ಪ್ರಭಾಸ್ ಬಾಹುಬಲಿ ಚಿತ್ರವನ್ನ ಹಿಂದಿಕ್ಕಿದ 'ಡ್ರೀಮ್ ಗರ್ಲ್'

ಬಾಲಿವುಡ್ ನಟ ಆಯುಷ್ಮಾನ್ ಖುರಾನ್ ನಟನೆಯ ಡ್ರೀಮ್ ಗರ್ಲ್ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡ್ತಿದೆ. ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಮೂರನೇ ವಾರಾಂತ್ಯಕ್ಕೆ ದಾಖಲೆಯ ಗಳಿಕೆ ಕಂಡಿದೆ.

ಡ್ರೀಮ್ ಗರ್ಲ್ ಸಿನಿಮಾ ಮೂರನೇ ಶನಿವಾರ 6.30 ಕೋಟಿ ಬಾಚಿಕೊಂಡಿದೆ. ಈ ಮೂಲಕ 16 ದಿನದಲ್ಲಿ ಒಟ್ಟು 120.50 ಕೋಟಿ ಗಳಿಕೆ ಕಂಡಿದೆ. ಭಾನುವಾರದ ಗಳಿಕೆ ಮೇಲೆ ಹೆಚ್ಚು ನಿರೀಕ್ಷೆ ಇದ್ದು, 130 ಕೋಟಿ ದಾಟುವ ನಿರೀಕ್ಷೆ ಇದೆ.

ಬಾಹುಬಲಿ ದಿ ಬಿಗಿನಿಂಗ್ ಹಿಂದಿ ಸಿನಿಮಾ ಒಟ್ಟಾರೆ ಕಲೆಕ್ಷನ್ 120 ಕೋಟಿಯಿದ್ದು, ಈ ದಾಖಲೆಯನ್ನ 16 ದಿನದಲ್ಲಿ ಡ್ರೀಮ್ ಗರ್ಲ್ ಬ್ರೇಕ್ ಮಾಡಿದೆ.

dream-girl-movie-beat-baahubali-collection

ಜಬ್ ತಕ್ ಹೈ ಜಾನ್ (120.65 ಕೋಟಿ), ಟ್ಯೂಬ್ ಲೈಟ್ (121.25 ಕೋಟಿ), ಅಗ್ನಿಪತ್ (123.05 ಕೋಟಿ), ರಾಝೀ (123.17 ಕೋಟಿ), ಕಬಾಲಿ (126.58 ಕೋಟಿ), ರುಸ್ತುಂ (127.49 ಕೋಟಿ), ಏರ್ ಲಿಫ್ಟ್ (129 ಕೋಟಿ) ದಾಖಲೆ ಹೊಂದಿದೆ. ಈ ಚಿತ್ರಗಳ ದಾಖಲೆಯನ್ನ ಡ್ರೀಮ್ ಗರ್ಲ್ ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ.

ರಾಜ್ ಶಾಂದ್ಲಿಯಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಆಯುಷ್ಮಾನ್ ಖುರಾನ್, ನುಸ್ರುತ್, ಅನು ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ಶೋಭ ಕಪೂರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 13 ರಂದು ಈ ಚಿತ್ರ ತೆರೆಕಂಡಿತ್ತು.

English summary
Ayushmann khurrana starrer dream girl movie beats baahubali collection in 16 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X