ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
ಬಾಲಿವುಡ್‌ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಟಿ ಪ್ರೀತಿ ಜಿಂಟಾ ಇದೀಗ ಬಹಳಷ್ಟು ಸಕ್ಸಸ್‌ಫುಲ್ ನಟಿ. ಹೌದು, ಐಪಿಎಲ್ ಆರಂಭವಾಗುತ್ತಿದ್ದಂತೆ ನಟಿ ಪ್ರೀತಿ ಜಿಂಟಾ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿದೆ. ಐಪಿಎಲ್ ತಂಡ ಒಂದರ ಮಾಲೀಕತ್ವ ಪಡೆದಿರುವ ನಟಿ ಪ್ರೀತಿ ಜಿಂಟಾ ಅವರು ಇದೀಗ ಒಂದು ಹೊಸ ಸಿನಿಮಾ ಮೂಲಕ ನಟನೆಗೆ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ.
ಹೌದು, ನಟಿ ಪ್ರೀತಿ ಜಿಂಟಾ ಪಂಜಾಬ್ ಐಪಿಎಲ್ ಟೀಮ್ ಒಡತಿಯಾಗಿದ್ದು, ತಮ್ಮ ಟೀಮ್ ಅನ್ನು ಚೆನ್ನಾಗಿ ಮ್ಯಾನೇಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಹೊಸ ಸಿನಿಮಾ ಮೂಲಕ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡುವ ನಿರ್ಧಾರ ಮಾಡಿದ್ದಾರೆ. ಪ್ರೀತಿ ಜಿಂಟಾ ಕೇವಲ ಸಿನಿಮಾ, ಐಪಿಎಲ್ ಅಷ್ಟೇ ಕೆಲವು ಸಮಾಜಮುಖಿ ಕೆಲಸ ಕೂಡ ಮಾಡಿದ್ದಾರೆ.

ಪ್ರೀತಿ ಜಿಂಟಾ ಮದುವೆಯಾಗುವ ಮೊದಲೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ್ದರು. ಅಂದರೆ, ತಮ್ಮ ಸಿನಿಮಾದಲ್ಲಿ ಬಂದ ಹಣದಿಂದ ಮಹಿಳಾ ಮತ್ತು ಮಕ್ಕಳ ಸಹಾಯ ಸಂಘವನ್ನು ತೆರೆದ ನಟಿ ಪ್ರೀತಿ ಜಿಂಟಾ 34 ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಜೀವನ ರೂಪಿಸುವಲ್ಲಿ ಸಹಾಯವಾಗಿದ್ದಾರೆ. ಇಂದಿಗೂ ಆ 34 ಮಕ್ಕಳ ಹೊಣೆ ಹೊತ್ತಿದ್ದಾರೆ.
ಜೀನ್ ಗುಡೆನಾಫ್ ಎಂಬುವವರನ್ನು ಮದುವೆಯಾಗಿರುವ 49 ವರ್ಷದ ನಟಿ ಪ್ರೀತಿ ಜಿಂಟಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾಗುವುದಕ್ಕೆ ಬಾಡಿಗೆ ತಾಯ್ತನದ ಮೊರೆ ಹೋದ ಈ ನಟಿ ಸದಾ ನಗುಮೊಗದಿಂದ ಜೀವನದ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಈ ನಗುವಿನ ಹಿಂದೆ ಒಂದು ನೋವಿನ ಕಥೆಯೂ ಇದೆ.
ಹೌದು, ಬರೇ 13 ವರ್ಷವಿದ್ದಾಗ ತಂದೆಯನ್ನು ಕಳೆದುಕೊಳ್ಳುವ ನಟಿ ಪ್ರೀತಿ ಜಿಂಟಾ ಅವರು, ಆ ನೋವು ಮಾಡಿಸುವ ಮೊದಲೇ ಎರಡೇ ವರ್ಷದೊಳಗೆ ತಾಯಿಯನ್ನು ಕಳೆದುಕೊಂಡು ಅನಾಥರಾದರು. ತಂದೆ ತಾಯಿ ಇಲ್ಲದ ಬದುಕುವ ಕಷ್ಟವನ್ನು ಅರಿತಿರುವ ಇವರು ದೊಡ್ಡವರಾಗಿ ಯಶಸ್ವಿ ನಟಿಸಿ ಎಂದೆನಿಸಿಕೊಂಡ ಮೇಲೆ 34 ಅನಾಥ ಮಕ್ಕಳ ಪಾಲಿಗೆ ತಾಯಿಯಾದರು.

ಸದ್ಯಕ್ಕೆ ತಮ್ಮ ವೈವಾಹಿಕ ಜೀವನದ ಜೊತೆಗೆ ಐಪಿಎಲ್ ತಂಡ ಹಾಗೂ 34 ಮಕ್ಕಳ ಜವಾಬ್ದಾರಿಯನ್ನು ಸರಿ ಸಮನಾಗಿ ಹೊತ್ತಿರುವ ನಟಿ ಪ್ರೀತಿ ಜಿಂಟಾ ಅವರು ಸನ್ನಿ ಡಿಯೋಲ್ ಅವರೊಂದಿಗೆ 1947 ಎಂಬ ಸಿನಿಮಾದಲ್ಲಿ ನಟಿಸಿ ಬಾಲಿವುಡ್‌ಗೆ ಮತ್ತೆ ಮರಳುವ ಮಾಡುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications











