ರಶ್ಮಿಕಾರನ್ನು ಮೇಡಂ ಎಂದು ಕರೆಯುವ ಏಕೈಕ ಸೂಪರ್ ಸ್ಟಾರ್ ಇವರೇ!
ರಶ್ಮಿಕಾ ಮಂದಣ್ಣ ಇದೀಗ ತೆಲುಗು ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ಕನ್ನಡದ ನಂತರ, ತೆಲುಗು ಮತ್ತು ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆಯ ನಟಿ. ಟಾಪ್ ನಾಯಕಿಯರಲ್ಲಿ ಒಬ್ಬರಾಗಿ ಈಗ ಹಿಂದಿಯಲ್ಲೂ ಬ್ಯೂಸಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಜೊತೆಗೆ ನಟಿಸಿರುವ 'ಪುಷ್ಪ' ಸಿನಿಮಾದಿಂದ ರಶ್ಮಿಕಾ ಕ್ರೇಜ್ ಮತ್ತಷ್ಟು ಹೆಚ್ಚಿದೆ. ಈ ಒಂದೇ ಚಿತ್ರದ ಮೂಲಕ ನಾರ್ತ್‌ನಲ್ಲೂ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ನಟಿದ್ದಾರೆ. ಆದರೆ ಅವರನ್ನು ಮೇಡಂ ಅಂತ ಕರೆಯೋದು ಒಬ್ಬರು ಮಾತ್ರ ಅಂತೆ.
ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ. ಸದ್ಯ ಸಂದೀಪ್ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣ್ಬೀರ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. ಈ ವಿಚಾರ ಈಗಾಗಲೇ ಬಹಿರಂಗವಾಗಿದೆ. ಈ ಚಿತ್ರದ ಬ್ಗಗೆ ಈಗ ಹೇಳಲು ಕಾರಣ ರಶ್ಮಿಕಾರನ್ನು ಮೇಡಂ ಅಂತ ಕರೆಯೋದು ಮತ್ಯಾ ಅಲ್ಲ ರಣ್ಬೀರ್ ಕಪೂರ್.

ಇತ್ತೀಚೆಗಷ್ಟೇ ರಶ್ಮಿಕಾ ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. "ರಣಬೀರ್ ಕಪೂರ್ ತುಂಬಾ ಒಳ್ಳೆಯವರು. ಆದರೆ ನಾನು ಅವರನ್ನು ಮೊದಲು ಭೇಟಿಯಾದಾಗ, ತುಂಬಾ ನರ್ವಸ್ ಆಗಿದ್ದೆ , ಆದರೆ ಭೇಟಿಯಾದ ಐದೇ ನಿಮಿಷದಲ್ಲಿ ಅವರೊಂದಿಗೆ ಆತ್ಮೀಯಳಾದೆ." ಎಂದು ಹೇಳಿಕೊಂಡಿದ್ದಾರೆ.
"ಅಲ್ಲದೇ ಚಿತ್ರರಂಗದಲ್ಲಿ ರಣ್ಬೀರ್ ಒಬ್ಬರೇ ಮೇಡಂ ಎಂದು ಕರೆಯುತ್ತಾರೆ. ಇತ್ತೀಚೆಗೆ ಮನಾಲಿಯಲ್ಲಿ 'ಅನಿಮಲ್' ಚಿತ್ರದ ಶೂಟಿಂಗ್ ಮುಗಿಸಿದ್ದೇವೆ" ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

ಟಾಲಿವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳಾದ ಮಹೇಶ್‌ಬಾಬು, ಅಲ್ಲು ಅರ್ಜುನ್ ಮತ್ತು ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ತೆರೆ ಹಂಚಿಕೊಳ್ಳುವ ಮೂಲಕ ಇದೀಗ ಬಾಲಿವುಡ್ಗೂ ಪಾದಾರ್ಪಣೆ ಮಾಡಿದ್ದಾರೆ.
ಇನ್ನು ಸದ್ಯ ರಶ್ಮಿಕಾ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದು, ಬಾಲಿವುಡ್ನಲ್ಲಿ ಸಹ ಎರಡು ಚಿತ್ರ ಒಪ್ಪಿಕೊಂಡಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಮಿತಾಬ್ ಜೊತೆ ಸಹ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ.


Click it and Unblock the Notifications











