತಾದರೂ ಇವರಿಗೆ ಸರಿಯಾದ ಸಂಗಾತಿ ಸಿಗುವುದಿಲ್ಲ. ಇವರಲ್ಲಿ ಕೆಲವರು ಪ್ರೀತಿಯಲ್ಲಿ ನೊಂದು-ಬೆಂದು ಕೂಡ ಹೋಗಿರುತ್ತಾರೆ.

Divya Dutta Single At 48 Heartbreak Revelation

ಹೀಗಾಗಿ ಎಷ್ಟೇ ವಯಸ್ಸಾದರೂ ಆತುರ ಪಡದೇ ಕಾಯುವ ನಿರ್ಧಾರಕ್ಕೆ ಇವರು ಬರುತ್ತಾರೆ. ಆದರೆ ನಮ್ಮ ಸಮಾಜ ಇವರನ್ನು ಬಿಡಬೇಕಲ್ಲ. ಅದರಲ್ಲೂ ಹೆಣ್ಣಿನ ವಯಸ್ಸು 40 ದಾಟಿತೆಂದರೆ ಸಾಕು, ಅವಳ ಸುತ್ತಮುತ್ತಲ ಇನ್ನೂ ಮದುವೆಯಾಗಿಲ್ವಾ? ಎಂಬ ಕೊಂಕು ಮಾತುಗಳನ್ನಾಡುತ್ತಾರೆ. ಈ ಮಾತುಗಳನ್ನು ಹಲವಾರು ವರ್ಷಗಳಿಂದ ಕೇಳಿಸಿಕೊಂಡು ಬರುತ್ತಿರುವ ದಿವ್ಯಾ ದತ್ತಾ ಈಗ ಮತ್ತೊಮ್ಮೆ ಮದುವೆ ಕುರಿತು ಮಾತನಾಡಿದ್ದಾರೆ. 48 ವರ್ಷವಾದರೂ ತಾವ್ಯಾಕೇ ಇನ್ನೂ ಮದುವೆಯಾಗಿಲ್ಲ ಎನ್ನುವುದನ್ನು ಹೇಳಿದ್ದಾರೆ.

ಹೌದು, ದಿವ್ಯಾ ದತ್ತಾ.. ಬಾಲಿವುಡ್‌ನ ಖ್ಯಾತ ಚೆಲುವೆ. ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿರುವ ದಿವ್ಯಾ ದತ್ತಾ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್, ಐಫಾ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಇಂಥಾ ದಿವ್ಯಾ ದತ್ತಾಗೆ ಈಗ 48ರ ಹರೆಯ. ಆದರೆ.. ಇನ್ನೂ ಕೂಡ ದಿವ್ಯಾ ಮದುವೆಯಾಗಿಲ್ಲ. ಹೀಗಾಗಿ ಹಲವರಿಗೆ ಇವರ ಮದುವೆ ಚಿಂತೆ ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಸಂದರ್ಶನಗಳಲ್ಲಿ ಈ ಕುರಿತು ದಿವ್ಯಾ ದತ್ತಾಗೆ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ ನಾನಾ ರೀತಿಯಲ್ಲಿ ದಿವ್ಯಾ ದತ್ತ ಉತ್ತರವನ್ನು ಕೂಡ ನೀಡಿದ್ದಾರೆ. ಆದರೂ ಈ ಪ್ರಶ್ನೆ ಇದ್ದೇ ಇದೆ. ಹೀಗಾಗಿಯೇ ಮದುವೆಯ ಕುರಿತು ದಿವ್ಯಾ ದತ್ತಾ ಮತ್ತೊಮ್ಮೆ ಮಾತನಾಡಿದ್ದಾರೆ.

Divya Dutta Single At 48 Heartbreak Revelation

ಈ ಕುರಿತು ''ಹ್ಯೂಮನ್ಸ್ ಆಫ್ ಬಾಂಬೆ'' ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿವ್ಯಾ ದತ್ತಾ ನನಗೆ ಮದುವೆಯ ಕುರಿತು ಅತೀ ಹೆಚ್ಚಿನ ಜನ ಪ್ರಶ್ನೆ ಕೇಳುತ್ತಾರೆ. ಇಲ್ಲಿಯೂ ಮತ್ತದೇ ಪ್ರಶ್ನೆ ಎದುರಾಗಿದೆ ಎಂದು ಮಾತು ಶುರು ಮಾಡಿದ್ದಾರೆ. ನನ್ನ ಬದುಕಿನಲ್ಲಿ ಹಲವಾರು ಜನ ಬಂದರು, ಹೋದರು, ನನ್ನ ಹೃದಯವನ್ನು ನುಚ್ಚು ನೂರು ಮಾಡಿದರು ಎಂದು ಹೇಳಿರುವ ದಿವ್ಯಾ ದತ್ತಾ ಬ್ರೇಕಪ್‌ದಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಹಾಗಂಥ ಪ್ರೀತಿಯ ಬಗ್ಗೆ ನಾನು ಭರವಸೆ ಕಳೆದುಕೊಂಡಿಲ್ಲ ಇವತ್ತು ಈ ಕ್ಷಣ ಕೂಡ ನನಗೆ ಪ್ರೀತಿಯ ಮೇಲೆ ಭರವಸೆ ಇದೆ ಎಂದು ಹೇಳಿರುವ ದಿವ್ಯಾ ದತ್ತಾ ಸರಿಯಾದ ಸಮಯಕ್ಕೆ ಸರಿಯಾದ ಸಂಗಾತಿ ಸಿಗಬೇಕು ಆಗಲೇ ಪ್ರೀತಿ ಸರಿಯಾಗಿ ಚಿಗುರುತ್ತೆ ಎಂದು ಹೇಳಿದ್ದಾರೆ.

ಸರಿಯಾದ ವ್ಯಕ್ತಿ ನಮಗೆ ಸಿಕ್ಕಾಗ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ನಡೆಯಲು ಸಾಧ್ಯ ಎಂದು ಹೇಳಿರುವ ದಿವ್ಯಾ ದತ್ತಾ, ನನಗೆ ದೇವರ ಮೇಲೆ ನಂಬಿಕೆ ಇದೆ ನೋಡೋಣ ಎಂದು ಹೇಳಿದ್ಧಾರೆ. ನಿಜವಾದ ಪ್ರೀತಿ ಸಿಕ್ಕರೆ ಯಾರಿಗೆ ಗೊತ್ತು ನಾನು ಈ ವಯಸ್ಸಿನಲ್ಲಿ ಮದುವೆಯಾದರು ಆಗಬಹುದು ಎಂದಿದ್ದಾರೆ. ಮದುವೆಯಾಗಿರಲಿ ಆಗಿರದಿರಲಿ ಸದ್ಯಕ್ಕೆ ನಾನು ನೆಮ್ಮದಿಯಿಂದ ಇದ್ದೇನೆ ಎಂದು ಕೂಡ ನಗೆ ಬೀರಿದ್ದಾರೆ ದಿವ್ಯಾ ದತ್ತಾ.

English summary
"I’m overqualified for marriage." National Award winner Divya Dutta breaks her silence on her recent Humans of Bombay interview.
Read more about: divya dutta marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X