ಹೃತಿಕ್ ರೋಷನ್ ಮೇಲೆ ಕ್ರಶ್ ಹೊಂದಿದ್ದಕ್ಕೆ ಪತ್ನಿಯನ್ನೆ ಕೊಂದ ಪತಿ

ಸೆಲೆಬ್ರಿಟಿಗಳ ಮೇಲೆ ಜನಸಾಮಾನ್ಯರಿಗೆ ಕ್ರಶ್ ಆಗುವುದು, ಇಷ್ಟವಾಗುವುದು ಸಹಜ. ಅದರಲ್ಲು ಬಾಲಿವುಡ್ ನ ಗ್ರೀಕ್ ಗಾಡ್ ಹೃತಿಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇತ್ತೀಚಿಗಷ್ಟೆ ವಾರ್ ಸಿನಿಮಾ ನೋಡಿ ಫಿದಾ ಆದ ನಿರೂಪಕಿಯೊಬ್ಬರು ಹೃತಿಕ್ ಗೆ ವೀರ್ಯದಾನ ಮಾಡುವಂತೆ ಹೇಳಿದ್ದರು. ಹೀಗೆ ಹೃತಿಕ್ ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ.

ಅಮೆರಿಕದಲ್ಲಿ ನೆಲೆಸಿದ ಭಾರತದ ಗೃಹಿಣಿಯೋರ್ವಳಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ. ಪತ್ನಿ ಹೃತಿಕ್ ಇಷ್ಟಪಡುತ್ತಿರುವುದನ್ನು ಸಹಿಸಿಕೊಳ್ಳದ ಪತಿ ಕೋಪಕೊಂಡು ಆಕೆಯನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಮೆರಿಕದ ನ್ಯೂಯಾರ್ಕ್ ನಗರದ ಕ್ವೀನ್ಸ್ ಪ್ರಾಂತ್ಯದ ಜೆಮಿನಿ ಅಲ್ಟ್ರಾ ಲಾಂಜ್ ಬಾರ್ ನಲ್ಲಿ ಭಾರತದ ಮೂಲದ ಡೋನೆ ದೊಜೋಯ್ ಕೆಲಸ ಮಾಡುತ್ತಿದ್ದರು. ಅಲ್ಲೆ ನೆಲೆಸಿರುವ ದಿನೇಶ್ವರ ಬುದ್ಧಿದತ್ ಎಂಬಾತ ಡೋನೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಪತ್ನಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದು ಆಕೆಯನ್ನೆ ಹತ್ಯೆ ಮಾಡಿದ್ದಾನೆ.

Donne Doljoy Killed By Her Husband Because Of She Loved Hrithik Roshan

'ಕಹೋ ನ ಪ್ಯಾರ್ ಹೈ' ಚಿತ್ರ ನೋಡಿದಾಗಿನಿಂದ ದೊಜೋಯ್ ಗೆ ಹೃತಿಕ್ ಮೇಲೆ ಆಕರ್ಷಣೆ ಆಗಿದೆ. ಹೃತಿಕ್ ಅಭಿನಯದ ಎಲ್ಲಾ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಹಾಗಾಗಿ ಗಂಡನಿಗೆ ಆಕೆಯ ಮೇಲೆ ಅಸೂಯೆ ಇತ್ತಂತೆ. ಇದೇ ವಿಚಾರಕ್ಕೆ ಆಗಾಗ ಕಿತ್ತಾಟವಾಗುತ್ತಿತ್ತಂತೆ. ಈ ವಿಚಾರವನ್ನು ದೊಜೋಯ್ ಸ್ನೇಹಿತೆ ರೋಡ್ನಿ ಬಳಿ ಹೇಳಿಕೊಂಡು ನೋವನ್ನು ಹಂಚಿಕೊಂಡಿದ್ದರಂತೆ.

"ಅವನು ಕೆಲಸ ಮುಗಿಸಿ ಮನೆಗೆ ಬಂದಾಗ ದೊಜೋಯ್ ಹೃತಿಕ್ ರೋಷನ್ ಸಿನಿಮಾ ನೋಡುತ್ತ ಕುಳಿತಿದ್ದರೆ, ಕೋಪಗೊಂಡು ಟಿವಿ ಆಫ್ ಮಾಡಲು ಹೇಳುತ್ತಿದ್ದ. ಅಲ್ಲದೆ ಹೃತಿಕ್ ಮೇಲೆ ನನಗೆ ಅಸೂಯೆ ಇದೆ. ಅವನನ್ನು ಇಷ್ಟಪಡುವುದು ನನಗೆ ಇಷ್ಟವಿಲ್ಲ ಎಂದು ರೇಗಾಗುತ್ತಿದ್ದ" ಎಂದು ದೊಜೋಯ್ ಗೆಳತಿ ರೋಡ್ನಿ ಬಳಿ ಹೇಳಿಕೊಂಡಿದ್ದ ನೋವನ್ನು ರೋಡ್ನಿ ಬಹಿರಂಗ ಪಡಿಸಿದ್ದಾರೆ.

Donne Doljoy Killed By Her Husband Because Of She Loved Hrithik Roshan

ಇನ್ನು ಈ ಘಟನೆ ನಡೆಯುವ ಮುನ್ನ ಇಬ್ಬರು ಸಿನಿಮಾಗೆ ಹೋಗಿದ್ದರು. ಅಮೇಲೆ, ಆಲ್ಬರ್ಟ್ ರಸ್ತೆಯ ಓಜೋನ್ ಪಾರ್ಕ್ ಅಪಾರ್ಟ್ ಮೆಂಟ್ ಗೆ ಕರೆದೊಯ್ದು ದೊಜೋಯ್ ಳನ್ನು ಬುದ್ಧಿದತ್ ಕೊಲೆಗೈದಿದ್ದಾನೆ. ಆ ನಂತರ ಆತ ಹೊವಾರ್ಡ್ ಬಿಚ್ ಹತ್ತಿರ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

More from Filmibeat

English summary
Bollywood actor Hrithik Roshan fan Donne Doljoy killed by her husband because of she loved Hrithik Roshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X