For Quick Alerts
  ALLOW NOTIFICATIONS  
  For Daily Alerts

  ಇದೆಲ್ಲಾ ವೀಣಾ ಮಲಿಕ್ ಕುತಂತ್ರ ಎಂದ ನಟಿ ರಾಖಿ

  By Rajendra
  |

  ಇತ್ತೀಚೆಗೆ ಬಾಲಿವುಡ್ ನಟಿ ವೀಣಾ ಮಲಿಕ್ ಗೆ ಪಾಕಿಸ್ತಾನದ ಕೋರ್ಟ್ 26 ವರ್ಷಗಳ ಜೈಲು ಶಿಕ್ಷೆ ಜಾರಿ ಮಾಡಿತ್ತು. ಇದೀಗ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಹ ತಾಜಾ ವಿವಾದದಲ್ಲಿ ಸಿಲುಕಿದ್ದಾರೆ.

  ಟಿವಿ ಚಾನಲ್ ನಲ್ಲಿ ರಾಖಿ 'ಸ್ವಯಂವರ್' ರಿಯಾಲಿಟಿ ಶೋ ನಿರ್ವಹಿಸಿದ್ದು ಗೊತ್ತೇ ಇದೆ. ಭಾರತೀಯ ವಿವಾಹ ಸಂಪ್ರದಾಯವನ್ನು ಈ ಕಾರ್ಯಕ್ರಮದ ಮೂಲಕ ಅಪಮಾನಿಸಿದ್ದಾರೆ ಎಂದು ಮಹಾರಾಷ್ಟ್ರದ ಜಿಲ್ಲಾ ನ್ಯಾಯಾಲಯವೊಂದು ನೋಟೀಸ್ ಜಾರಿ ಮಾಡಿದೆ. [ರಂಗನ ಗಂಗಮ್ಮನ ಸ್ಟೈಲ್ ಗೆ ರಾಖಿ ಕ್ಲೀನ್ ಬೌಲ್ಡ್]

  "ಸ್ವಯಂವರ್ ಕಾರ್ಯಕ್ರಮದ ಮೂಲಕ ಇದುವರೆಗೂ ರಾಖಿ ಯಾರನ್ನೂ ವರಿಸದೆ, ತನ್ನ ಕುಚೋದ್ಯದ ಮೂಲಕ ಭಾರತೀಯರ ಮನೋಭಾವಗಳಿಗೆ ಧಕ್ಕೆ ತಂದಿದ್ದಾರೆ" ಎಂದು ಸದರಿ ನ್ಯಾಯಾಲಯದ ನೋಟೀಸ್ ನಲ್ಲಿ ಹೇಳಲಾಗಿದೆ.

  ಈ ನೋಟೀಸ್ ಬಗ್ಗೆ ರಾಖಿ ತನ್ನದೇ ಸ್ಟೈಲ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇದೆಲ್ಲಾ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಕುತಂತ್ರ" ಎಂದು ಹೇಳಿಕೆ ನೀಡಿದ್ದಾರೆ. ಸ್ವಯಂವರ್ ಕಾರ್ಯಕ್ರಮದ ಮೂಲಕ ತಮಗೆ ಒಳ್ಳೆಯ ಹೆಸರು ಬಂದಿದ್ದನ್ನು ಸಹಿಸದೆ ಹೊಟ್ಟೆಕಿಚ್ಚಿಗೆ ವೀಣಾ ಈ ರೀತಿ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  ಈ ಕೇಸ್ ಗೆ ಸಂಬಂಧಿಸಿದಂತೆ ಎಲ್ಲಾ ಮಾಧ್ಯಮಗಳ ಕಣ್ಣು ತನ್ನ ಮೇಲೆ ಬೀಳುವಂತಗಿದ್ದು ಎಲ್ಲಾ ದಯೆ ಜೀಸಸ್ ಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ ಎಂದಿದ್ದಾರೆ. ರಾಖಿಗೆ ಕೋರ್ಟ್ ನೋಟೀಸ್ ಜಾರಿ ಮಾಡಿರುವ ಬಗ್ಗೆ ರಾಹುಲ್ ಮಹಾಜನ್ ಪ್ರತಿಕ್ರಿಯಿಸುತ್ತಾ, ಆಕೆಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

  ಇದಕ್ಕೂ ಮೊದಲು ರಾಹುಲ್ ಮಹಾಜನ್ ಸಹ ಸ್ವಯಂವರ್ ಕಾರ್ಯಕ್ರಮವನ್ನು ನಿರ್ವಹಿಸಿ ಈ ಶೋ ಮೂಲಕ ಡಿಂಪಿ ಗಂಗೂಲಿಯನ್ನು ಮದುವೆಯಾಗಿದ್ದರು. ಆದರೆ ಅವರ ಮದುವೆ ಮೂರು ದಿನಗಳಲ್ಲಿ ಮುರಿದು ಬಿದ್ದದ್ದು ಬೇರೆ ವಿಷಯ.

  ರಾಖಿ ಸಾವಂತ್ ಇದುವರೆಗೂ ಸ್ವಯಂವರ್ ಕಾರ್ಯಕ್ರಮದ ಮೂಲಕ ಯಾರನ್ನೂ ಮದುವೆಯಾಗಲಿಲ್ಲ. ಸ್ವಯಂವರ ಪರಿಕಲ್ಪನೆಯನ್ನು ನಿಂದಿಸುವಂತೆ ನಡೆದುಕೊಂಡಿದ್ದಾರೆ. ನಾನು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸಿ ಸ್ವಯಂವರ ನಿಯಮಗಳ ಪ್ರಕಾರ ಡಿಂಪಿಯನ್ನು ವರಿಸಿದ್ದೆ. ಆದರೆ ರಾಖಿ ಸಾವಂತ್ ಆ ರೀತಿ ಮಾಡಿಲ್ಲ. ಆಕೆಗೆ ಶಿಕ್ಷೆಯಾಗಲೇಬೇಕು ಎಂದಿದ್ದಾರೆ ರಾಹುಲ್. (ಏಜೆನ್ಸೀಸ್)

  English summary
  Soon after the news of Veena Malik's 26-year jail sentence spread like wildfire in India, a district court in Maharashtra has summoned Rakhi Sawant for allegedly mocking the tradition of Swayamvar on an Indian television channel in 2009.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X