ಐಪಿಎಲ್‌ನಲ್ಲಿ ಮಿಂಚಿದ ಈ ನಟಿ ಯಾರು ? ನೆನಪಿದೆಯಾ ? ಕನ್ನಡದಲ್ಲಿ ನಟಿಸಿದ್ದರು ಈ ಚೆಲುವೆ..!

ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ. ದಿನಗಳು ಉರುಳಿದಂತೆ ಐಪಿಎಲ್ ನ ಕ್ರೇಜ್ ಇನ್ನು ಹೆಚ್ಚಾಗುತ್ತೆ.ಟೂರ್ನಿ ರೋಚಕ ಹಂತಕ್ಕೆ ತಲುಪುತ್ತೆ.

ಇನ್ನು ಐಪಿಎಲ್ ಕೇವಲ ಕ್ರಿಕೆಟ್ ಪ್ಲೇಯರ್‌ಗಳ ಹಣೆ ಬರಹವನ್ನಷ್ಟೇ ಬದಲಿಸುವುದಿಲ್ಲ. ಮೈದಾನಕ್ಕೆ ಮ್ಯಾಚ್ ನೋಡಲು ಬರುವ ಅಭಿಮಾನಿಗಳ ಹಣೆಬರಹವನ್ನು ಕೂಡ ಬದಲಿಸುತ್ತೆ. ಇದಕ್ಕೆ ಹಲವಾರು ಉದಾಹರಣೆಗಳು ಇವೆ. ಕ್ಯಾಮರಾ ಮ್ಯಾನ್‌ಗಳ ಕೃಪೆಯಿಂದ ಅನೇಕರು ನೋಡ ನೋಡುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದಾರೆ. ಇನ್ನು, ಕೆಲವೊಮ್ಮೆ ಎಲ್ಲರು ಮರೆತು ಹೋದವರು ಮತ್ತೆ ಎದ್ದು ನಿಂತು ಮೆರೆದಿದ್ದಾರೆ. ಸೋನಲ್ ಚೌಹಾಣ್ ಇದಕ್ಕೆ ಸದ್ಯದ ಉದಾಹರಣೆ.

Do you know the actress who stole the spotlight during the MI vs SRH match at Wankhede She s Sonal

ಹೌದು, ಸೋನಲ್ ಚೌಹಾಣ್.. ಬಾಲಿವುಡ್‌ನ ಬೆಡಗಿ. ವಿಶ್ವ ಸುಂದರಿ ಟೂರಿಸಂ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲ ಮಹಿಳೆ. 2008ರಲ್ಲಿ ಐಪಿಎಲ್‌ನ ಮೊದಲ ಸೀಸನ್ ಆರಂಭವಾದಾಗ ಜನ್ನತ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಇವರು.

ಜನ್ನತ್ ಚಿತ್ರದ ನಂತರ ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದ ಸೋನಲ್ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಡಾ.ಶಿವರಾಜ್ ಕುಮಾರ್ ಅವರ ಜೊತೆ ನಟಿಸಿದರು. ಆದರೆ ಆ ನಂತರ ಸೋನಲ್‌ಗೆ ಬಾಲಿವುಡ್‌ನಲ್ಲಿ ಕೂಡ ಅವಕಾಶ ಸಿಗಲಿಲ್ಲ. ದಕ್ಷಿಣ ಭಾರತದ ಚಿತ್ರರಂಗ ಕೂಡ ಸೋನಲ್ ಅವರನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಮಾಡಿದ್ದ ಚಿತ್ರಗಳು ಕೂಡ ಸೋನಲ್‌ಗೆ ಹೆಸರು ತಂದು ಕೊಡಲಿಲ್ಲ.

ಇನ್ನು ಇದರ ನಡುವೆ ಅವಕಾಶಗಳಿಂದ ವಂಚಿತರಾದ ಸೋನಲ್ 3G ಎಂಬ ಭಯಾನಕ ಚಿತ್ರವನ್ನು ಮಾಡಿದ್ದರು. ಒಂದಲ್ಲ, ಎರಡಲ್ಲ, 30 ಲಿಪ್ ಲಾಕ್ ದೃಶ್ಯಗಳು ಈ ಚಿತ್ರದಲ್ಲಿದ್ದವು. ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಪರಮತೋಪು ಚಿತ್ರಗಳಲ್ಲಿ ಒಂದು ಎನ್ನುವ ಕುಖ್ಯಾತಿಗೆ ಈ ಚಿತ್ರ ಪಾತ್ರವಾಯಿತು.

ಹೀಗೆ ಏನೇ ಮಾಡಿದರು ಗೆಲುವು ಸಿಗದ ಹಿನ್ನೆಲೆ 2018ರಿಂದ ಚಿತ್ರರಂಗದಿಂದ ದೂರ ಇದ್ದ ಸೋನಲ್ 2021ರ ನಂತರ ಚಿತ್ರರಂಗದಲ್ಲಿ ತಮ್ಮ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ. ಇಂಥಾ ಸೋನಲ್ ಚೌಹಾಣ್ ಅವರನ್ನು ಬಹುತೇಕ ಚಿತ್ರರಸಿಕರು ಮರೆತೇ ಹೋಗಿದ್ದರು. ಹೀಗಾಗಿಯೇ ಮೊನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಸೋನಲ್ ಅವರನ್ನು ನೋಡಿದ ಹಲವಾರು ಜನ ಆಶ್ಚರ್ಯ ಚಕಿತರಾದರು. ನಟಿ ವೇದಿಕಾ ಪಕ್ಕ ಇದ್ದ ಕಾರಣಕ್ಕೆ ಯಾರಿದು ಎಂದು ತಲೆ ಕೆಡಿಸಿಕೊಂಡರು. ಮತ್ತೂ ಕೆಲವರು ಅರೇ, ಇವರು ಸೋನಲ್ ಚೌಹಾಣ್ ಅಲ್ವಾ ಎಂದು ಗುರುತು ಹಿಡಿದರು.

ಸದ್ಯ ಸೋನಲ್ ಚೌಹಾಣ್ ಮೊನ್ನೆ ಮುಂಬೈ ಮತ್ತು ಹೈದರಾಬಾದ್ ನಡುವಿನ ಮ್ಯಾಚ್ ನೋಡುತ್ತಿದ್ದ ಫೋಟೊಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅನೇಕರು ಸೋನಲ್ ಸೌಂದರ್ಯಕ್ಕೆ ಮನ ಸೋತಿದ್ದಾರೆ. ವಯಸ್ಸಾದರು ಕೂಡ ಸೋನಲ್ ಹಿಂದಿಗಿಂತಲೂ ತುಂಬಾ ಚೆನ್ನಾಗಿ, ಮುದ್ದಾಗಿ ಕಾಣುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ಈ ಪಂದ್ಯದಲ್ಲಿ ಹೈದರಾಬಾದ್ ವಿರುದ್ದ ಮುಂಬೈ ತಂಡ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್‌ಗಳನ್ನು ಮಾತ್ರ ಗಳಿಸಿತ್ತು. ಈ ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ವಿಲ್ ಜ್ಯಾಕ್ಸ್, ರಯಾನ್ ರಿಕಟ್ಲಾನ್, ಸೂರ್ಯ ಕುಮಾರ್ ಯಾದವರ ಅವರ ಆಟದ ಬಲದಿಂದ 18.1 ಓವರ್‌ಗಳಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿ ಗೆಲುವು ದಾಖಲಿಸಿತು.

More from Filmibeat

English summary
Under Wankhede’s blazing lights, as MI battled SRH, the crowd roared with every ball.But eyes shifted—not to the pitch, but to a radiant figure in the stands.Sonal Chauhan had arrived, and she stole the spotlight effortlessly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X