For Quick Alerts
  ALLOW NOTIFICATIONS  
  For Daily Alerts

  ಸೆಟ್ಟೇರುವ ಮುನ್ನವೇ ಹಿಂದಿ 'ದೃಶ್ಯಂ 2'ಗೆ ಕಾನೂನು ತೊಡಕು

  |

  ಮಲಯಾಳಂನ 'ದೃಶ್ಯಂ 2' ಸಿನಿಮಾದ ಹಿಂದಿ ರೀಮೇಕ್ ಹಕ್ಕನ್ನು ಪನೋರಮಾ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಸಂಸ್ಥೆಯು ಖರೀದಿಸಿದ್ದಾಗಿ ನಿನ್ನೆಯಷ್ಟೆ ಘೋಷಿಸಿಕೊಂಡಿತ್ತು. ಅದಾದ ಒಂದೇ ದಿನದಲ್ಲಿ ಸಿನಿಮಾಕ್ಕೆ ಕಾನೂನು ತೊಡಕು ಎದುರಾಗಿದೆ.

  ಪೊನೊರಮಾ ನಿರ್ಮಾಣ ಸಂಸ್ಥೆ ವಿರುದ್ಧ ಅದರ ಮಾಜಿ ಪಾಲುದಾರ ಸಂಸ್ಥೆ ವಯಕ್ಕಾಂ 18 ಮೋಷನ್ ಪಿಕ್ಚರ್ಸ್‌ ಕಾನೂನು ಹೋರಾಟಕ್ಕೆ ಮುಂದಾಗಿದೆ.

  ಈ ಹಿಂದೆ ಅಜಯ್ ದೇವಗನ್ ನಟಿಸಿದ್ದ 'ದೃಶ್ಯಂ' ಹಿಂದಿ ಸಿನಿಮಾವನ್ನು ಪೊನೊರಮಾ ಹಾಗೂ ವಯಕ್ಕಾಂ 18 ಸಂಸ್ಥೆ ಒಟ್ಟಿಗೆ ನಿರ್ಮಾಣ ಮಾಡಿತ್ತು. ಆದರೆ ಈ ಬಾರಿ ಪೊನೊರಮಾ ಒಂದೇ ಮಲಯಾಳಂ ಹಕ್ಕನ್ನು ಖರೀದಿಸಿದ್ದು ಏಕಾಂಗಿಯಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ವಯಕ್ಕಾಂ 18 ಆಕ್ಷೇಪ ವ್ಯಕ್ತಪಡಿಸಿದೆ.

  ಪೊನೊರಮಾ ನಿರ್ಮಾಣ ಸಂಸ್ಥೆಯ ಮಂಗತ್ ಪಾಠಕ್ ಹಾಗೂ ಅಭಿಷೆಕ್ ಪಾಠಕ್‌ಗೆ ನೊಟೀಸ್ ಕಳಿಸಿರುವ ವಯಕ್ಕಾಂ 18, 'ದೃಶ್ಯಂ 2' ಸಿನಿಮಾವನ್ನು ನೀವು ಒಬ್ಬರೇ ಅಥವಾ ಇನ್ನೊಬ್ಬರ ಜೊತೆ ನಿರ್ಮಾಣ ಮಾಡುವಂತಿಲ್ಲ. ಈ ಹಿಂದೆ ನಮ್ಮ ನಡುವೆ ಆಗಿರುವ ಪಾಲುದಾರಿಕೆ ಒಪ್ಪಂದವನ್ನು ಮುಂದುವರೆಸಬೇಕು ಎಂದು ಹೇಳಿದೆ.

  ಈ ಬಗ್ಗೆ ಮಂಗತ್ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲವಾದರೂ, 'ನಾವು 'ದೃಶ್ಯಂ2' ಸಿನಿಮಾದ ಹಿಂದಿ ರೀಮೇಕ್ ಹಕ್ಕಿನ ಅಧಿಕೃತ ಮಾಲೀಕರಾಗಿದ್ದು, 'ದೃಶ್ಯಂ2' ಕತೆಯನ್ನು ಇನ್ನಷ್ಟು ತೀವ್ರತೆಯಿಂದ ಹೇಳಲು ಇಚ್ಛಿಸಿದ್ದೇವೆ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಿದ್ದೇವೆ' ಎಂದಿದ್ದಾರೆ.

  ಮಲಯಾಳಂನಲ್ಲಿ ಜೀತು ಜೋಸೆಫ್ ನಿರ್ದೇಶನ ಮಾಡಿರುವ 'ದೃಶ್ಯಂ2' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ್ದರು. ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.

  Meghana Raj Birthday ಫೋನ್ ಮಾಡಿ ದರ್ಶನ್ ಹೇಳಿದ್ದೇನು? | Filmibeat Kannada

  ಇದೇ ಸಿನಿಮಾವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿಯೂ ನಿರ್ಮಾಣ ಆಗುತ್ತಿದೆ. ಕನ್ನಡದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ.

  English summary
  Drishyam 2 Hindi remake gets into legal trouble with Viacom 18 motion pictures. Leagel notice sent to Ponorama International production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X