ರಣ್ವೀರ್ ಸಿಂಗ್ VS ಫರ್ಹಾನ್‌ ಅಖ್ತರ್ ; ಡಾನ್ 3 ವಿವಾದ - ವಿಫಲವಾದ ಸಂಧಾನ, ಕೈಚೆಲ್ಲಿದ ನಿರ್ಮಾಪಕರ ಸಂಘ

ಬಾಲಿವುಡ್ ಅಂಗಳದಲ್ಲಿ ಸದಾ ಏನಾದರೊಂದು ಸುದ್ದಿ ಸಂಚಲನ ಮೂಡಿಸುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ಖುಷಿ ಕೊಟ್ಟರೆ, ಇನ್ನು ಕೆಲವು ಸುದ್ದಿಗಳು ಶಾಕಿಂಗ್ ಆಗಿರುತ್ತವೆ. ಈಗ ಮುಂಬೈ ಫಿಲ್ಮ್ ನಗರಿಯಿಂದ ಇಂತಹದ್ದೇ ಒಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ. ಅದು ಎಷ್ಟರಮಟ್ಟಿಗೆ ಅಂದ್ರೆ, ದೊಡ್ಡ ದೊಡ್ಡ ನಿರ್ಮಾಪಕರೆಲ್ಲಾ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಸಿನಿಮಾ ಅಂದ್ರೆ ಬಣ್ಣದ ಲೋಕ, ಇಲ್ಲಿ ಗೆಳೆತನಕ್ಕಿಂತ ಹಣ ಮತ್ತು ವ್ಯವಹಾರವೇ ಮುಖ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಒಂದು ಕಾಲದಲ್ಲಿ ಆಪ್ತ ಮಿತ್ರರಾಗಿದ್ದವರೇ ಈಗ ಒಬ್ಬರ ಮುಖ ಒಬ್ಬರು ನೋಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಇದನ್ನೆಲ್ಲಾ ನೋಡ್ತಿರೋ ಫ್ಯಾನ್ಸ್ ಮಾತ್ರ "ಅರೇ.. ಇದೇನಿದು ಹೀಗಾಯ್ತು?" ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Don 3 Deadlock Producers Guild Gives Up Orders Ranveer Singh amp amp Farhan Akhtar to Court

ಹಾಗಾದ್ರೆ ಈ ಸಂಚಲನದ ಹಿಂದಿರೋ ಅಸಲಿ ವಿಷಯವೇನು? ಯಾರಿಗೂ ಗೊತ್ತಿಲ್ಲದ ಹಾಗೆ ತೆರೆಯ ಹಿಂದೆ ನಡೆಯುತ್ತಿರುವ ಆ ದೊಡ್ಡ ಸ್ಕೆಚ್ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ. ಯಾಕಂದ್ರೆ ಈ ಜಗಳ ಈಗ ಕೇವಲ ಮಾತುಕತೆಗೆ ಸೀಮಿತವಾಗಿಲ್ಲ, ಇದು ಈಗ ದೊಡ್ಡ ತಿರುವು ಪಡೆದುಕೊಂಡಿದೆ.

ರಣವೀರ್ ಸಿಂಗ್‌ಗೆ 40 ಕೋಟಿಯ ಶಾಕ್ ನೀಡಿದ್ದ ಫರ್ಹಾನ್ ಅಖ್ತರ್...

ಈಗ ಅಸಲಿ ವಿಷಯಕ್ಕೆ ಬರೋಣ. ಅದುವೇ 'ಡಾನ್ 3' ಸಿನಿಮಾದ ಕಿರಿಕ್. ನಟ ರಣವೀರ್ ಸಿಂಗ್ ಈ ಸಿನಿಮಾದಿಂದ ದಿಢೀರ್ ಹೊರಬಂದ ಮೇಲೆ, ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್ಟೈನ್ಮೆಂಟ್ ಕೆಂಡಾಮಂಡಲವಾಗಿದೆ. ವರದಿಗಳ ಪ್ರಕಾರ, ರಣವೀರ್ ಅವರ ಈ ನಿರ್ಧಾರದಿಂದ ನಮಗೆ ಭಾರಿ ನಷ್ಟವಾಗಿದೆ ಎಂದು ಫರ್ಹಾನ್ ಅಖ್ತರ್ ತಂಡ ವಾದಿಸುತ್ತಿದೆ. ಸಿನಿಮಾ ಸೆಟ್ಟೇರುವ ಮೊದಲೇ ಮಾಡಿದ ಖರ್ಚು, ಪ್ರಿ-ಪ್ರೊಡಕ್ಷನ್ ಕೆಲಸಗಳ ನಷ್ಟ ತುಂಬಿಕೊಡಬೇಕು ಎಂದು ಬರೋಬ್ಬರಿ 40 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರಂತೆ.

ಆದರೆ ರಣವೀರ್ ಸಿಂಗ್ ಸುಮ್ಮನೆ ಕೂರುವವರಲ್ಲ. ಅವರು ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಾನು ಯಾವುದೇ ಹಣಕಾಸಿನ ಹೊಣೆಗಾರಿಕೆಯನ್ನು ಹೊರುವುದಿಲ್ಲ" ಎಂದು ಅವರು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ. ಅವರ ಪ್ರಕಾರ, ಈ ವಿವಾದಕ್ಕೆ ಕಾರಣ ಚಿತ್ರಕಥೆಯ ಗೊಂದಲ ಮತ್ತು ನಿರ್ಮಾಪಕರ ನಡವಳಿಕೆಯೇ ಹೊರತು ನಟನಲ್ಲ. ರಣವೀರ್ ಮೊದಲು ಸ್ವಲ್ಪ ಹಣ ನೀಡಲು ಒಪ್ಪಿದ್ದರಾದರೂ, ಎಕ್ಸೆಲ್ ಸಂಸ್ಥೆ 40 ಕೋಟಿಯ ದೊಡ್ಡ ಮೊತ್ತ ಕೇಳಿದ ಕೂಡಲೇ ತಮ್ಮ ಪ್ರಸ್ತಾಪವನ್ನೇ ಹಿಂತೆಗೆದುಕೊಂಡಿದ್ದಾರೆ.

ಅಮಿರ್ ಖಾನ್ ಮನೆಯಲ್ಲಿ ನಡೆದ ರಹಸ್ಯ ಸಭೆ ಮತ್ತು ಗಿಲ್ಡ್ ಸಲಹೆ...

ಈ ವಿವಾದ ಎಷ್ಟು ದೊಡ್ಡದಾಗಿದೆ ಅಂದ್ರೆ, ಇತ್ತೀಚೆಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಅವರ ಮನೆಯಲ್ಲಿ ಒಂದು ಹೈ-ವೋಲ್ಟೇಜ್ ಸಭೆ ನಡೆದಿದೆ. ಈ ಸಭೆಯಲ್ಲಿ ಕರಣ್ ಜೋಹರ್, ಏಕ್ತಾ ಕಪೂರ್, ಸಾಜಿದ್ ನಾಡಿಯಾಡ್ವಾಲಾ ಅವರಂತಹ ದಿಗ್ಗಜ ನಿರ್ಮಾಪಕರು ಭಾಗವಹಿಸಿದ್ದರು. ರಣವೀರ್ ಮತ್ತು ಎಕ್ಸೆಲ್ ನಡುವಿನ ಈ ಹಗ್ಗಜಗ್ಗಾಟವನ್ನು ಅಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಎರಡೂ ಕಡೆಯವರು ತಮ್ಮ ಪರವಾಗಿರುವ ದಾಖಲೆಗಳನ್ನು ಸಭೆಯ ಮುಂದಿಟ್ಟಿದ್ದಾರೆ.

Don 3 Deadlock Producers Guild Gives Up Orders Ranveer Singh amp amp Farhan Akhtar to Court

''ವೆರೈಟಿ ಇಂಡಿಯಾ'' ವರದಿಯ ಪ್ರಕಾರ ಪರಿಸ್ಥಿತಿ ಕೈಮೀರುತ್ತಿರೋದನ್ನು ಕಂಡ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ, ಈಗ ಕೈಚೆಲ್ಲಿ ಕುಳಿತಿದೆ. ಇಬ್ಬರೂ ತಮ್ಮ ಪಟ್ಟಿನಿಂದ ಹಿಂದೆ ಸರಿಯುತ್ತಿಲ್ಲ, ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ನಮಗೆ ಸಾಧ್ಯವಿಲ್ಲ ಎಂದು ಗಿಲ್ಡ್ ಹೇಳಿದೆ. ಬದಲಾಗಿ, "ನೀವಿಬ್ಬರು ನಿಮ್ಮ ಕಾನೂನು ತಂಡಗಳ ಮೂಲಕವೇ ಈ ಯುದ್ಧ ಮಾಡಿ" ಎಂದು ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ಅಂದರೆ ಈಗ 'ಡಾನ್ 3' ವಿವಾದ ಕೋರ್ಟ್ ಮೆಟ್ಟಿಲೇರುವುದು ಬಹುತೇಕ ಖಚಿತವಾಗಿದೆ.

ಫ್ಯಾನ್ಸ್ ಮನದಲ್ಲಿ ಈಗ ಹತ್ತಾರು ಪ್ರಶ್ನೆಗಳು...

ಸಿನಿಮಾ ಘೋಷಣೆ ಆದಾಗ ಇದ್ದ ಸಂಭ್ರಮ ಈಗ ಮಾಯವಾಗಿದೆ. ರಣವೀರ್ ಸಿಂಗ್ ಇಲ್ಲದ 'ಡಾನ್ 3' ಭವಿಷ್ಯ ಏನು? ಅವರು ಹೊರಬರಲು ಅಸಲಿ ಕಾರಣವೇನು? ಅವರ ಜಾಗಕ್ಕೆ ಹಳೆಯ ಡಾನ್ ಶಾರುಖ್ ಖಾನ್ ಮರಳಿ ಬರುತ್ತಾರಾ? ಇವೆಲ್ಲವೂ ಈಗ ಸದ್ಯಕ್ಕೆ ನಿಗೂಢ. ಒಟ್ಟಿನಲ್ಲಿ ಬಾಲಿವುಡ್‌ನ ಈ 'ಡಾನ್' ಗಲಾಟೆ ಮಾತ್ರ ಈಗ ಸಖತ್ ಸೌಂಡ್ ಮಾಡ್ತಿದೆ.

More from Filmibeat

English summary
Mediation fails! Even Bollywood’s top stars couldn’t settle the Don 3 row. Find out why the Producers Guild of India is now pushing for a legal battle.
Read more about: ranveer singh farhan akhtar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X