ಮತ್ತೆ ಬಾಲಿವುಡ್‌ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್‌ ರ ಖ್ಯಾತಿ ಪರಭಾಷೆಗಳಲ್ಲೂ ಪಸರಿಸಿ ಬಹುಕಾಲವೇ ಆಗಿದೆ. ಮಲಯಾಳಂನಲ್ಲಿ ಮಾತ್ರವೇ ಅಲ್ಲದೆ, ತೆಲುಗು, ತಮಿಳಿನಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ದುಲ್ಕಾರ್.

ಹಿಂದಿಯಲ್ಲಿಯೂ ಎರಡು ಸಿನಿಮಾಗಳಲ್ಲಿ ನಟಿಸಿರುವ ದುಲ್ಕರ್ ಸಲ್ಮಾನ್ ಈಗ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸೋನಂ ಕಪೂರ್ ಜೊತೆಗೆ 'ದಿ ಜೋಯಾ ಫ್ಯಾಕ್ಟರ್' ಹಾಗೂ ದಿವಂಗತ ಇರ್ಫಾನ್ ಖಾನ್ ಜೊತೆಗೆ 'ಕಾರವಾನ್' ನಲ್ಲಿ ನಟಿಸಿರುವ ದುಲ್ಕರ್ ಇದೀಗ, ಹಿಂದಿಯ ಪ್ರತಿಭಾವಂತ ನಿರ್ದೇಶಕ ಆರ್.ಬಾಲ್ಕಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

 Dulquer Salmaan Will Act In R Balkis Hindi Movie

ಚೀನಿ ಕಮ್, ಶಮಿತಾಬ್, ಪಾ, ಪ್ಯಾಡ್‌ಮ್ಯಾನ್ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್.ಬಾಲ್ಕಿ, ಥ್ರಿಲ್ಲರ್ ಕತೆಯೊಂದನ್ನು ತಯಾರು ಮಾಡಿಟ್ಟುಕೊಂಡಿದ್ದು, ಅದಕ್ಕೆ ನಾಯಕರನ್ನಾಗಿ ದುಲ್ಕರ್ ಸಲ್ಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Recommended Video

ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

ದುಲ್ಕರ್ ಸಲ್ಮಾನ್ ನಟಿಸಿರುವ 'ಕುರುಪ್ಪು' ಸಿನಿಮಾ ಬಿಗುಗಡೆಗೆ ತಯಾರಾಗಿದೆ. ಈ ನಡುವೆ ತೆಲುಗು 'ಹೇಯ್ ಸಿನಿಮಿಕಾ' ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲಿಯೂ ನಟಿಸಲಿದ್ದಾರೆ ದುಲ್ಕರ್ ಸಲ್ಮಾನ್.

More from Filmibeat

English summary
Malayalam actor Dulquer Salmaan will act in R Balki's thriller movie in Bollywood. His Kurup is ready to release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X