Don-3: ಬಾಲಿವುಡ್‌ಗೆ ಹೊಸ ಡಾನ್ ಎಂಟ್ರಿ: ಟೀಸರ್ ರಿಲೀಸ್.. ಸೆಟ್ಟೇರುವುದಕ್ಕು ಮೊದ್ಲೆ ಬಾಯ್ಕಾಟ್ ರಗಳೆ
ಬಾಲಿವುಡ್‌ನಲ್ಲಿ ಹೊಸ ಡಾನ್ ಆರ್ಭಟಕ್ಕೆ ರಂಗ ಸಿದ್ಧವಾಗಿದೆ. ಯಶ್, ಹೃತಿಕ್ ರೋಷನ್, ಶಾಹಿಟ್ ಕಪೂರ್ ಕೂಡ ಅಲ್ಲ ರಣ್‌ವೀರ್ ಸಿಂಗ್ 'ಡಾನ್' ಆಗಿ ನಟಿಸೋದು ಕನ್ಫರ್ಮ್ ಆಗಿದೆ. ಟೀಸರ್ ಸಮೇತ ಈ ವಿಚಾರವನ್ನು ಚಿತ್ರತಂಡ ಸ್ಪಷ್ಟಪಡಿಸಿದೆ. ಆದರೆ ನೆಟ್ಟಿಗರು ಮಾತ್ರ ಈ ಸಿನಿಮಾ ನಾವು ನೋಡಲ್ಲ ಎನ್ನುತ್ತಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಡಾನ್ ಅಂದಾಕ್ಷಣ ನೆನಪಾಗುವುದು ಬಿಗ್‌ಬಿ ಅಮಿತಾಬ್ ಬಚ್ಚನ್.
70ರ ದಶಕದಲ್ಲಿ ಅಮಿತಾಬ್ ಡಾನ್ ಆಗಿ ತೆರೆಮೇಲೆ ದರ್ಬಾರ್ ಮಾಡಿದ್ದರು. 5 ವರ್ಷಗಳ ಬಳಿಕ ಅದರ ಸೀಕ್ವೆಲ್‌ನಲ್ಲಿ ಮತ್ತೆ ಕಿಂಗ್ ಖಾನ್ ಕಮಾಲ್ ಮಾಡಿದ್ದರು. ಕಳೆದ ಕೆಲ ದಿನಗಳಿಂದ 'ಡಾನ್- 3' ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು. ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ಶುರುವಾಗಿತ್ತು. ಆದರೆ ಹೀರೊ ಯಾರು ಅನ್ನೋದು ಸ್ಪಷ್ಟವಾಗಿರಲಿಲ್ಲ. ಶಾರೂಖ್ ಖಾನ್ ನಟಿಸಲ್ಲ ಎನ್ನುತ್ತಿದ್ದಂತೆ ಹೊಸ ಕಲಾವಿದರ ಹೆಸರುಗಳು ಚಾಲ್ತಿಗೆ ಬಂದಿತ್ತು.

ರಾಕಿಂಗ್ ಸ್ಟಾರ್ ಯಶ್, ಹೃತಿಕ್, ಮಹೇಶ್ ಬಾಬು ಹೀಗೆ ಹಲವರ ಹೆಸರು 'ಡಾನ್- 3' ಹೆಸರುಗಳು ಕೇಳಿಬಂದಿತ್ತು. ಇತ್ತೀಚೆಗೆ ರಣ್‌ವೀರ್ ಸಿಂಗ್ ಹೀರೊ ಆಗಿ ನಟಿಸೋದು ಬಹುತೇಖ ಪಕ್ಕ ಎನ್ನಲಾಗಿತ್ತು. ಇದೀಗ ಟೀಸರ್ ಸಮೇತ ಆ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿದೆ. ಆದರೆ ನೆಟ್ಟಿಗರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಡಾನ್' ನಮಗೆ ಶಾರೂಖ್ ಖಾನ್ ಒಬ್ಬರೇ. ಬೇರೆ ಯಾರನ್ನೂ ಆ ಪಾತ್ರದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ.
ಫರ್ಹಾನ್ ಅಖ್ತರ್ 'ಡಾನ್- 3' ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಿತೇಶ್ ಸಿದ್ವಾನಿ ಜೊತೆ ಸೇರಿ ತಮ್ಮದೇ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಣ್‌ವೀರ್ ಹೇಳುವ "ಮಲಗಿರುವ ಸಿಂಹ ಯಾವಾಗ ಎಚ್ಚರಗೊಳ್ಳುತ್ತದೆ? ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹವರಿಗೆ ನಾನು ಇಲ್ಲಿದ್ದೇನೆ ಅಂತ ಹೇಳು. ನಾನು ಏನನ್ನು ಮಾಡಿದ್ದೇನೆ, ನನ್ನ ತಾಕತ್ತು ಏನು ಅನ್ನೋದನ್ನು ತೋರಿಸಲು ನಾನು ವಾಪಸ್ ಬಂದಿದ್ದೇನೆ" ಎನ್ನುವ ಡೈಲಾಗ್ ಮೂಲಕ 'ಡಾನ್- 3' ಅನೌನ್ಸ್‌ಮೆಂಟ್ ಟೀಸರ್ ಗಮನ ಸೆಳೀತಿದೆ.
ಇನ್ನು 'ಡಾನ್' ಸಿನಿಮಾದ ಐಕಾನಿಕ್ ಡೈಲಾಗ್ ಕೂಡ ಟೀಸರ್‌ನಲ್ಲಿದೆ. 'ಮೆಹೂಂ ಡಾನ್' ಎಂದು ರಣ್‌ವೀರ್ ಸಿಂಗ್ ಗನ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರು ಶಾರೂಖ್ ಬಿಟ್ಟರೆ ಈ ಪಾತ್ರ ಯಾರಿಂದಲೂ ಮಾಡೋಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ರಣ್‌ವೀರ್ ಅಭಿಮಾನಿಗಳಿಗೆ ಟೀಸರ್ ಇಷ್ಟವಾಗಿದ್ದು ಸಿನಿಮಾ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದಾರೆ. 2025ರಲ್ಲಿ 'ಡಾನ್- 3' ಸಿನಿಮಾ ತೆರೆಗೆ ಬರಲಿದೆ.

'ಡಾನ್- 2' ಬಳಿಕ ಫರ್ಹಾನ್ ಅಖ್ತರ್ ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ. 'ಜೀ ಲೆ ಝಾರಾ' ಸಿನಿಮಾ ಅನೌನ್ಸ್ ಆಗಿದೆ. ಇದೀಗ 'ಡಾನ್- 3' ಸಿನಿಮಾ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹೊಸ ಪರ್ವ ಎಂದು ಹೇಳಿ ವಿಭಿನ್ನ ಕತೆ ಹೇಳಲು ಹೊರಟಿದ್ದಾರೆ. 'ಡಾನ್- 2' ಸಿನಿಮಾ ಬಂದು 12 ವರ್ಷಗಳ ಬಳಿಕ ಹೊಸ ಡಾನ್‌ನ ಕರ್ಕೊಂಡು ಬರಲಾಗುತ್ತಿದೆ. ಹಾಗಾಗಿ ಬಾಲಿವುಡ್‌ನಲ್ಲಿ ಸಹಜವಾಗಿಯೇ ನಿರೀಕ್ಷೆ ಮೂಡಿದೆ. ಇನ್ನು ನಾಯಕಿ ಯಾರು? ತಾರಾಗಣದಲ್ಲಿ ಯಾರೆಲ್ಲಾ ಇರ್ತಾರೆ? ಎನ್ನುವ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.
ಕೆಲವರು ಮಾತ್ರ ರಣ್‌ವೀರ್ ಸಿಂಗ್ 'ಡಾನ್' ಆಗಿ ಸಕ್ಸಸ್ ಕಾಣೋದು ಕಷ್ಟ ಎನ್ನುವ ರಾಗ ಎಳೆಯುತ್ತಿದ್ದಾರೆ. ಶಾರುಖ್ ಮಾತ್ರ ಆ ಪಾತ್ರಕ್ಕೆ ಸೂಕ್ತ, ಅವರೇ ನಟಿಸಬೇಕು ಎಂದು ಹೇಳುತ್ತಿದ್ದಾರೆ. ಕಿಂಗ್‌ಖಾನ್ ಇಲ್ಲದ 'ಡಾನ್- 3' ಸಿನಿಮಾ ಬಾಯ್ಕಾಟ್ ಮಾಡಿ ಎಂದು ಈಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.


Click it and Unblock the Notifications











