For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕಾರನ್ನು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಿಂಬಾಲಿಸಿದ್ದೇಕೆ? ಇಂಟ್ರೆಸ್ಟಿಂಗ್ ಸ್ಟೋರಿ!

  |

  ಕಳೆದ 3 ದಶಕಗಳಿಂದ ಬಾಲಿವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಆಗಿ ಸಲ್ಮಾನ್ ಖಾನ್ ಮೆರೆಯುತ್ತಿದ್ದಾರೆ. ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಲ್ಮಾನ್ ಖಾನ್‌ರಿಂದ ಪ್ರೇರಿತರಾಗಿ ಅದೆಷ್ಟೋ ಮಂದಿ ಅವರಂತೆಯೇ ಆಗಲು ಬಯಸಿದ್ದೂ ಇದೆ. ಬಾಲಿವುಡ್‌ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ಅಲೆದಾಡಿದ್ದೂ ಇದೆ.

  ಇನ್ನೊಂದು ಕಡೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರು ಅವರೊಂದಿಗೆ ಕೆಲಸ ಮಾಡುವುದಕ್ಕೆ ಹರಸಾಹಸ ಪಟ್ಟಿದ್ದೂ ಇದೆ. ಹೀಗಾಗಿ ಸಲ್ಮಾನ್ ಖಾನ್‌ರಂತೆ ಸೂಪರ್‌ಸ್ಟಾರ್ ಆಗಬೇಕು ಅಂತ ಆಸೆಪಟ್ಟವರಲ್ಲಿ ಮಲಯಾಳಂ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಕೂಡ ಒಬ್ಬರು.

  ಇತ್ತೀಚೆಗಷ್ಟೇ ದುಲ್ಖರ್ ಸಲ್ಮಾನ್ ನಟಿಸಿದ 'ಚುಪ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರು ಮೆಚ್ಚು ಕೂಡ ಸೂಚಿಸಿದ್ದಾರೆ. ಇದೇ ಸಿನಿಮಾ ಸಂದರ್ಶನದ ವೇಳೆ ದುಲ್ಖರ್ ಸಲ್ಮಾನ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. " ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ" ಅಂತ ಹೇಳಿದ್ದಾರೆ. ಇಷ್ಟೇ ಅಲ್ಲದೆ ತಮಾಷೆಯ ಸಂಗತಿಯನ್ನೂ ಕೂಡ ಹಂಚಿಕೊಂಡಿದ್ದಾರೆ.

  36 ವರ್ಷದ ದುಲ್ಖರ್ ಸಲ್ಮಾನ್ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ನೋಡಲು ಪರದಾಡಿದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಸಲ್ಮಾನ್ ಖಾನ್ ಕಾರನ್ನು ಹಿಂಬಾಲಿಸುತ್ತಿದ್ದ ಸಂಗತಿಯನ್ನು ಬಿಡಿಸಿ ವಿವರಿಸಿದ್ದಾರೆ.

  'ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ಸಲ್ಮಾನ್ ಖಾನ್‌ರನ್ನು ನೋಡುವುದು ಥ್ರಿಲ್ ಕೊಡುತ್ತಿತ್ತು. ನಾನು ಯಾವಾಗಲೂ ಸಲ್ಮಾನ್ ಖಾನ್ ಕಾರನ್ನು ಫಾಲೋ ಮಾಡುತ್ತಿದ್ದೆ. ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ. ಅವರ ಕಾರಿನ ಸಂಖ್ಯೆ 2727 ಎಂದು ಇಂದೂ ನನಗೆ ನೆನಪಿನಲ್ಲಿದೆ. ಸಲ್ಮಾನ್ ಖಾನ್ ಯಾವಾಗ ಕಾರಿನಿಂದ ಇಳಿಯುತ್ತಾರೆಂದು ನೋಡುವುದಕ್ಕೆ ನಾವು ಕಾದು ಕೂತಿರುತ್ತಿದ್ದೆವು. ಅದಕ್ಕಾಗಿ ಅವರ ಕಾರಿನ ಹಿಂದೆ ಓಡುತ್ತಿದ್ದೆವು. ಸಲ್ಮಾನ್ ಖಾನ್‌ರನ್ನು ನೋಡುವ ಅವಕಾಶ ಸಿಗುತ್ತೆ ಎಂದು ಕಾಯುತ್ತಿದ್ದೆವು. ಆದರೆ, ಆ ಅವಕಾಶ ಎಂದಿಗೂ ಸಿಗಲೇ ಇಲ್ಲ. ಅವರು ಕಾರಿನ ಮುಂದಿನ ಸೀಟಿನಲ್ಲಿ ಕೂತಿದ್ದನ್ನು ನೋಡಿದ್ದೆ ಅಷ್ಟೇ. ಅದರೆ ಎಂದಿಗೂ ಭೇಟಿ ಆಗಲೇ ಇಲ್ಲ." ಎಂದು ಸಂದರ್ಶನದಲ್ಲಿ ದುಲ್ಖರ್ ಸಲ್ಮಾನ್ ಹೇಳಿದ್ದಾರೆ.

  Dulquer Salmaan Reveals Why He Drove His Car Behind Salman Khan

  ಇದೇ ಸಂದರ್ಶನದಲ್ಲಿ ಅತೀ ಶೀಘ್ರದಲ್ಲಿ ಸಲ್ಮಾನ್ ಖಾನ್‌ರನ್ನು ಭೇಟಿ ಮಾಡುತ್ತೇನೆ ಎಂಬ ನಂಬಿಕೆಯಲ್ಲಿ ದುಲ್ಕರ್ ಸಲ್ಮಾನ್ ಇದ್ದಾರೆ. ಸದ್ಯ ದುಲ್ಖರ್ ನಟಿಸಿದ 'ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್' ಬಿಡುಗಡೆಯಾಗಿದೆ. ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್, ಪೂಜಾ ಭಟ್ ಮತ್ತು ಧನ್ವಂತ್ರಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Dulquer Salmaan Reveals Why He Drove His Car Behind Salman Khan, Know More.
  Wednesday, September 28, 2022, 0:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X