twitter
    For Quick Alerts
    ALLOW NOTIFICATIONS  
    For Daily Alerts

    ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಮನೆಯಲ್ಲಿ ಡ್ರಗ್ಸ್ ಪತ್ತೆ

    |

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಈಗಾಗಲೇ ಎನ್‌ಸಿಬಿ ಇಂದ ವಿಚಾರಣೆ ಒಳಗಾಗಿದ್ದಾರೆ.

    ದೀಪಿಕಾ ಪಡುಕೋಣೆ ಎನ್‌ಸಿಬಿ ಇಂದ ವಿಚಾರಣೆಗೆ ಒಳಗಾದ ನಂತರ ದೀಪಿಕಾ ಗೆ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡಿತ್ತು. ವಿಚಾರಣೆಗೆ ಒಳಗಾಗಿ ತಿಂಗಳಾದರೂ ಎನ್‌ಸಿಬಿ ದೀಪಿಕಾ ವಿಷಯದಲ್ಲಿ ಮುಂದಿನ ನಡೆ ಮಾಡದಿರುವುದು ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿತ್ತು.

    ನರೇಗಾ ಅಡಿ ಕೂಲಿ ಹಣ ಪಡೆದಿರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್!ನರೇಗಾ ಅಡಿ ಕೂಲಿ ಹಣ ಪಡೆದಿರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್!

    ಆದರೆ ಈಗ ಹಠಾತ್ತನೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್‌ಗೆ ಎನ್‌ಸಿಬಿ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ ಕರಿಶ್ಮಾ ನಾಪತ್ತೆಯಾಗಿದ್ದಾರೆ.

    ಕರಿಶ್ಮಾ ಮನೆಯಲ್ಲಿ ಮಾದಕ ವಸ್ತು ಪತ್ತೆ

    ಕರಿಶ್ಮಾ ಮನೆಯಲ್ಲಿ ಮಾದಕ ವಸ್ತು ಪತ್ತೆ

    ಇಂದು (ಅಕ್ಟೋಬರ್ 27) ರಂದು ಎನ್‌ಸಿಬಿ ಅಧಿಕಾರಿಗಳು ಕರಿಶ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರೀಶ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವ ಡ್ರಗ್ಸ್ 'ವಾಣಿಜ್ಯ ಪ್ರಮಾಣ'ದಲ್ಲಿಲ್ಲ ಎನ್ನಲಾಗುತ್ತಿದೆ.

    ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ

    ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ

    ಕರಿಶ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ, ಆಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಅವರ ನಿವಾಸದ ಬಾಗಿಲಿಗೆ ಎನ್‌ಸಿಬಿ ಸಮನ್ಸ್ ಅನ್ನು ಅಂಟಿಸಲಾಗಿದೆ. ಕರಿಶ್ಮಾ ಅವರು ಸಮನ್ಸ್‌ಗೆ ಪ್ರತಿಕ್ರಿಯಿಸಲಿಲ್ಲವಾದರೆ ಆಕೆಯ ಬಂಧನಕ್ಕೆ ಎನ್‌ಸಿಬಿ ಮನವಿ ಮಾಡಲಿದೆ.

    ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧ ಕಪೂರ್‌ಗೆ ಕ್ಲೀನ್ ಚಿಟ್?ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧ ಕಪೂರ್‌ಗೆ ಕ್ಲೀನ್ ಚಿಟ್?

    ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದೆ

    ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದೆ

    ದೀಪಿಕಾ ಪಡುಕೋಣೆಯ ವಿಚಾರಣೆಗೆ ಮುನ್ನಾ ಕಳೆದ ತಿಂಗಳು ಕರಿಶ್ಮಾ ಪ್ರಕಾಶ್ ಅನ್ನು ಒಂದು ಬಾರಿ ವಿಚಾರಣೆ ಮಾಡಿದ್ದಾರೆ ಎನ್‌ಸಿಬಿ ಅಧಿಕಾರಿಗಳು, ಈಗ ಕರಿಶ್ಮಾ ನಿವಾಸದಲ್ಲಿ ಮಾದಕ ವಸ್ತು ಸಿಕ್ಕಿರುವ ಕಾರಣ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    ವಾಟ್ಸ್‌ಆಪ್ ಚಾಟ್‌ನಲ್ಲಿ ದೀಪಿಕಾ ಪಡುಕೋಣೆ ಹೆಸರು

    ವಾಟ್ಸ್‌ಆಪ್ ಚಾಟ್‌ನಲ್ಲಿ ದೀಪಿಕಾ ಪಡುಕೋಣೆ ಹೆಸರು

    ಸುಶಾಂತ್ ಸಿಂಗ್‌ನ ವ್ಯವಸ್ಥಾಪಕಿ ಜಯಾ ಶಾ ಅವರ ವಾಟ್ಸ್‌ಆಪ್ ಸಂಭಾಷಣೆಯಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರ ಹೆಸರುಗಳು ಪತ್ತೆಯಾದ ಕಾರಣ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್ ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು.

    ಮೋಸ್ಟ್ ಬ್ಯೂಟಿಫುಲ್ ಸೆಲೆಬ್ರಿಟಿ ದೀಪಿಕಾ, ಗೌರವಾನ್ವಿತ ವ್ಯಕ್ತಿ ಅಮಿತಾಭ್ಮೋಸ್ಟ್ ಬ್ಯೂಟಿಫುಲ್ ಸೆಲೆಬ್ರಿಟಿ ದೀಪಿಕಾ, ಗೌರವಾನ್ವಿತ ವ್ಯಕ್ತಿ ಅಮಿತಾಭ್

    English summary
    Drugs found in Deepika Padukone's manager Karishma Prakash's house. NCB issues Summons.
    Wednesday, October 28, 2020, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X