ನಗು-ಅಳು, ದೇಶ-ವಿದೇಶ, ಕನಸು-ಬದುಕಿನ ಭಾವನಾತ್ಮಕ ಪಯಣದ 'ಡಂಕಿ' ಟ್ರೈಲರ್ ಬಿಡುಗಡೆ
ವರ್ಷದ ಮೊದಲ ಹಿಟ್ ನೀಡಿದ್ದ ನಟ ಶಾರುಖ್ ಖಾನ್ ಈಗ ವರ್ಷದ ಕೊನೆಯ ಹಿಟ್ ನೀಡಲು ಕಾತುರದಿಂದ ಕಾಯುತ್ತಿದ್ದು, ಬಹುನಿರೀಕ್ಷಿತ 'ಡಂಕಿ' ಸಿನಿಮಾದ ಟ್ರೈಲರ್ ಮಂಗಳವಾರ (ಡಿಸೆಂಬರ್ 5) ಎಂದು ಡಂಕಿ ಡ್ರಾಪ್ 4 ಎಂದು ಬಿಡುಗಡೆ ಮಾಡಲಾಗಿದೆ. ರಾಜ್ ಕುಮಾರ್ ಹಿರಾನಿ ಜೊತೆಗೆ ನಟ ಶಾರುಖ್ ಖಾನ್ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ.
ಈಗಾಗಲೇ ಈ ವರ್ಷದಲ್ಲಿ ಎರಡು ಸೂಪರ್ ಡೂಪರ್ ಹಿಟ್ ಮಾಸ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ ಸಿನಿಮಾ ನೀಡಿರುವ ನಟ ಶಾರುಖ್ ಖಾನ್, ಈಗ ಕ್ಲಾಸ್ ಲುಕ್‌ನಲ್ಲಿ ಜನರ ಮುಂದೆ ಬಂದಿದ್ದಾರೆ. ಸ್ನೇಹ, ಪ್ರೇಮಗಳ ಭಾವನಾತ್ಮಕ ಪಯಣದಲ್ಲಿ ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಹಾಗಾದರೇ ಡಂಕಿ ಟ್ರೈಲರ್ ಹೇಗಿದೆ ಗೊತ್ತಾ?

'ಡಂಕಿ' ಟ್ರೈಲರ್ ಹೇಗಿದೆ?
ಪಠಾಣ್ ಮತ್ತು ಜವಾನ್ ಯಶಸ್ಸಿನ ನಂತರ, ಎಸ್‌ಆರ್‌ಕೆ ಅಭಿಮಾನಿಗಳು ಡಂಕಿ ಸಿನಿಮಾಗಾಗಿ ಕಾಯುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಟೀಸರ್ ಮತ್ತು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ ನಂತರ, ಮಂಗಳವಾರ ಡಂಕಿ ಟ್ರೈಲರ್ ಅನ್ನು ಡ್ರಾಪ್ 4 ಎಂದು ಬಿಡುಗಡೆ ಮಾಡಲಾಗಿದೆ.
'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ 'ಹಾರ್ಡಿ' ಎಂದು ಪಾತ್ರದಲ್ಲಿ ನಟಿಸಿದ್ದು, 1995 ರಲ್ಲಿ ಲಾಲ್ಟು ಎಂಬ ಹಳ್ಳಿಯಲ್ಲಿ ಅವರು ರೈಲಿನಿಂದ ಇಳಿಯುವ ದೃಶ್ಯದಿಮದ ಟ್ರೈಲರ್ ಆರಂಭವಾಗುತ್ತದೆ. ಇಂಗ್ಲಿಷ್ ಕಲಿಯಲು ಕಷ್ಟಪಡುವ ಸುಖಿ (ವಿಕ್ಕಿ ಕೌಶಲ್) ಮತ್ತು ಹಾರ್ಡಿಗಾಘಿ ಯಾರೊಂದಿಗಾದರೂ ಜಗಳಕ್ಕೆ ನಿಲ್ಲುವ ಮನ್ನು (ತಾಪ್ಸೀ ಪನ್ನು), ಪೈಜಾಮಾ ಮಾರಾಟ ಮಾಡುವ ಬುಜ್ಜು ಸೇರಿದಂತೆ ತನ್ನ ಸ್ನೇಹಿತರನ್ನು ಹಾರ್ಡಿ ಪರಿಚಯಿಸುತ್ತಾನೆ.

ವಿದೇಶಕ್ಕೆ ಹೋಗುವ ಆಸೆ ಇರುವವರಿಗೆ ಇಂಗ್ಲೀಷ್ ಕಲಿಸುವ ಟೀಚರ್ ಆಗಿ ಬೊಮನ್ ಇರಾನಿ ನಟಿಸಿದ್ದಾರೆ. ವಿಕ್ಕಿ ಮತ್ತು ಶಾರುಖ್ ಪಾತ್ರಗಳು ಭಾಷೆ ಬರದಿದ್ದರೂ ಕೂಡ ಆಂಗ್ಲರು ಪಂಜಾಬಿನಲ್ಲಿರುವುದು, ದೇಶವನ್ನು ಅಷ್ಟು ವರ್ಷಗವರೆಗೆ ಆಳಿದ್ದನ್ನು ನೆನಪಿಸುತ್ತಾರೆ. ವಿದೇಶಕ್ಕೆ ಹೋಗಲು ಇಂಗ್ಲೀಷ್ ಅಷ್ಟು ಅವಶ್ಯಕವೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.
ವಿದೇಶಕ್ಕೆ ಹೋಗಲು ಹಾರ್ಡಿ ಮತ್ತು ಅವನ ಸ್ನೇಹಿತರು ಗಡಿ ದಾಟುವುದು, ಅನೇಕ ಅಪಾಯಗಳನ್ನು ಎದುರಿಸುವುದು, ಸಾವಿನ ಅಂಚಿಗೆ ಹೋಗಿ ಬರುವ ಸನ್ನಿವೇಶಗಳು ಇದ್ದು, ಇದೆಲ್ಲಾ ಆಗಿ 25 ವರ್ಷಗಳ ನಂತರ ಶಾರುಖ್ ಶಾನ್ ತಾನು ಆರಂಭಿಸಿದ ಯುದ್ಧವನ್ನು ಕೊನೆ ಮಾಡುವ ಮುದುಕನಾಗಿ ಕಾಣಿಸಿಕೊಂಡಿದ್ದಾರೆ. ಡಂಕಿ ಟ್ರೈಲರ್ 3 ನಿಮಿಷ 1 ಸೆಕೆಂಡ್ ಇದೆ. ಇನ್ನು, ಶಾರುಖ್ ಖಾನ್ ಅವರ ಈ ವಯಸ್ಸಾದ ಪಾತ್ರ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದಲ್ಲಿನ ವಿಕ್ರಮ್ ರಾಥೋಡ್ ರೀತಿಯಲ್ಲಿ ಕಾಣಿಸುತ್ತದೆ. ಆದರೆ, ಅದು ಖಡಕ್ ಪಾತ್ರ ಇದು ಕೊಂಚ ಸಾಫ್ಟ್ ಪಾತ್ರದಂತಿದೆ.
ಡಂಕಿ
ನೈಜ ಘಟನೆಗಳ ಅನುಭವಗಳಿಂದ ಚಿತ್ರಿಸಲಾಗಿರುವ ಡಂಕಿ ಸಿನಿಮಾ ಪ್ರೀತಿ ಮತ್ತು ಸ್ನೇಹದ ಒಂದು ಸಾಹಸಗಾಥೆ. ಶಾರುಖ್ ಅವರ ಈ ವರ್ಷದ ಮೂರನೇ ಚಿತ್ರ. ಈ ಸಿನಿಮಾವನ್ನು ಶಾರುಖ್ ಮತ್ತು ಪತ್ನಿ ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಜಿಯೋ ಸ್ಟುಡಿಯೋಸ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿರ್ಮಿಸಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications









