ಬ್ರಿಟಿಷ್ ಮಹಿಳೆ ಜೊತೆ ಆಮಿರ್ ಖಾನ್ ಲವ್ವಿಡವ್ವಿ: ಮಗು ನೀಡಿ ಕೈ ಎತ್ತಿದ್ರಾ ನಟ? ಆ ಮಗ ಈಗ ಎಲ್ಲಿದ್ದಾನೆ?
ಸೆಲೆಬ್ರಿಟ್ರಿಗಳ ಬಾಳಲ್ಲಿ ಲವ್, ಅಫೇರ್, ಡೇಟಿಂಗ್ ಅಂತಹ ಸುದ್ದಿಗಳು ಬಾರದೇ ಹೋದರೆ ಹೇಗೆ? ಇವೆಲ್ಲವೂ ಸಾಮಾನ್ಯವಾಗಿ ಚರ್ಚೆಯಾಗುತ್ತಲೇ ಇರುತ್ತವೆ. ಅದರಲ್ಲೂ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಇಂತಹ ಸುದ್ದಿಗಳು ಓಡುವುದು ಸ್ವಲ್ಪ ಜಾಸ್ತಿನೇ ಆಗಿದೆ. ಆದರೆ, ಈಗ ಹೇಳ್ತಿರೋ ಸುದ್ದಿ ಈ ಜಮಾನದ್ದು ಅಲ್ಲವೇ ಅಲ್ಲ. ಹೀಗಾಗಿ ಸತ್ಯಾಸತ್ಯತೆಗಳು ಸಿನಿಪ್ರಿಯಗೆ ಸ್ಪಷ್ಟವಾಗಿ ತಿಳಿಯಲೇ ಇಲ್ಲ.
ಇತ್ತೀಚೆಗೆ ಆಮಿರ್ ಖಾನ್ ಹೊಸ ಗರ್ಲ್‌ಫ್ರೆಂಡ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 60 ವರ್ಷಕ್ಕೆ ಕಾಲಿಟ್ಟಿರುವ ಆಮಿರ್ ಖಾನ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಗೌರಿ ಎಂಬುವವರೊಂದಿಗೆ ಕಳೆದ ಒಂದೂವರೆ ವರ್ಷದಿಂದ ಲಿವ್ ಇನ್ ರಿಲೀಷನ್‌ಶಿಪ್‌ನಲ್ಲಿ ಇದ್ದಾರೆ. ಈ ವಿಷಯವನ್ನು ಸ್ವತ: ಆಮಿರ್ ಖಾನ್ ಅವರೇ ಹೇಳಿಕೊಂಡ ಮೇಲೆ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಆಮಿರ್ ಖಾನ್ ಮೂರನೇ ಮದುವೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹಳೆಯ ಸುದ್ದಿಯೊಂದು ವೈರಲ್ ಆಗುತ್ತಿದೆ. 2005ರಲ್ಲಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಬಗ್ಗೆ ಇಂತಹದ್ದೊಂದು ಸುದ್ದಿ ಹರಿದಾಡಿತ್ತು. ಬ್ರಿಟಿಷ್ ಮಹಿಳೆಯೊಂದಿಗೆ ಗುಟ್ಟಾಗಿ ಸಂಬಂಧವಿಟ್ಟುಕೊಂಡಿದ್ದರು. ಆ ಮಹಿಳೆಗೆ ಮಗು ಕೂಡ ಆಗಿತ್ತು. ಆ ಮಹಿಳೆ ರಹಸ್ಯವಾಗಿ ಆ ಮಗುವನ್ನು ಬೆಳೆಸುತ್ತಿದ್ದಾರೆ ಅಂತ ಗುಲ್ಲೆದ್ದಿತ್ತು. ಅಸಲಿಗೆ ಏನಿದು ಸುದ್ದಿ? ಈ ಸುದ್ದಿಯ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
2005ರಲ್ಲಿ ನಿಯತಕಾಲಿಕೆಯೊಂದರಲ್ಲಿ ಇಂತಹದ್ದೊಂದು ಸುದ್ದಿ ಬಂದಿತ್ತು. ಜೆಸ್ಸಿಕಾ ಹೈನ್ಸ್ ಎಂಬ ಬ್ರಿಟನ್‌ನ ಪತ್ರಕರ್ತೆಯೊಬ್ಬರು ಭಾರತಕ್ಕೆ ಬಂದಿದ್ದರು. ಅವರಿಗೆ ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಬಗ್ಗೆ ಕೃತಿಯೊಂದನ್ನು ಬರೆಯ ಬೇಕಿತ್ತು. ಈ ಸಂಬಂಧ ಭಾರತಕ್ಕೆ ಬಂದಿದ್ದ ಜೆಸ್ಸಿಕಾ ಅವರಿಗೆ ಆಮಿರ್ ಖಾನ್ ಪರಿಚಯವಾಗಿದ್ದರು. ಈ ವೇಳೆ ಇಬ್ಬರಿಗೂ ಸಲುಗೆ ಬೆಳೆದು, ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿ ಇದ್ದರು ಎಂದು ಹೇಳಲಾಗಿತ್ತು.

ಆಮಿರ್ ಖಾನ್ ಹಾಗೂ ಜೆಸ್ಸಿಕಾ ಈ ಸಮಯದಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದರು. ಈ ವೇಳೆ ಆಮಿರ್ ಖಾನ್ 'ಗುಲಾಲ್' ಎನ್ನುವ ಸಿನಿಮಾದ ಚಿತ್ರೀಕರಣವನ್ನು ಮಾಡುತ್ತಿದ್ದರು. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಆಮಿರ್ ಖಾನ್, ಜೆಸ್ಸಿಕಾಗೆ ಹತ್ತಿರವಾದರು. ಹಾಗೇ ಜೆಸ್ಸಿಕಾ ಗರ್ಭಿಣಿ ಕೂಡ ಆದರು. ಆದರೆ ಆ ಸಮಯದಲ್ಲಿ ಆಮಿರ್ ಖಾನ್ ಮಗುವನ್ನು ಪಡೆಯಲು ಸಿದ್ಧರಿರಲಿಲ್ಲ. ಹೀಗಾಗಿ ಗೆಳತಿ ಜೆಸ್ಸಿಕಾಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಹಾಗೇನಾದರೂ ಒಪ್ಪದೇ ಹೋದರೆ, ಆಕೆಯೊಂದಿಗೆ ಸಂಬಂಧ ಕಡಿತಗೊಳಿಸುವುದಾಗಿ ಹೇಳಿದ್ದರು ಎಂದು ಆ ವೇಳೆ ವರದಿಯಾಗಿತ್ತು.
ಆದರೆ, ಜೆಸ್ಸಿಕಾಗೆ ಮಗುವನ್ನು ಕಳೆದುಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಆಮಿರ್ ಖಾನ್ ಈ ಸಂಬಂಧವನ್ನು ತೊರೆದರು. ಆಗ ಬ್ರಿಟನ್ ಮಹಿಳೆ ಜೆಸ್ಸಿಕಾ ತನ್ನ ದೇಶಕ್ಕೆ ಹಿಂತಿರುಗಿದ್ದರು. ಬಳಿಕನ ಅಲ್ಲಿನ ಉದ್ಯಮಿಯೊಂದಿಗೆ ವಿವಾಹವಾದರು. ಆ ಮಗುವನ್ನು ಜೆಸ್ಸಿಕಾ ರಹಸ್ಯವಾಗಿ ಬೆಳೆಸಿದ್ದಾರೆ. ಆ ಮಗುವಿನ ಹೆಸರು ಜಾನ್ ಎಂದು ವರದಿಯಾಗಿತ್ತು. ಈ ಸುದ್ದಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು.
ಈ ಸುದ್ದಿ ಸದ್ದು ಮಾಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು. ಯಾವುದೇ ಪುರಾವೆಗಳಿ ಇಲ್ಲದೆ ಇಂತಹ ಆರೋಪಗಳನ್ನು ಮಾಡಬಾರದು ಎಂದು ಕಿಡಿಕಾರಿದ್ದರು. ಇನ್ನೊಂದು ಈ ವರದಿಗೆ ಸಾಕ್ಷ್ಯಾಧಾರಗಳ ಕೊರತೆ ಇತ್ತು. ಆಮಿರ್ ಖಾನ್ ಕೂಡ ಈ ಸುದ್ದಿಯನ್ನು ನಿರಾಕರಿಸಿದ್ದರು. ಹೀಗಾಗಿ ಇದೊಂದು ಗಾಳಿ ಸುದ್ದಿಯಾಗಿಯೇ ಉಳಿದುಕೊಂಡಿದೆ. ನಿಜಕ್ಕೂ ಇಂತಹದ್ದೊಂದು ಸಂಗತಿ ನಡೆದಿತ್ತೇ ಅನ್ನೋದೇ ಅಚ್ಚರಿಯನ್ನಂತೂ ಮೂಡಿಸುತ್ತೆ.


Click it and Unblock the Notifications











