NCB ನೋಟಿಸ್ ನೀಡಿ 3 ದಿನಗಳಾದರೂ ಪತ್ತೆಯಾಗದ ದೀಪಿಕಾ ಪಡುಕೋಣೆ ಮ್ಯಾನೇಜರ್
NCB ನೋಟಿಸ್ ನೀಡಿದ ಬೆನ್ನಲ್ಲೇ ನಾಪತ್ತೆಯಾಗಿದ್ದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ 3 ದಿನಗಳಾದರೂ ಪತ್ತೆಯಾಗಿಲ್ಲ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಗೆ ಮತ್ತೆ ಎನ್‌ಸಿಬಿ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಎನ್ ಸಿ ಬಿ ನೋಟಿಸ್ ನೀಡಿದ ಬೆನ್ನಲೇ ವ್ಯವಸ್ಥಾಪಕಿ ಕರಿಷ್ಮಾ ನಾಪತ್ತೆಯಾಗಿದ್ದು ಇನ್ನೂ ಎನ್ ಸಿ ಬಿ ಸಂಪರ್ಕಕ್ಕೆ ಸಿಕಿಲ್ಲ. ಇದರಿಂದ ಕರಿಷ್ಮಾ ಮತ್ತಷ್ಟು ಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 27 ರಂದು ಎನ್‌ಸಿಬಿ ಅಧಿಕಾರಿಗಳು ಕರಿಷ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರಿಷ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿತ್ತು.
ಕರಿಷ್ಮಾ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿರುವುದರಿಂದ ಎನ್ ಸಿ ಬಿ ಅವರ ನಿವಾಸದ ಬಾಗಿಲಿಗೆ ಎನ್‌ಸಿಬಿ ಸಮನ್ಸ್ ಅಂಟಿಸಿದೆ. ಕರಿಷ್ಮಾ ಸಮನ್ಸ್ ಗೆ ಪ್ರತಿಕ್ರಿಯಿಸಲಿಲ್ಲವಾದರೆ ಆಕೆಯ ಬಂಧನಕ್ಕೆ ಎನ್‌ಸಿಬಿ ಮನವಿ ಮಾಡಲಿದೆ.

ಈ ಮೊದಲು ದೀಪಿಕಾ ಪಡುಕೋಣೆ ಮತ್ತು ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಇದೀಗ ಎರಡನೇ ಬಾರಿ ಎನ್ ಸಿ ಬಿ ಕರಿಷ್ಮಾಗೆ ನೋಟಿಸ್ ನೀಡಿದೆ. ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಬಾಲಿವುಡ್ ನ ಖ್ಯಾತ ನಟಿಯರಾದ ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಲ್ಲಾ ನಟಿಯರಿಗೂ ಎನ್ ಸಿ ಬಿ ಯಿಂದ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ.


Click it and Unblock the Notifications











