Ananya Panday: ದೀಪಾವಳಿಯ ಶುಭ ವೇಳೆಯಲ್ಲಿ ಹೊಸ ಮನೆಗೆ ಕಾಲಿಟ್ಟ ಡ್ರೀಮ್ ಗರ್ಲ್ ಅನನ್ಯಾ ಪಾಂಡೆ

ಹಬ್ಬ ಹರಿದಿನಗಳಲ್ಲಿ ಮನೆಗೆ ಒಡವೆ, ಕಾರು ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಲಾಗುತ್ತದೆ. ಶುಭಗಳಿಗೆಯನ್ನು ನಂಬುವ ಹಲವು ಮಂದಿ ಈ ದಿನಕ್ಕಾಗಿ ಕಾಯುತ್ತಾರೆ. ಸೆಲಬ್ರಿಟಿಗಳು ಕೂಡ ಈ ದಿನ ತಮಗೆ ಬೇಕಾದ ವಸ್ತುಗಳನ್ನು ಮನೆಗೆ ತರುತ್ತಾರೆ. ಈ ಬಾರಿಯ ದೀಪಾವಳಿಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಸ್ವಂತ ಮನೆಯನ್ನು ಕೊಂಡುಕೊಂಡಿದ್ದಾರೆ.

ಹಬ್ಬದ ಶುಭ ಸಂದರ್ಭದಲ್ಲಿ ಮನೆಗೆ ಕಾಲಿಟ್ಟಿರುವ ನಟಿ ಅನನ್ಯಾ ಪಾಂಡೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಪೂಜೆ ಮಾಡಿ ಆದರ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ananya-panday-buys-a-house

ಹೊಸ ಮನೆ ಖರೀದಿಸಿದ ನಟಿ ಅನನ್ಯಾ ಪಾಂಡೆ

ಹೊಸ ಮನೆಯ ಫೋಟೋ ಮತ್ತು ಬಾಗಿಲಿಗೆ ತೆಂಗಿನ ಕಾಯಿ ಒಡೆಯುತ್ತಿರುವ ವಿಡಿಯೋ ಹಂಚಿಕೊಂಡಿರುವ ಅನನ್ಯಾ ಪಾಂಡೆ, "ನನ್ನ ಸ್ವಂತ ಮನೆ..! ಹೊಸ ಆರಂಭಕ್ಕೆ .. ನಿಮ್ಮೆಲ್ಲರ ಪ್ರೀತಿ ಮತ್ತು ಒಳ್ಳೆಯ ಹಾರೈಕೆಗಳು ಬೇಕು! ಹ್ಯಾಪಿ ಧನ್ತೇರಸ್" ಎಂದು ಬರೆದುಕೊಂಡಿದ್ದಾರೆ. ಅನನ್ಯಾ ಅವರಿಗೆ ಸೆಲಬ್ರಿಟಿಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸಾಂಪ್ರದಾಯಿಕ ಬಟ್ಟೆಯಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ

ಬಾಲಿವುಡ್ ನಟ ಚಿಂಕಿ ಪಾಂಡೆ ಮಗಳಾದ ಅನನ್ಯಾ ಪಾಂಡೆ ಮೊದಲ ಫೋಟೋದಲ್ಲಿ ಹಳದಿ ಮತ್ತು ಗೋಲ್ಡನ್ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. ಪೂಜೆ ಮಾಡಿರುವ ಜಾಗದಲ್ಲಿ ಕುಳಿತು, ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಿದ್ದಾರೆ. ಇನ್ನೊಂದು ಚಿಕ್ಕ ವಿಡಿಯೋದಲ್ಲಿ ಮನೆಯ ಗೃಹಪ್ರವೇಶ ಪೂಜಾ ವಿಧಿವಿಧಾನಗಳ ಭಾಗವಾಗಿ ಮನೆ ಬಾಗಿಲಿನಲ್ಲಿ ತೆಂಗಿನಕಾಯಿ ಒಡೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಅನನ್ಯಾ ಪಾಂಡೆಗೆ ಸೆಲೆಬ್ರಿಟಿಗಳ ಅಭಿನಂದನೆ

ಅನನ್ಯಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಟೈಗರ್ ಶ್ರಾಫ್, "ವಾವ್ ಅನನ್ಯಾ ಅಭಿನಂದನೆಗಳು" ಎಂದು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. "ಅಭಿನಂದನೆಗಳು ನನ್ನ ಪ್ರೀತಿಯ ಅನನ್ಯಾ. ಮೋರ್ ಪವರ್ ಟು ಯು" ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಇಷ್ಟು ಬೇಗ ಮನೆ ಖರೀದಿಸಿರುವುದಕ್ಕೆ ಆಶ್ಚ್ಯ ವ್ಯಕ್ತಪಡಿಸಿರುವ ಫರಾ ಖಾನ್, "ವಾವ್! ಇಷ್ಟು ಬೇಗ...! ಈ ಮನೆಯು ನಿಮಗೆ ಅಪಾರ ಅದೃಷ್ಟ ಮತ್ತು ಸಂತೋಷವನ್ನು ನೀಡಲಿ" ಎಂದಿದ್ದಾರೆ. ನಟಿ ಮಾಳವಿಕ ಮೋಹನನ್ ಕೂಡ ಶುಭಾಶಯಗಳು ಎಂದಿದ್ದಾರೆ.

ananya-panday-buys-a-house

ಮಗಳು ಮನಡ ತೆಗೆದುಕೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅನನ್ಯಾ ಅವರ ತಾಯಿ ಭಾವನಾ ಪಾಂಡೆ ಕೂಡ ಕಾಮೆಂಟ್ ಮಾಡಿದ್ದಾರೆ, "ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ.. ಹೀಗೆ ಸದಾ ಹೊಳೆಯುತ್ತಿರು" ಎಂದು ಮಗಳ ಬಗ್ಗೆ ಹೆಮ್ಮೆಯಿಂದ ಬರೆದಿದ್ದಾರೆ. ಅನನ್ಯಾ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ.

ಕಾಫಿ ವಿತ್ ಕರಣ್ 8 ರಲ್ಲಿ ಕಾಣಿಸಿಕೊಂಡಿದ್ದ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಇತ್ತೀಚೆಗೆ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಅಲಿ ಖಾನ್ ಜೊತೆಗೆ ಕಾಣಿಸಿಕೊಂಡಿದ್ದರು. ಇಬ್ಬರೂ ತಮ್ಮ ವೃತ್ತಿಜೀವನ, ಲವ್ ಲೈಫ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆಯೂ ಅನನ್ಯಾ ಪ್ರತಿಕ್ರಿಯಿಸಿದ್ದಾರೆ.

ಇನ್ನು, ಅನನ್ಯಾ ಪಾಂಡೆ ಕೊನೆಯದಾಗಿ ಆಯುಷ್ಮಾನ್ ಖುರಾನಾ ಅವರ ಡ್ರೀಮ್ ಗರ್ಲ್ 2 ರಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಅವರ ಜೊತೆಗೆ ಖೋ ಗಯೇ ಹಮ್ ಕಹಾನ್ ನಲ್ಲಿ ಮತ್ತು ಕಾಲ್ ಮಿ ಬೇ ಎಂಬ ವೆಬ್ ಸಿರೀಸ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Ananya Panday buys her own home on Diwali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X