For Quick Alerts
  ALLOW NOTIFICATIONS  
  For Daily Alerts

  ಕರಣ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ರಾ ದೀಪಿಕಾ, ವಿಕ್ಕಿ, ರಣ್ಬೀರ್.!

  |

  ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಪಾರ್ಟಿಯೊಂದನ್ನ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್, ಅರ್ಜುನ್ ಕಪೂರ್, ವಿಕ್ಕಿ ಕೌಶಲ್, ಶಾಹೀದ್ ಕಪೂರ್, ವರುಣ್ ಧವನ್, ಸಿನಿ ಮೇಕರ್ ಅಯನ್ ಮುಖರ್ಜಿ, ಜೋಯಾ ಅಖ್ತರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

  ಈ ಪಾರ್ಟಿ ಯಾವ ಉದ್ದೇಶದಿಂದ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಪಾರ್ಟಿ ವಿಡಿಯೋವನ್ನ ಕರಣ್ ಜೋಹರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ನಟಿ ದೀಪಿಕಾ ಪಡುಕೋಣೆ ವಿರುದ್ಧ ಸಿಟ್ಟಿಗೆದ್ದ ಅಭಿಮಾನಿಗಳು

  ಈ ವಿಡಿಯೋ ನೋಡಿದ ಬಳಿಕ ಶಿರೋಮಣಿ ಶಾಸಕ ಮಜಿಂದರ್ ಸಿರ್ಸಾ ಅವರು, ಬಾಲಿವುಡ್ ಸ್ಟಾರ್ ಮಾಡಿರುವ ಪಾರ್ಟಿಯಲ್ಲಿ ಎಲ್ಲರೂ ಡಗ್ರ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಈ ವಿಷ್ಯ ಈಗ ಹಿಂದಿ ಚಿತ್ರರಂಗದಲ್ಲಿ ತಲ್ಲಣ ಎಬ್ಬಿಸಿದೆ. ಅಷ್ಟಕ್ಕೂ, ಆ ವಿಡಿಯೋದಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಸುಳಿವು ಇದ್ಯಾ? ನಿಜಕ್ಕೂ ಆ ಸ್ಟಾರ್ಸ್ ಡ್ರಗ್ಸ್ ಸೇವಿಸಿದ್ದಾರಾ? ಏನಿದು ಪ್ರಕರಣ? ಮುಂದೆ ಓದಿ.....

  ಎಂಎಲ್ಎ ಆರೋಪ ಸುಳ್ಳು ಎಂದ ಕಾಂಗ್ರೆಸ್ ನಾಯಕ

  ಎಂಎಲ್ಎ ಆರೋಪ ಸುಳ್ಳು ಎಂದ ಕಾಂಗ್ರೆಸ್ ನಾಯಕ

  ಶಿರೋಮಣಿ ಎಂಎಲ್ಎ ಮಜಿಂದರ್ ಸಿರ್ಸಾ ಅವರು ಮಾಡಿದ ಆರೋಪವನ್ನ ಕಾಂಗ್ರೆಸ್ ನಾಯಕ ಮಿಲಿಂದ್ ಡಿಯ್ರೋ ಅಲ್ಲೆಗಳೆದಿದ್ದಾರೆ. ಆ ಪಾರ್ಟಿಗೆ ನನ್ನ ಪತ್ನಿಯೂ ಹೋಗಿದ್ದಳು. (ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ) ಅಲ್ಲಿ ಯಾರು ಡ್ರಗ್ಸ್ ಸೇವನೆ ಮಾಡಿಲ್ಲ. ನೀವು ಸುಮ್ಮನೆ ಸುಳ್ಳು ಸುದ್ದಿ ಹರಡಿಸುತ್ತಿದ್ದೀರಾ. ಇದಕ್ಕೆ ನೀವು ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

  ದೀಪಿಕಾ ಪಡುಕೋಣೆ ಧರಿಸಿದ್ದ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ ಇಷ್ಟೊಂದಾ.!

  ವಿಕ್ಕಿ ಕೌಶಲ್ ಫೋಟೋ ವೈರಲ್

  ವಿಕ್ಕಿ ಕೌಶಲ್ ಫೋಟೋ ವೈರಲ್

  ಆ ಪಾರ್ಟಿಯಲ್ಲಿ ಸ್ಟಾರ್ಸ್ ಡ್ರಗ್ಸ್ ಸೇವಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಉರಿ ಚಿತ್ರದ ನಟ ವಿಕ್ಕಿ ಕೌಶಲ್ ಅವರ ಫೊಟೋವೊಂದು ವೈರಲ್ ಆಗಿದೆ. ವಿಕ್ಕಿ ಕೌಶಲ್ ಪಕ್ಕದಲ್ಲಿ ಬಿಳಿಯ ಬಣ್ಣದ ವಸ್ತುಯೊಂದು ಬಿಂಬಿಸುತ್ತಿರುವಂತೆ ಆ ಫೋಟೋದಲ್ಲಿ ಕಾಣಿಸುತ್ತಿದೆ. ಮೇಲ್ನೋಟಕ್ಕೆ ಅದು ಪೌಡರ್ ರೀತಿ ಇದೆ ಎಂದು ಚರ್ಚೆಯಾಗ್ತಿದೆ. ನಿಜ ಏನಪ್ಪಾ ಅಂದ್ರೆ ವಿಡಿಯೋವನ್ನ ಸೂಕ್ಷ್ಮವಾಗಿ ನೋಡಿದ್ರೆ ಅದು ಬೆಳಕಿನ ಪ್ರತಿಬಿಂಬ ಅಷ್ಟೇ.

  ಯುವರಾಜ್ ಸಿಂಗ್ ಜೊತೆ ಅಂಟಿಕೊಂಡಿದ್ದ ಏಳು ನಾಯಕಿಯರ ಹೆಸರು.!

  ಸ್ಟಾರ್ ಗಳಿಗೆ ಅಭಿಮಾನಿಗಳು ಬೆಂಬಲ

  ಸ್ಟಾರ್ ಗಳಿಗೆ ಅಭಿಮಾನಿಗಳು ಬೆಂಬಲ

  ವಿಕ್ಕಿ ಕೌಶಲ್ ಮತ್ತು ಬಾಲಿವುಡ್ ಸ್ಟಾರ್ ಗಳು ಮಾಡಿರುವ ಪಾರ್ಟಿ ವಿಡಿಯೋಗೆ ಸಂಬಂಧಿಸಿದಂತೆ ಅಭಿಮಾನಿಗಳು ತಾರೆಯರ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಇರುವುದು ಡ್ರಗ್ಸ್ ಅಲ್ಲ, ಅದು ಬೆಳಕಿನ ಪ್ರತಿಬಿಂಬ ಅಷ್ಟೇ. ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಇದನ್ನ ದುರ್ಬಳಕೆ ಮಾಡಲಾಗುತ್ತಿದೆ ಅಷ್ಟೇ ಎಂದು ಕಿಡಿಕಾರಿದ್ದಾರೆ.

  ಮಾಜಿ ಪ್ರೇಮಿಗಳು ಹಾಜರ್

  ಮಾಜಿ ಪ್ರೇಮಿಗಳು ಹಾಜರ್

  ಕರಣ್ ಜೋಹರ್ ಆಯೋಜಿಸಿದ್ದ ಈ ಪಾರ್ಟಿಯಲ್ಲಿ ಬಾಲಿವುಡ್ ಮಾಜಿ ಪ್ರೇಮಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ಬೀರ್ ಕಪೂರ್ ಬಂದಿದ್ದರು. ಆದ್ರೆ, ದೀಪಿಕಾ ಪತಿ ರಣ್ವೀರ್ ಸಿಂಗ್ ಮತ್ತು ರಣ್ಬೀರ್ ಕಪೂರ್ ಪ್ರೇಯಸಿ ಆಲಿಯಾ ಭಟ್ ಭಾಗಿಯಾಗಿಲ್ಲ.

  English summary
  Bollywood producer karan johar organized party with Deepika padukone, vicky kaushal, ranbir kapoor, shahid kapoor and some others. now, this party facing Drugs Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X