ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಮನೆಯಲ್ಲಿ ಡ್ರಗ್ಸ್ ಪತ್ತೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಈಗಾಗಲೇ ಎನ್‌ಸಿಬಿ ಇಂದ ವಿಚಾರಣೆ ಒಳಗಾಗಿದ್ದಾರೆ.

ದೀಪಿಕಾ ಪಡುಕೋಣೆ ಎನ್‌ಸಿಬಿ ಇಂದ ವಿಚಾರಣೆಗೆ ಒಳಗಾದ ನಂತರ ದೀಪಿಕಾ ಗೆ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡಿತ್ತು. ವಿಚಾರಣೆಗೆ ಒಳಗಾಗಿ ತಿಂಗಳಾದರೂ ಎನ್‌ಸಿಬಿ ದೀಪಿಕಾ ವಿಷಯದಲ್ಲಿ ಮುಂದಿನ ನಡೆ ಮಾಡದಿರುವುದು ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿತ್ತು.

ಆದರೆ ಈಗ ಹಠಾತ್ತನೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್‌ಗೆ ಎನ್‌ಸಿಬಿ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ ಕರಿಶ್ಮಾ ನಾಪತ್ತೆಯಾಗಿದ್ದಾರೆ.

ಕರಿಶ್ಮಾ ಮನೆಯಲ್ಲಿ ಮಾದಕ ವಸ್ತು ಪತ್ತೆ

ಕರಿಶ್ಮಾ ಮನೆಯಲ್ಲಿ ಮಾದಕ ವಸ್ತು ಪತ್ತೆ

ಇಂದು (ಅಕ್ಟೋಬರ್ 27) ರಂದು ಎನ್‌ಸಿಬಿ ಅಧಿಕಾರಿಗಳು ಕರಿಶ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರೀಶ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವ ಡ್ರಗ್ಸ್ 'ವಾಣಿಜ್ಯ ಪ್ರಮಾಣ'ದಲ್ಲಿಲ್ಲ ಎನ್ನಲಾಗುತ್ತಿದೆ.

ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ

ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ

ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ, ಆಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಅವರ ನಿವಾಸದ ಬಾಗಿಲಿಗೆ ಎನ್‌ಸಿಬಿ ಸಮನ್ಸ್ ಅನ್ನು ಅಂಟಿಸಲಾಗಿದೆ. ಕರಿಶ್ಮಾ ಅವರು ಸಮನ್ಸ್‌ಗೆ ಪ್ರತಿಕ್ರಿಯಿಸಲಿಲ್ಲವಾದರೆ ಆಕೆಯ ಬಂಧನಕ್ಕೆ ಎನ್‌ಸಿಬಿ ಮನವಿ ಮಾಡಲಿದೆ.

ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದೆ

ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದೆ

ದೀಪಿಕಾ ಪಡುಕೋಣೆಯ ವಿಚಾರಣೆಗೆ ಮುನ್ನಾ ಕಳೆದ ತಿಂಗಳು ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಿದ್ದಾರೆ ಎನ್‌ಸಿಬಿ ಅಧಿಕಾರಿಗಳು, ಈಗ ಕರಿಶ್ಮಾ ನಿವಾಸದಲ್ಲಿ ಮಾದಕ ವಸ್ತು ಸಿಕ್ಕಿರುವ ಕಾರಣ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ವಾಟ್ಸ್‌ಆಪ್ ಚಾಟ್‌ನಲ್ಲಿ ದೀಪಿಕಾ ಪಡುಕೋಣೆ ಹೆಸರು

ವಾಟ್ಸ್‌ಆಪ್ ಚಾಟ್‌ನಲ್ಲಿ ದೀಪಿಕಾ ಪಡುಕೋಣೆ ಹೆಸರು

ಸುಶಾಂತ್ ಸಿಂಗ್‌ನ ವ್ಯವಸ್ಥಾಪಕಿ ಜಯಾ ಶಾ ಅವರ ವಾಟ್ಸ್‌ಆಪ್ ಸಂಭಾಷಣೆಯಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರ ಹೆಸರುಗಳು ಪತ್ತೆಯಾದ ಕಾರಣ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್ ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು.

More from Filmibeat

English summary
Drugs found in Deepika Padukone's manager Karishma Prakash's house. NCB issues Summons.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X