63 ಸಾವಿರ ಬೆಲೆಯ ಸೀರೆಯುಟ್ಟು ಅಯೋಧ್ಯೆ ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ

By ಫಿಲ್ಮಿಬೀಟ್ ಡೆಸ್ಕ್

ಭಾರತದಲ್ಲಿ ಹೋಳಿ ಸಂಭ್ರಮ ಶುರುವಾಗಿದೆ. ಇದೇ ಬೆನ್ನಲ್ಲೇ ಪ್ರಿಯಾಂಕಾ ಚೋಪ್ರಾ ಭಾರತದಕ್ಕೆ ಭೇಟಿ ಕೊಟ್ಟಿದ್ದಾರೆ. ಇವರೊಂದಿಗೆ ಪತಿ ನಿಕ್ ಜೋನಸ್ ಹಾಗೂ ಪುತ್ರಿ ಮಾಲ್ತಿ ಕೂಡ ಜೊತೆಯಾಗಿದ್ದಾರೆ. ಈ ಬಾರಿಯ ವಿಶೇಷ ಅಂದರೆ, ಪ್ರಿಯಾಂಕಾ ಚೋಪ್ರಾ ಭಾರತದ ಬಂದ ಬೆನ್ನಲ್ಲೇ ಅಯೋಧ್ಯೆ ರಾಮ ಮಂದಿರಕ್ಕೆ ವಿಸಿಟ್ ಹಾಕಿದ್ದಾರೆ.

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ , ಪತಿ ನಿಕ್ ಜೋನಸ್ ಹಾಗೂ ಪುತ್ರಿ ಮಾಲ್ತಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ಕೊಟ್ಟಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಕುಟುಂಬ ರಾಮ ಮಂದಿರಕ್ಕೆ ಭೇಟಿ ಕೊಟ್ಟು ದರ್ಶನ ಮಾಡಿದ್ದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

Do you know the saree cost of Priyanka Chopra while visiting Ayodhya Ram Mandir

ಆದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ ಅಯೋಧ್ಯೆ ರಾಮ ಮಂದಿರದ ಭೇಟಿಗಿಂತ ಅವರು ಉಟ್ಟಿದ್ದ ಸೀರೆಯ ಬಗ್ಗೆನೇ ಹೆಚ್ಚು ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಯೋಧ್ಯೆಗೆ 63 ಸಾವಿರ ಬೆಲೆಯ ಸಿಲ್ಮ್ ಸೀರೆಯುಟ್ಟು ಭೇಟಿ ಕೊಟ್ಟಿದ್ದಾರೆಂದು ವರದಿಯಾಗಿತ್ತು. ಆ ಬೆನ್ನಲ್ಲೇ ಮಹಿಳಾ ಮಣಿಗಳು ಆ ಸೀರೆಯ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಿದ್ದರೆ ಪ್ರಿಯಾಂಕಾ ಉಟ್ಟಿದ್ದ ಆ ಸೀರೆ ಯಾವುದು? ಆ ಸೀರೆಯ ಬೆಲೆ ಏನು? ತಿಳಿಯುವುದಕ್ಕೆ ಮುಂದೆ ಓದಿ.

63 ಸಾವಿರದ ಬೆಲೆಯ ಸೀರೆಯುಟ್ಟ ಪ್ರಿಯಾಂಕಾ

ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ತನ್ನ ಆಚಾರ ವಿಚಾರಗಳನ್ನು ಮರೆತಿಲ್ಲ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಪ್ರಿಯಾಂಕಾ ತನ್ನ ಕುಟುಂಬದೊಂದಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಆಕೆ ಉಟ್ಟಿದ್ದ ದುಬಾರಿ ಸೀರೆ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಪ್ರಿಯಾಂಕಾ ಧರಿಸಿದ್ದ 63 ಸಾವಿರ ಬೆಲೆಯ ಸಿಲ್ಕ್ ಸೀರೆ.

ಆ ಸೀರೆಗ್ಯಾಕೆ ಅಷ್ಟು ಬೆಲೆ?

ಪ್ರಿಯಾಂಕಾ ಚೋಪ್ರಾ ಉಟ್ಟಿದ್ದು ಚಾಂದೇರಿ ಸಿಲ್ಕ್ ಸೀರೆ ಎಂದು ಚರ್ಚೆಯಾಗುತ್ತಿದೆ. ಇದು ಭಾರತದ ದುಬಾರಿ ಬೆಲೆಯ ಸೀರೆಗಳಲ್ಲಿ ಒಂದು ಹೇಳಲಾಗುತ್ತಿದೆ. ಬೇರೆ ಬೇರೆ ಬೆಲೆಯಲ್ಲಿ ಚಾಂದೇರಿ ಸಿಲ್ಕ್ ಸೀರೆಗಳು ಸಿಗುತ್ತವೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಪ್ಯೂರ್ ಸಿಲ್ಕ್ ಸೀರೆಯನ್ನು ಉಟ್ಟಿದ್ದರು ಎನ್ನಲಾಗಿದೆ. ಹಳದಿ ಬಣ್ಣದ ಸೀರೆಯ ಮೇಲೆ ಹೂವಿನ ಚಿತ್ರಗಳನ್ನು ಬಿಡಿಸಲಾಗಿತ್ತು. ಹಾಗೇ ಗೋಲ್ಡನ್ ಬಾರ್ಡರ್ ಇಡಲಾಗಿದ್ದು, 'ರಾ ಮ್ಯಾಂಗೋ ಬ್ರ್ಯಾಂಡ್' ಎಂದು ಹೇಳಲಾಗಿದೆ.

ಯಾವ್ಯಾವ ಬೆಲೆಯಲ್ಲಿ ಲಭ್ಯ

ಚಾಂದೇರಿ ಸಿಲ್ಕ್ ಸೀರೆಗಳು ಮಾರ್ಕೆಟ್‌ನಲ್ಲಿ ಬೇರೆ ಬೇರೆಯಲ್ಲಿ ಲಭ್ಯವಿದೆ. ಪ್ರಿಯಾಂಕಾ ತೊಟ್ಟ ಸೀರೆಯ ಬೆಲೆ 63 ಸಾವಿರ ಆಗಿದ್ದರೆ, ಇದಕ್ಕಿಂತಲೂ ಕಡಿಮೆ ಬೆಲೆಯಲ್ಲೂ ಈ ಸೀರೆಗಳು ಲಭ್ಯವಿದೆ. ಮಹಿಳೆಯರು ಸೀರೆ ಪ್ರಿಯರಾಗಿದ್ದರೆ? ಆನ್‌ಲೈನ್‌ ಈ ಸೀರೆಗಳು ಲಭ್ಯವಿದೆ. ಸಾಮಾನ್ಯವಾಗಿ ನಟಿಯರು ಉಟ್ಟ ಸೀರೆಗಳು ಇಷ್ಟ ಆದರೆ, ಮಹಿಳೆಯರು ಮುಗಿಬಿದ್ದು ಸೀರೆಗಳನ್ನು ಕೊಂಡು ಕೊಳ್ಳುತ್ತಾರೆ.

ನಿರ್ಮಾಣದಲ್ಲೂ ಪ್ರಿಯಾಂಕಾ ಬ್ಯುಸಿ

ಪ್ರಿಯಾಂಕಾ ಚೋಪ್ರಾ ಹೋಳಿ ವೀಕೆಂಡ್‌ಗಾಗಿ ಭಾರತಕ್ಕೆ ಮರಳಿದ್ದಾರೆ. ಪತಿ ನಿಕ್ ಜೋನಸ್ ಹಾಗೂ ಆಪ್ತರೊಂದಿಗೆ ಹೋಳಿ ಸೆಲೆಬ್ರೆಟ್‌ ಮಾಡಲಾಗಿದ್ದಾರೆ. ಇದರ ಜೊತೆನೇ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದಾರೆ. ಹೀಗಾಗಿ ಅದರ ಕಾರ್ಯಗಳನ್ನು ಪ್ರಿಯಾಂಕಾ ಬ್ಯುಸಿಯಾಗಿದ್ದು, ಆ ಎಲ್ಲಾ ಕೆಲಸಗಳು ಮುಗಿದ ಬಳಿಕ ಮತ್ತೆ ಅಮೆರಿಕಾಗೆ ತೆರಳಲಿದ್ದಾರೆ.

More from Filmibeat

English summary
Priyanka Chopra visited Ayodhya Ram Mandir in a yellow saree worth 63 thousand:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X