ಪ್ರಚಾರಕ್ಕೆ ಹೊಸ ಹೊಸ ಸರ್ಕಸ್, ಸಾಕು ಬಿಡಮ್ಮಾ ಎಷ್ಟು ಅಂತ ಕುಡಿದು ತೂರಾಡಿಕೊಂಡು ಹೋಗ್ತೀಯಾ...?

ಸೆಲೆಬ್ರೆಟಿಗಳು ಏನೋ ಮಾಡಲು ಹೋಗಿ ಮತ್ತೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ, ಮತ್ತೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ನಾಟಕೀಯವಾಗಿ ಪರಾರಿಯಾಗಿರುತ್ತಾರೆ. ಆದರೆ ಉರ್ಫಿ ಜಾವೇದ್ ಮಾತ್ರ ಇದಕ್ಕೆ ತದ್ವಿರುದ್ಧ.

ಯಾರೇನೇ ಅಂದುಕೊಳ್ಳಲಿ.. ನಾನು ಇರುವುದೇ ಹೀಗೆ ಎಂದು ಚೋಟುದ್ದ ಡ್ರೆಸ್‌ಗಳಲ್ಲಿ .. ಚಿತ್ರ ವಿಚಿತ್ರ ಕಾಸ್ಟೂಮ್‌ಗಳಲ್ಲಿ.. ಕ್ಯಾಮರಾದವರಿಗೆ ದರ್ಶನ ಕೊಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿಸಿಕೊಂಡ ಉರ್ಫಿಗೆ ಬಹುಶ: ಕ್ಯಾಮರಾ ಗುಂಪು ಒಂದು ದಿನವೂ ತನ್ನನ್ನು ಹಿಂಬಾಲಿಸದೇ ಇದ್ದರೆ ನಿದ್ದೆ ಬರುವುದಿಲ್ಲವೇನೋ. ಇಂಥ ಉರ್ಫಿ ಜಾವೇದ್‌ಗೆ ಈಗ ದಿನನಿತ್ಯ ಎಣ್ಣೆ ಹೊಡೆಯುವ ಚಟ ಅಂಟಿಕೊಂಡತೆ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊನ್ನೆಯಷ್ಟೇ ಕಂಠಪೂರ್ತಿ ಕುಡಿದು ತೂರಾಡುತ್ತಾ ಪಬ್‌ವೊಂದರಿಂದ ಆಚೆ ಬಂದಿದ್ದ ಉರ್ಫಿ ಇದೀಗ ಮತ್ತೊಮ್ಮೆ ಕುಡಿದ ಮತ್ತಿನಲ್ಲಿ ತೂರಾಡಿ ವಾಲಾಡಿದ್ದಾರೆ.

Drunk Urfi Javed Struggles To Walk After Partying In Mumbai Neitizens Calls Her Drama Queen

ಹೌದು. ಸಾಮಾನ್ಯವಾಗಿ ವಾರಾಂತ್ಯ ಬಂದರೆ ಸಾಕು, ಜನ ಸಾಮಾನ್ಯರೇ.. ಪಬ್ಬು-ಪಾರ್ಟಿ ಅಂತೆಲ್ಲ ಮಜಾ ಮಾಡುತ್ತಾರೆ. ತಮ್ಮ ಪ್ರೀತಿ ಪಾತ್ರರ ಜೊತೆ ಕಾಲ ಕಳಿಯುತ್ತಾರೆ. ಇನ್ನೂ.. ಸೆಲೆಬ್ರೀಟಿಗಳ ಕಥೆ ಕೇಳ್ಬೇಕಾ. ಮಬ್ಬುಗತ್ತಲು ಅನೇಕರ ಬದುಕಿನ ಬಹು ಮುಖ್ಯವಾಗಿರುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ .. ಉರ್ಫಿ ಜಾವೇದ್, ಪಿಂಕ್ ಶಾರ್ಟ್ ಡ್ರೆಸ್ ಧರಿಸಿ ಪಾರ್ಟಿ ಮಾಡಿದಂತೆ ಇದೆ. ಹೀಗಾಗಿಯೇ ಸರಿಯಾಗಿ ಹೆಜ್ಜೆ ಇಡಲು ಕೂಡ ಪರದಾಡಿರುವ ಉರ್ಫಿ, ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿಯೇ ಕಾರ್‌ವರೆಗೂ ನಡೆದುಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯದಲ್ಲಿ ಕ್ಯಾಮರಾ ಕಂಡು ತೊದಲುತ್ತಾ ಕ್ಷಮೆಯನ್ನೂ ಕೇಳಿದ್ದಾರೆ. ನನ್ನ ಕಾರು ಎಲ್ಲಿದೆ.. ನಾನು ಕುಡಿದಿದ್ದೇನೆ ಎಂದೆಲ್ಲ ಬಡಬಡಾಯಿಸಿದ್ದಾರೆ

ಸದ್ಯಕ್ಕೆ ಉರ್ಫಿಯ ಈ ಎಣ್ಣೆ ಏಟಿನ ಬಗ್ಗೆ ಬಾಲಿವುಡ್‌ನಲ್ಲಿ ವ್ಯಾಪಕವಾದ ಚರ್ಚೆ ಶುರುವಾಗಿದೆ. ಕೆಲವರು ಪ್ರಚಾರಕ್ಕಾಗಿ ಇದೆಲ್ಲ ಉರ್ಫಿಯ ಹೊಸ ಡ್ರಾಮಾ ಎನ್ನುತ್ತಿದ್ದರೆ, ಇನ್ನೂ ಕೆಲವರು ಇಲ್ಲ ನಿಜಕ್ಕೂ ಉರ್ಫಿ ಕುಡಿದಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಉರ್ಫಿ ಜಾವೇದ್‌ ಅವರಿಗೆ ಯಾಕಿಷ್ಟು ಸ್ಕೋಪ್ ಕೊಡ್ತೀರಾ ಎಂದರೆ, ಇನ್ನೂ ಕೆಲವರು ತಾರೆಯರಿಗೂ ವ್ಯೆಯಕ್ತಿಕ ಬದುಕು ಇರುತ್ತೆ ಅವರ ಖಾಸಗಿ ಬದುಕಿಗೆ ಗೌರವ ಕೊಡಿ ಎಂದಿದ್ದಾರೆ. ಇನ್ನೂ ಕೆಲವರು ಎಣ್ಣೆ ಹೊಡೆದು ಕದ್ದು ಮುಚ್ಚಿ ಓಡಾಡುವ ಸೆಲೆಬ್ರೀಟಿಗಳ ನಡುವೆ, ವಾರಾಂತ್ಯಕ್ಕೆ ಹೀಗೆ ಕುಡಿದು ತೂರಾಡೋದಕ್ಕೂ ಧಮ್ ಬೇಕು ಅನ್ನುತ್ತಿದ್ದಾರೆ.

ಉಳಿದಂತೆ ಉರ್ಫಿ ಜಾವೇದ್ ಇತ್ತೀಚೆಗೆ ಏಕ್ತಾ ಕಪೂರ್ ನಿರ್ಮಾಣದ ಲವ್ ಸೆಕ್ಸ್ ಔರ್ ಧೋಖಾ 2 ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್‌ನ್ನ ಪ್ರವೇಶಿಸಿದ್ದರು. ಆದರೆ ಆ ಚಿತ್ರ ಬಂದಿದ್ದು ಹೋಗಿದ್ದು ಗೊತ್ತಾಗಲೇ ಇಲ್ಲ. ಉರ್ಫಿಗೆ ಬೇಕಿದ್ದ ಹೆಸರು ಕೂಡ ಸಿಗಲಿಲ್ಲ. ಇಂತಹ ಉರ್ಫಿ ಕೈಯಲ್ಲಿ ಸದ್ಯಕ್ಕೆ ಯಾವ ಸಿನಿಮಾ ಕೂಡ ಇಲ್ಲ. ಹೀಗಾಗಿಯೇ ಬಾಲಿವುಡ್‌ನವರ ಗಮನ ಸೆಳೆಯುವ ಪ್ರಯತ್ನವನ್ನು ಉರ್ಫಿ ಈ ಮೂಲಕ ಮಾಡುತ್ತಿದ್ದಾರೆ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X